ವಿರಾಟ್ ಕೊಹ್ಲಿ. ಇವ್ನು ಹೆಣ್ಣುಮಕ್ಕಳಿಗೆ ಹಿಡಿಸಿರುವ ಹುಚ್ಚು ಒಂದೆರಡಲ್ಲ. ಬ್ಯಾಟ್ ಮೂಲಕ ಈತ ಬಾರಿಸಿದ ಸಿಕ್ಸರ್ ಗಳೆಲ್ಲಾ ಬೌಂಡರಿ ಲೈನ್ ದಾಟಿದ್ದು ಮಾತ್ರವಲ್ಲ, ಬಾಲ್ ನೇರವಾಗಿ ಹೋಗಿ ಅದೆಷ್ಟೋ ಹೆಣ್ಣುಮಕ್ಕಳ ಹಾರ್ಟ್ ಒಳಗೆ ಬಿದ್ದಿದೆ.
ಚಾನ್ಸ್ ಸಿಕ್ಕರೇ ವಿರಾಟ್ ಕೋಹ್ಲೀನಾ ಕಣ್ಣುಮುಚ್ಚಿ ಮದ್ವೆ ಆಗ್ತೀವಿ. ಅನುಷ್ಕಾ ಮಾತ್ರವಲ್ಲ, ಅವನಿಗೆಷ್ಟೇ ಗರ್ಲ್ ಫ್ರೆಂಡ್ ಗಳಿರಲಿ, ಅವಕಾಶ ಸಿಕ್ಕರೇ ತಾಳಿಕಟ್ಟಿಸಿಕೊಳ್ಳಲು ಸಿದ್ದ ಎಂದು ಭಾರತದ ಎಷ್ಟೋ ಮಂದಿ ಹುಡುಗಿಯರು ಅಭಿಪ್ರಾಯಕ್ಕೆ ಬಂದಿದ್ದಾರೆ. ನಾವು ಮಾತಾಡಿಸಿದ ಬಹುತೇಕ ಹೆಣ್ಣುಮಕ್ಕಳೆಲ್ಲಾ ಇಂತಹ ಹೇಳಿಕೆಯನ್ನೇ ನೀಡಿದ್ದಾರೆ. `ಜಗತ್ತೇ ಮೆಚ್ಚುವ ಸೆಲೆಬ್ರಿಟಿ, ಜೊತೆಗೆ ಎಂಥಾ ಸೊಗಸಾದ ಆಟಗಾರ. ಅವನ ಶೇಕ್ ಹ್ಯಾಂಡ್ ಗೆ ಕಾತರಗೊಂಡಿದ್ದೇವೆ.
ಅವಕಾಶ ಸಿಕ್ಕರೇ ಅಪ್ಪುಗೆಗೆ ಮನ ತಹತಹಿಸುತ್ತಿದೆ. ಇನ್ನು ಮದ್ವೆಯಾಗುವ ಚಾನ್ಸ್ ಸಿಕ್ಕರೇ ಬಿಡ್ತೀವಾ..? ವಾವ್.. ಈ ಜನ್ಮ ಸಾರ್ಥಕ’ ಎಂದು ನಮ್ಮ ಬಳಿ ಮಾತನಾಡಿದ ಹೆಣ್ಣುಮಕ್ಕಳೆಲ್ಲಾ ಫುಲ್ ಎಕ್ಸೈಟ್ ಆಗಿದ್ದರು. ಬಡವರು, ಮಧ್ಯಮ ವರ್ಗದವರು, ಶ್ರೀಮಂತ ಹೆಣ್ಣುಮಕ್ಕಳಲ್ಲಿ ಬಹುತೇಕರಿಗೆ ಕೊಹ್ಲೀನಾ ಮದ್ವೆಯಾಗುವ ಆಸೆಯಿದೆಯಂತೆ. ಒಂದು ವೇಳೆ ಕೊಹ್ಲಿ ಶ್ರಿಕೃಷ್ಣ ಪರಮಾತ್ಮನಾಗಿದ್ದರೇ ಹದಿನಾಲ್ಕು ಸಾವಿರ ಹೆಣ್ಣುಮಕ್ಕಳನ್ನು ಮದ್ವೆಯಾಗುವ ಚಾನ್ಸ್ ಇತ್ತು. ಆದರೆ ವಾಸ್ತವ ಅದಲ್ಲವಲ್ಲ..!? ಒಂದಂತೂ ನಿಜ, ಕೊಹ್ಲಿ ಮದ್ವೆಯಾದ ದಿನ ಅದೆಷ್ಟೋ ಹೆಣ್ಣುಮಕ್ಕಳ ಹೃದಯಗೋಪುರ ಕುಸಿದುಬಿಡುತ್ತದೆ; ಪಾಪ..!!
- ರಾ ಚಿಂತನ್
POPULAR STORIES :
ಅವ್ನಿಗೆ ಪ್ರೇಯಸಿಯನ್ನು ಬುಲ್ಲೆಟ್ನಲ್ಲಿ ಕೂರಿಸೋ ಆಸೆ..!? ಅದಕ್ಕಾಗಿ ಅವ್ನು ಏನ್ ಮಾಡ್ದ ಗೊತ್ತಾ..!?
ಐಪಿಎಲ್ ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದ ಟೀಮ್ ಯಾವುದು ಗೊತ್ತಾ..?
ಅಲ್ಲಿ ಮನುಷ್ಯನ ಮಾಂಸದ ಬಿರಿಯಾನಿ ಬೇಯುತ್ತಿತ್ತು..!? ಮಾಂಸ ಬೇಯುತ್ತಿದ್ದಾಗ ಆಗಿದ್ದೇನು ಗೊತ್ತಾ..!?
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?