ಕೊಹ್ಲಿಗೆ ಆಪ್ತ ಸ್ನೇಹಿತನೇ ದೊಡ್ಡ ತಲೆನೋವು..!
ಶಾರ್ಜಾ : 13 ನೇ ಆವೃತ್ತಿ IPL ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿವೆ.
ಆರ್ ಸಿ ಬಿ ನಾಯಕನಿಗೆ ಗೆಳೆಯನೇ ಇಂದು ದೊಡ್ಡ ತಲೆನೋವು .
ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಪಂಜಾಬ್ ನಾಯಕ ಕೆ.ಎಲ್‌ರಾಹುಲ್ ಆತ್ಮೀಯ ಗೆಳೆಯರು.
ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪ್ರಸಕ್ತ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಿಂದ ಐದರಲ್ಲಿ ಜಯ ಸಾಧಿಸಿದ್ದು, ಒಟ್ಟು 10 ಅಂಕಗಳೊಂಡಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆಡಿದ ಏಳು ಪಂದ್ಯಗಳಿಂದ ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ, ಆರ್‌ಸಿಬಿ ವಿರುದ್ಧ ಎಂಬುದು ವಿಶೇಷ. ಕೇವಲ ಎರಡು ಅಂಕಗಳೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆರ್ ಸಿಬಿ ಈ ಹಿಂದಿನ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಪಂಜಾಬ್ ಗೆದ್ದಿತ್ತು. ಪಂಜಾಬ್ ಗೆದ್ದಿರುವುದು ಪಂಜಾಬ್ ಮಾತ್ರ..!
ಹೀಗಾಗಿ ಕೊಹ್ಲಿಗೆ ಸ್ನೇಹಿತ ರಾಹುಲ್ ಮತ್ತು ಟೀಮೇ ತಲೆನೋವಾಗಿದೆ.