ಕೇರಳ ಮತ್ತು ಕೊಡಗು ಜಲಪ್ರಳಯಕ್ಕೆ ಕೊಲ್ಲೂರು ದೇವಸ್ಥಾನ ಪರಿಹಾರ ದೇಣಿಗೆ ನೀಡಲು ಮುಂದಾಗಿದೆ. ದೇವಸ್ಥಾನದ ಆಡಳಿತ ವ್ಯವಸ್ಥಾಪನಾ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು, ಒಟ್ಟು 1.25 ಕೋಟಿ ರೂ ನೀಡುವುದಾಗಿ ಘೋಷಿಸಿದೆ.
ಕೇರಳ ರಾಜ್ಯಕ್ಕೆ 1ಕೋಟಿ ರೂ, ಕೊಡಗು ಜಿಲ್ಲೆಗೆ 25ಲಕ್ಷ ರೂ ನೀಡಲು ನಿರ್ಧರಿಸಿದೆ. ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ 25ಲಕ್ಷ ರೂ ಅನ್ನು ಅಲ್ಲಿನ ಜಿಲ್ಲಾಧಿಕಾರಿ ಪರಿಹಾರ ನಿಧಿಗೆ ನೀಡಲಿದೆ. ಕೇರಳ ಮುಖ್ಯಮಂತ್ರಿ ಪಿಣಿರಾಯಿ ವಿಜಯನ್ ಅವರ ಸಿಎಂ ಪರಿಹಾರ ನಿಧಿಗೆ 1ಕೋಟಿ ರೂ ನೀಡಲಿದೆ.






