ಕೃಷಿಸಚಿವ ಕೃಷ್ಣಬೈರೇಗೌಡ ಅವರ ಕ್ಷೇತ್ರ ಬ್ಯಾಟರಾಯನಪುರದಲ್ಲಿ ಈ ಬಾರಿ ಸಚಿವರಿಗೆ ಬಿಜೆಪಿ ಅಭ್ಯರ್ಥಿ ಎಸ್ ರವಿ ಅವರು ತೀವ್ರ ಸ್ಪರ್ಧೆ ನೀಡಲಿದ್ದಾರೆ.
ಏರ್ ಪೋರ್ಟ್ ರಸ್ತೆಯಿಂದಾಗಿ ಪ್ರಸಿದ್ಧಿ ಪಡೆದಿರುವ ಬ್ಯಾಟರಾಯನ ಪುರ ಕ್ಷೇತ್ರ ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದ್ದರೂ ಸಮಸ್ಯೆಗಳಿಂದ ಮುಕ್ತಿ ಸಿಕ್ಕಿಲ್ಲ.

ಕ್ಷೇತ್ರ ಪುನರ್ ವಿಂಗಡಣೆ ವೇಳೆ ಯಲಹಂಕ ಮತಕ್ಷೇತ್ರ ವಿಭಾಗಿಸಿದ ನಂತರ ಬ್ಯಾಟರಾಯನ ಪುರ ಕ್ಷೇತ್ರ ಅಸ್ಥಿತ್ವಕ್ಕೆ ಬಂತು (2008). ಕಳೆದ ಎರಡು ಬಾರಿಯೂ ಕೃಷ್ಣಬೈರೇಗೌಡರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಇವರ ಅಧಿಕಾರ ಅವಧಿಯಲ್ಲಿ ಮಾಡಿದ ಕೆಲಸಗಳು ಮತದಾರರಿಗೆ ತೃಪ್ತಿ ತಂದಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಹೆಚ್ಚಿನ ಕೆಲಸ ಆಗಿಲ್ಲ ಎಂಬ ಆರೋಪ ಕೃಷ್ಣಬೈರೇಗೌಡರ ಮೇಲಿದೆ.
ಜಕ್ಕೂರು, ಥಣಿಸಂದ್ರ, ಬ್ಯಾಟರಾಯನ ಪುರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ , ಕುವೆಂಪು ನಗರ ವಾರ್ಡ್ ಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಕೃಷ್ಣೇಬೈರೇಗೌಡರು ಸಚಿವರಾಗಿದ್ದರೂ ಹೆಚ್ಚಿನ ಅನುದಾನ ತಂದಿಲ್ಲ. ಮೂಲಸೌಕರ್ಯ ಸರಿಯಾಗಿ ಕಲ್ಪಿಸಿಕೊಟ್ಟಿಲ್ಲ. ಜನರ ಸಂಪರ್ಕಕ್ಕೂ ಸಿಗಲ್ಲ ಎಂಬ ಆರೋಪವಿದೆ.
ಒಳಚರಂಡಿ, ರಸ್ತೆ ಸಂಪರ್ಕ ಬೇಕಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಕಾಡ್ತಿದೆ. ಅರ್ಕಾವತಿ ಬಡಾವಣೆಗೆ ಜಮೀನು ಕಳೆದುಕೊಂಡಿರುವ ರೈತರಿಗೆ ಪರಿಹಾರ ದೊರೆತಿದೆ. ಆದರೆ, ನಿವೇಶನ ಆಕಾಂಕ್ಷಿಗಳು ಬಿಡಿಎ ಕಚೇರಿಗೆ ಅಲೆದಾಡುವುದು ತಪ್ಪಿಲ್ಲ. ಜೊತೆಗೆ ಏರ್ ಪೋರ್ಟ್ ರಸ್ತೆ ಟ್ರಾಫಿಕ್ ಕಿರಿಕಿರಿಯಿಂದ ಜನ ಹೈರಾಣಾಗಿದ್ದಾರೆ.
ಈ ಎಲ್ಲಾ ಸಮಸ್ಯೆಗಳು ಕೃಷ್ಣಬೈರೇಗೌಡರನ್ನು ಕಾಡಬಹುದು. ಇದರಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ಮತದಾರ ಒಲವು ತೋರುವ ಸಾಧ್ಯತೆ ಇದೆ.
ಕೇತ್ರದಲ್ಲಿ 2,19,775 ಪುರುಷ ಮತದಾರರು , 1,99,733ಮತದಾರರು ಸೇರಿದಂತೆ 4,19,587 ಮತದಾರರಿದ್ದಾರೆ.
ನೋಡೋಣ ಜನ ಸಚಿವರ ಕೈ ಹಿಡಿಯುತ್ತಾರೋ , ಬಿಡುತ್ತಾರೋ..?







