ಕಾಂಗ್ರೆಸ್ ಶಾಸಕರೊಬ್ಬರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಕೆ.ಎಸ್ ಈಶ್ವರಪ್ಪ ಅವರಿಗೆ ಮುಖಭಂಗವಾಗಿದೆ. ಆ ಶಾಸಕರು ಖಡಕ್ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಚಾಮರಾಜನಗರದ ಸಿ. ಪುಟ್ಟರಂಗಶೆಟ್ಟಿಯನ್ನು ಬಿಜೆಪಿಗೆ ಸೆಳೆಯುವ ಯತ್ನದಲ್ಲಿ ಈಶ್ವರಪ್ಪ ಸೋತಿದ್ದಾರೆ. ಈಶ್ವರಪ್ಪ ನೀಡಿದ ಆಫರ್ ಗೆ ಶಾಸಕ ಪುಟ್ಟರಂಗಶೆಟ್ಟಿ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.
ಈಶ್ವರಪ್ಪ ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿಯನ್ನು ಬೆಳಗ್ಗೆನಿಂದ ಸುಮಾರು ಐದಾರು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಸಚಿವ ಸ್ಥಾನ ನೀಡ್ತೀವಿ, ಬಿಜೆಪಿಗೆ ಬನ್ನಿ ಎಂದು ಕರೆದಿದ್ದಾರೆ. ಕೊನೆಯ ಸಲ ಕರೆ ಸ್ವೀಕರಿಸಿದ ಪುಟ್ಟರಂಗಶೆಟ್ಟಿ ನನಗೆ ಮತ್ತೊಮ್ಮೆ ಕರೆಮಾಡಬೇಡಿ ಎಂದು ಈಶ್ವರಪ್ಪ ಅವರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.