KSRTC ಬಸ್‌ನಲ್ಲಿ ಮೊಬೈಲ್ ಬಳಸುವವರೇ ಎಚ್ಚರ; ಬಂದಿದೆ ಹೊಸ ರೂಲ್ಸ್!

0
45

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ ಕೆಎಸ್ ಆರ್ ಟಿಸಿ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ.

ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ನಲ್ಲಿ ಹಾಡು ಕೇಳುವುದು, ನ್ಯೂಸ್, ಸಿನಿಮಾ ನೋಡುವುದರಿಂದ ಇತರೆ ಪ್ರಯಾಣಿಕರಿಗೆ ತೊಂದರೆ ಆಗುವುದರಿಂದ ನಿಗಮದ ಬಸ್ ಗಳಲ್ಲಿ ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ನಲ್ಲಿ ಹಾಡು ಹಾಕುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ತಕ್ಷಣವೇ ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ಈ ಬಗ್ಗೆ ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡುವುದು. ‌ಒಂದು ವೇಳೆ ಪ್ರಯಾಣಿಕರು ವಿನಂತಿಗೆ ಮನ್ನಣೆ ನೀಡದಿದ್ದರೆ ಅಂತಹವರನ್ನು ಸ್ಥಳದಲ್ಲೇ ಬಸ್ ನಿಂದ ಇಳಿಸುವುದರ ಜೊತೆಗೆ ಪ್ರಯಾಣದರವನ್ನು ಹಿಂತಿರುಗಿಸುವುದಿಲ್ಲ ಎಂಬ ಆದೇಶವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊರಡಿಸಿದೆ

LEAVE A REPLY

Please enter your comment!
Please enter your name here