ಕೊಡಗು, ಕರಾವಳಿ ,ಮಲೆನಾಡು ಸೇರಿದಂತೆ ನಾನಾ ಪ್ರದೇಶಗಳು ಮಳೆಯ ರುದ್ರ ನರ್ತನದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಇದೇ 25 ಮತ್ತು 26 ರಂದು ನಡೆಸಲು ಉದ್ದೇಶಿಸಿದ್ದ ಮೇಲ್ವೀಚಾರಕೇತರ ಹಾಗೂ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಲಿಖಿತ ಪರೀಕ್ಷೆ ಮುಂದೂಡಲಾಗಿದೆ.
ಮುಂದಿನ ಪರೀಕ್ಷಾ ದಿನಾಂಕವನ್ನು ಕೆಎಸ್ ಆರ್ ಟಿಸಿ ವೆಬ್ ಸೈಟ್ www.ksrtcjobs.com ಮತ್ತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗುವುದು ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 558 ತಾಂತ್ರಿಕ ಸಹಾಯಕ ಮತ್ತು 124 ಸಹಾಯಕ ಸ್ಟೋರ್ ಕೀಪರ್ ಹುದ್ದೆ , 86 ಸಹಾಯಕ ಅಕೌಂಟೆಂಟ್ ಸೇರಿ 1116 ಹುದ್ದೆಗಳಿಗೆ 1, 72,310 ಅರ್ಜಿಗಳು ಸಲ್ಲಿಕೆಯಾಗಿವೆ.