ಬೆಂಗಳೂರು ಸೇರಿದಂತೆ ರಾಜ್ಯದ KSRTC ನೌಕರರಿಗೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಿಂಗಳ ಆರಂಭದ ದಿನದಂದೇ ವೇತನ ಪಾವತಿಸಲಾಗಿದೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರ ಆದೇಶದಂತೆ ಚಾಲಕ, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ ನಿಗಮದ ಒಟ್ಟು 36,000 ಸಿಬ್ಬಂದಿಗೆ ಶನಿವಾರ ವೇತನ ಪಾವತಿ ಮಾಡಲಾಗಿದೆ. ಈ ಹಿಂದೆ ತಾಂತ್ರಿಕ ಸಿಬ್ಬಂದಿಗೆ ತಿಂಗಳ 4ರಂದು ಹಾಗೂ ಅಧಿಕಾರಿಗಳು, ಆಡಳಿತ ಸಿಬ್ಬಂದಿಗೆ ತಿಂಗಳ 7ರಂದು ವೇತನ ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ತಿಂಗಳ ಮೊದಲ ದಿನ ಸಂಬಳ ನೀಡಿಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
KSRTC ನೌಕರರಿಗೆ ದೀಪಾವಳಿ ಬಂಪರ್
Date: