ಮಹಾಗೌರಿ ಆರಾಧನೆ ಹೇಗೆ ಗೊತ್ತಾ ?

0
67

ಶಿವನಿಗಾಗಿ ಉಗ್ರ ತಪಸ್ಸು‌ಮಾಡಿ ಶಿವನನ್ನ ಒಲಿಸಿಕೊಳ್ಳುತ್ತಾಳೆ ಗೌರಿ .
ತಪಸ್ಸಿಗೆ ಸಂತುಷ್ಟನಾದ ಶಿವನು ಇವಳು ಬಿಳುಪಿನ ಮೈಕಾಂತಿಯನ್ನು ಹೊಂದುವುದಕ್ಕಾಗಿ ಗಂಗೆಯ ಪವಿತ್ರ ಜಲವನ್ನು ಇವಳ ಶರೀರದ ಮೇಲೆ ಪ್ರೋಕ್ಷಣೆ ಮಾಡುತ್ತಾನೆ . ಮೈಯೆಲ್ಲಾ ವಿದ್ಯುತ್ತಿನ ಕಾಂತಿಯಂತೆ ಹೊಳೆಯಿತು . ಸ್ಪಟಿಕದಂತೆ ಕಂಗೊಂಇಸಿದಳು ಮಹಾಗೌರಿ . ಮಹಾಗೌರಿಯ ವಯಸ್ಸು ಕೇವಲ ಯಾವಾಗಲು ಹದಿನಾರು ವರುಷ .

ಮಹಾಗೌರಿಯು ರಾಹುವಿನ ಅಧಿಪತಿಯಾಗಿದ್ದಾಳೆ. ರಾಹುವಿನ ಪೀಡೆಯಿಂದ ಆಗುವ ಅಹಿತಕರ ಘಟನೆಗಳು, ಕಾಟಗಳನ್ನು ತಪ್ಪಿಸಿ ತನ್ನ ಭಕ್ತರನ್ನು ಆಕೆ ಆಶೀರ್ವಾದಿಸುತ್ತಾಳೆ. ಗೌರಿಯ ಆಶೀರ್ವಾದದಿಂದ ಸಂಪತ್ತು, ಆಯುಷ್ಯದ ಜೊತೆಗೆ ಆಧ್ಯಾತ್ಮದ ಲಾಭಗಳೂ ಮನುಷ್ಯನಿಗೆ ದೊರೆಯುತ್ತದೆ. ನಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ತಾಯಿ ಗೌರಿ ನಿವಾರಿಸಿ ಸ್ಪಷ್ಟ ಚಿತ್ರಣ ನೀಡುತ್ತಾಳೆ. ನಮ್ಮ ಹೃದಯಲ್ಲಿ ಆತ್ಮವಿಶ್ವಾಸ ತುಂಬಿ ಯಶಸ್ಸಿನ ಕಡೆಗೆ ದಾರಿ ತೋರುತ್ತಾಳೆ.

ಮಹಾಗೌರಿ ಸ್ತೋತ್ರ:

ಸರ್ವಾಸಂಕಟ ಹಂತ್ರಿ ತುವಂಹಿ ಧನ ಐಶ್ವರ್ಯ ಪ್ರದಾಯನಮ್
ಜ್ಞಾನ ಚತುರ್ವೇದೈ ಮಹಾಗೌರಿ ಪ್ರಾಣಮಾಮಯಂ

ಸುಖ ಶಾಂತಿಧಾತ್ರಿ ಧನ ಧಾನ್ಯ ಪ್ರದಯಾನಿಮ್
ಢಮಾರುವಾದ್ಯ ಪ್ರಿಯಾ ಆದಿ ಮಹಾಗೌರಿ ಪ್ರಣಮಾಮ್ಯಹಂ
ತ್ರಿಲೋಕ್ಯಮಂಗಲ ತ್ವಂಹೀ ತಾಪತ್ರಯ ಹರಿಣಿಂ
ವದದಾಮ್ ಚೈತನ್ಯಮಯಿ ಮಹಾಗೌರಿ ಪ್ರಣಮಾಮ್ಯಹಂ

ಇನ್ನೂ ದೇವಿಗೆ ಮಲ್ಲಿಗೆ ಹೂಗಳನ್ನ ಅರ್ಪಿಸಿ . ಹಾಗೂ ನೈವೇದ್ಯಕ್ಕೆ ಅಕ್ಕಿ ಹಾಗೂ ಹಾಲಿನಿಂದ ಮಾಎಇದ ಸಿಹಿಯನ್ನ ಅರ್ಪಿಸಬೇಕು .

LEAVE A REPLY

Please enter your comment!
Please enter your name here