ಕಾರವಾರದ ಕುಮಟಾ ಠಾಣೆ ಪೊಲೀಸರ ಸಿನಿಮೀಯ ರೀತಿಯಲ್ಲಿ ಗೋವುಗಳನ್ನು ರಕ್ಷಿಸಿದ್ದಾರೆ.
ಈ ಘಟನೆ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್ ನಲ್ಲಿ ನಡೆದಿದೆ.
ರಿಜಿಸ್ಟರ್ ಆಗದ ಮಾರುತಿ ಇಂಗ್ನೀಸ್ ಕಾರಿನಲ್ಲಿ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ರಾತ್ರಿ ಪಾಳಿ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿಎಸ್ ಐ ಸಂಪತ್ ಕುಮಾರ್ ತಂಡ ಇದನ್ನು ಗಮನಿಸಿ ಕಾರನ್ನು ಬೆನ್ನತ್ತಿದೆ.ಈ ವೇಳೆ ಕಾರು ಅಪಘಾತಕ್ಕೀಡಾಗಿದೆ. ಕಳ್ಳರು ತಪ್ಪಿಸಿಕೊಂಡಿದ್ದಾರೆ. ಎರಡು ಹಸು ಮತ್ತು ಒಂದು ಹೋರಿಯನ್ನು ರಕ್ಷಿಸಲಾಗಿದೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.