ಕೂಷ್ಮಾಂಡ ದೇವಿಗೆ ಯಾವುದು ಪ್ರಿಯ ?

0
34

ದುರ್ಗಾಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಟಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದ ಗ್ರಹಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ.

ಕೂಷ್ಮಾಂಡ ದೇವಿಯು ತನ್ನ ಏಳು ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ತಾವರೆ, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಹಿಡಿದಿದ್ದಾಳೆ. ಇನ್ನೊಂದು ಹಸ್ತವು ಆಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎನ್ನಲಾಗುತ್ತದೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳು ನಿವಾರಣೆಯಾಗುವುದು ಎಂಬ ನಂಬಿಕೆ ಎಲ್ಲರದ್ದು.

ಪೂಜಾ ವಿಧಿ

ಕೂಷ್ಮಾಂಡ ದೇವಿಯನ್ನು ಪೂಜಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು.

ದೇವಿಯನ್ನು ಪೂಜಿಸಿ ನಂತರ ಷೋಡಶೋಪಚಾರ ಪೂಜೆ ಅಂದರೆ 16 ವಿವಿಧ ಪೂಜೆಯನ್ನು ಮಾಡಿದರೆ ದೇವಿ ಪುನೀತಳಾಗುತ್ತಾಳೆ. ಹಾಗೂ ಬೆಲ್ಲದಿಂದ ಮಾಡಿದ ನೈವೇದ್ಯ ಸಮರ್ಪಣೆ ಮಾಡಬೇಕು .

ಕೂಷ್ಮಾಂಡ ಮಂತ್ರ
ಓಂ ದೇವೀ ಕೂಷ್ಮಾಂಡೈ ನಮಃ
ಓಂ ದೇವಿ ಕೂಷ್ಮಾಂಡದಾಯ್ಯೈ ನಮಃ ಸುರಸಂಪೂರ್ಣ ಕಲಶಂ ರುಧಿರಾಪ್ಲುತಾಮೇವ ಚ

ದ್ಯಾನ ಮಂತ್ರ

ವಂದೇ ವಂಚಿತ ಕಾಮರ್ಥೇ ಚಂದ್ರಾರ್ಧಕೃತಶೇಖರಂ
ಸಿಂಹರೂಢ ಅಷ್ಟಭುಜಾ ಕೂಷ್ಮಾಂಡಾ ಯಶಾಸ್ವಿನೀಂ
ಭಾಸ್ವರಾ ಭಾನು ನಿಭಾಂ ಅನಹತಾ ಸ್ಥಿತಿಂ ಚತುರ್ಥ ದುರ್ಗಾ ತ್ರಿನೇತ್ರಂ
ಕಮಂಡಲು, ಚಾಪಾ, ಬನ, ಪದ್ಮ, ಸುಧಾಕಲಶ, ಚಕ್ರ, ಗಧಾ, ಜಪವತಿಧರಂ .

LEAVE A REPLY

Please enter your comment!
Please enter your name here