ಮೇವು ಹಗರಣದಲ್ಲಿ ಜೈಲು ಸೇರಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಗೆ ಪುತ್ರ ತೇಜ್ ಪ್ರತಾಪ್ ಯಾದವ್ ಮದುವೆಗಾಗಿ 5 ದಿನಗಳ ಪೆರೋಲ್ ಮಂಜೂರಾಗಿದೆ.
ಮಗನ ನಿಶ್ಚಿತಾರ್ಥಕ್ಕೆ ಲಾಲುಗೆ ಬರಲಾಗಿರಲಿಲ್ಲ. ಇದೀಗ ಮದುವೆಗೆ ಪೆರೋಲ್ ಸಿಕ್ಕಿದೆ.

ಲಾಲೂ ಸದ್ಯ ರಾಂಚಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ದಾಖಲಾಗಿದ್ದಾರೆ. ಇಂದು ಸಂಜೆ ಲಾಲೂ ಪಾಟ್ನಾಗೆ ಹೋಗುವರು.
ಆರ್ ಜೆಡಿ ಶಾಸಕ, ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಹಾಗೂ ಮಾಜಿ ಸಚಿವ ಚಂದ್ರಿಕಾ ಪ್ರಸಾದ್ ರೈ ಅವರ ಮಗಳು ಐಶ್ವರ್ಯ ಅವರ ಮದುವೆ ಮೇ 12 ರಂದು ನಡೆಯಲಿದೆ.







