ಪುಲ್ವಾಮಾ ದಾಳಿಗೆ ತುತ್ತಾಗಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹಾಗೂ ಭಾರತದ ಸೈನಿಕರ ಅಭ್ಯುದಯಕ್ಕಾಗಿ 1 ಕೋಟಿ ರೂ. ದಾನಕೊಡುವುದಾಗಿ ಗಾಯಕಿ ಲತಾ ಮಂಗೇಶ್ಕರ್ ಘೋಷಿಸಿದ್ದಾರೆ.
ದೇಶಕ್ಕಾಗಿ ಬಹಳಷ್ಟು ವೀರ ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಈಗ ಅವರ ಕುಟುಂಬದವರ ಕಣ್ಣೀರು ಒರೆಸುವ ಕೆಲಸವನ್ನು ನಾವು ದೇಶದ ನಾಗರೀಕರು ಮಾಡಬೇಕು. ನಾನು 1 ಕೋಟಿ ಹಣವನ್ನು ನಾನು ಸೈನಿಕರ ಅಭ್ಯುದಯಕ್ಕಾಗಿ ಕೊಡಲಿದ್ದು ಅದನ್ನು ಈಗಾಗಲೇ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಹಾಗೂ ಈಗ ಭಾರತದ ಪರ ಕರ್ತವ್ಯದಲ್ಲಿರುವ ಸೈನಿಕರ ಯೋಗಕ್ಷೇಮಕ್ಕಾಗಿ ವಿನಿಯೋಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.ಇದನ್ನು ನನ್ನ ಅಪ್ಪ ದೀನನಾಥ್ ಮಂಗೇಶ್ಕರ್ ಅವರ ಪುಣ್ಯ ಸ್ಮರಣೆಯ ದಿನವಾದ ಫೆಬ್ರವರಿ 24ರಂದು ಈ ಹಣವನ್ನು ನಾನು ಸೈನಿಕರ ಪರವಾಗಿ ಸರ್ಕಾರಕ್ಕೆ ನೀಡಲಿದ್ದೇನೆ. ಜೊತೆಗೆ ನನ್ನ ಜನ್ಮದಿನಕ್ಕೆ ಶುಭಾಶಯಗಳ ಕಾರ್ಡ್ ಹಾಗೂ ಗಿಫ್ಟ್‌ಗಳನ್ನು ಕಳುಹಿಸುವ ಬದಲು ಅದಕ್ಕೆ ನೀವು ನೀಡುವ ಹಣವನ್ನು ನಮ್ಮ ದೇಶದ ಸೈನಿಕರ ಅಭ್ಯುದಯಕ್ಕಾಗಿ ಅವರಿಗೆ ಕಳುಹಿಸಿಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.