ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಕುಮಾರ್ ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರನ್ನು ಭೇಟಿ ಮಾಡಿದ್ರು.
ವಿಧಾನಸೌಧದ ಸಚಿವರ ಕಚೇರಿಯಲ್ಲಿ ಟಿಬಿಜೆ ಅವರನ್ನು ಭೇಟಿ ಮಾಡಿದ ಅವರು, ನೆಲಮಂಗಲ ತಾಲೂಕು ಸೋಲದೇವನಹಳ್ಳಿಯನ್ನು ಅರಣ್ಯ ಭೂಮಿ ಎಂದು ಪರಿಗಣಿಸಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸೋ ಕೆಲ್ಸ ಆಗ್ತಿದೆ. ಇದನ್ನು ಕಂದಾಯ ಭೂಮಿ ಎಂದು ಕಾನೂನು ತಿದ್ದುಪಡಿ ಮಾಡುವಂತೆ ಕೋರಿದ್ರು.
ಜನವರಿ 27ರಂದು ಸ್ಥಳ ಪರಿಶೀಲಿಸಿ ವಿವಾದ ಬಗೆ ಹರಿಸುವುದಾಗಿ ಟಿಬಿಜೆ ಭರವಸೆ ನೀಡಿದ್ದಾರೆ ಎಂದು ಲೀಲಾವತಿ ತಿಳಿಸಿದ್ದಾರೆ.