No menu items!
15.2 C
Munich
Wednesday, April 29, 2026

ಗೌರವಕ್ಕಾಗಿ ಹೋರಾಟ…!

Must read

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ ಇಂದು ತನ್ನ ಗೌರವ ಕಾಪಾಡಿಕೊಳ್ಳಲು ಸೆಣಸಲಿದೆ.


ದ.ಆಫ್ರಿಕಾದ ವಾಂಡರರ್ಸ್ ಮೈದಾನದಲ್ಲಿ ಇಂದು ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಕ್ಕೆ ಪ್ರತಿಷ್ಠೆಯ ಪಂದ್ಯ. ಆತಿಥೇಯ ದ.ಆಫ್ರಿಕಾ ಈ ಪಂದ್ಯವನ್ನೂ ಗೆದ್ದು ಭಾರತವನ್ನು ವೈಟ್ ವಾಷ್ ಮಾಡೋ ತವಕದಲ್ಲಿದೆ.

ವಾಂಡರರ್ಸ್ ವೇಗದ ಬೌಲರ್ ಗಳ ಸ್ವರ್ಗವಾಗಿದ್ದು ವೇಗಿಗಳು ಮಿಂಚುವ ಸಂಭಂವವಿದೆ. ಹಸಿರು ಹುಲ್ಲು ಹಾಸಿನಿಂದ ಕೂಡಿರುವ ಈ ಪಿಚ್ ನಲ್ಲಿ ಬ್ಯಾಟ್ಸ್ ಮನ್ ಗಳು ಪರದಾಡ ಬಹುದು. ಬ್ಯಾಟಿಂಗ್ ಬಲವನ್ನೇ ನಂಬಿರುವ ಕೊಹ್ಲಿ ಪಡೆಗಿದು ಸಂಕಷ್ಟದ ವಿಷಯ.
ಎರಡು ಪಂದ್ಯಗಳ ಸೋಲಿನಿಂದ ಪಾಠ ಕಲಿತಿರುವ ಟೀಂ ಇಂಡಿಯಾ ಇವತ್ತು ವಿದೇಶಿ ನೆಲಗಳಿಗೆ ಹೊಂದಿಕೊಂಡು ತಾಳ್ಮೆಯ ಆಟವಾಡುವ ಯುವ ಬ್ಯಾಟ್ಸ್ ಮನ್, ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಉಂಟು. ರಹಾನೆಗೆ ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಂಡು ಮತ್ತೊಮ್ಮೆ ತಮ್ಮ ತಾಕತ್ತು ಏನೆಂದು ತೋರಿಸಬೇಕಿದೆ.

ಪಂದ್ಯ 1.30ಕ್ಕೆ ಆರಂಭವಾಗಲಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article