ಪಾನ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಕಾದಿದೆ ನೋಡಿ..! ದೇಶದ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿರುವ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ..! ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಟಿಎಸ್ ಠಾಕೂರ್ ನೇತೃತ್ವದ ಪೀಠವು ಈ ಆದೇಶ ಹೊರಡಿಸಿದ್ದು ಹೆದ್ದಾರಿಗಳ 500 ಮೀಟರ್ ಅಕ್ಕಪಕ್ಕದ ಎಲ್ಲಾ ಬಾರ್ ಮತ್ತು ವೈನ್‍ಶಾಪ್‍ಗಳನ್ನು ಬಂದ್ ಮಾಡಬೇಕು ಎಂದು ಆದೇಶ ನೀಡಿದೆ..! ಮಾರ್ಚ್ 31ರ ನಂತರ ಹೆದ್ದಾರಿ ಅಕ್ಕಪಕ್ಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇರೋದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ. ಇನ್ನು ಹಾಲಿ ಪರವಾನಗಿ ಹೊಂದಿದ ಮಾರಾಟಗಾರರಿಗೆ ಏಪ್ರಿಲ್ 1.ರವರೆಗೆ ಕಾಲಾವಕಾಶ ನೀಡಿದೆ..! ದೇಶದಲ್ಲಿ ರಸ್ತೆ ಅಪಘಾತದಿಂದಾಗಿ ವರ್ಷಕ್ಕೆ ಸುಮಾರು 1.42 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ ಎಂದು ಆರೈವ್ ಸೇಫ್ ಎಂಬ ಸರ್ಕಾರೇತರ ಸಂಸ್ಥೆ(ಎನ್‍ಜಿಒ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಮಧ್ಯ ಮಾರಾಟ ನಿಷೇಧಿಸಬೇಕು ಎಂದು ಆದೇಶ ನೀಡಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!
ಮತ್ತೆ ಆಸ್ಕರ್ ರೇಸ್‍ನಲ್ಲಿ ಎ.ಆರ್ ರೆಹಮಾನ್..!