ಆತ ತಾನು ಲವ್ ಮಾಡಿದ ಹುಡುಗಿ ಜೊತೆ ರಾಜಧಾನಿ ಬೆಂಗಳೂರಿಗೆ ಬಂದ. ಪ್ರೀತಿಗೆ, ಪ್ರೇಯಸಿಗೆ ನಿಯತ್ತಾಗಿ ಇರೋದನ್ನು ಬಿಟ್ಟು ಇನ್ನೊಬ್ಬಳ ಜೊತೆ ಎಂಗೇಜಾದ. ಈ ಭೂಪನನ್ನು ಬಂದವಳೀಗ ಅನುಮಾನಾಸ್ಪದ ಸಾವೀಗೀಡಾಗಿದ್ದಾಳೆ.
ಹೌದು ಬೆಂಗಳೂರು ಮಾದನಾಯಕನಹಳ್ಳಿಯಲ್ಲಿರುವ ಗೃಹಿಣಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಅಶ್ವಿನಿ ಎಂದು ಗುರುತಿಸಲಾಗಿದೆ. ನಾಗೇಶ್ ಎಂಬಾತ ಪತ್ನಿ ಅಶ್ವಿನಿಯನ್ನು ಕೊಂದ ಆರೋಪದಲ್ಲಿ ಸಿಲುಕಿರುವವನು.
ಅಶ್ವಿನಿ ಮತ್ತು ನಾಗೇಶ್ ಇಬ್ಬರು ಬೀದರ್ ತಾಲೂಕಿನ ಅಣದೂರು ನಿವಾಸಿಗಳಾಗಿದ್ದುಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರು ಒಪ್ಪಿರಲಿಲ್ಲ. ಅದಕ್ಕೇ ಊರು ಬಿಟ್ಟು ಬೆಂಗಳೂರಿಗೆ ಬಂದು ಮದುವೆಯಾಗಿ ಮಾದನಾಯಕನಹಳ್ಳಿಯಲ್ಲಿ ವಾಸವಿದ್ದರು. ಅಶ್ವಿನಿ ಗೃಹಿಣಿಯಾಗಿದ್ದು ನಾಗೇಶ್ ಕೆಲಸಕ್ಕೆ ಹೋಗ್ತಿದ್ದ. ಈತ ಬರು ಬರುತ್ತಾ ಇನ್ನೊರ್ವ ಯುವತಿಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದ. ಇದು ಪತ್ನಿ ಅಶ್ವಿನಿಗೆ ತಿಳಿದಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಹೀಗೆ ನಾಲ್ಕು ದಿನಗಳ ಹಿಂದೆ ಜಗಳವಾದಾಗ ನಾಗೇಶ್ ಅಶ್ವಿನಿ ಮೇಲೆ ಹಲ್ಲೆಗೆ ಮುಂದಾಗಿದ್ದ. ನಂತರ ಆಕೆ ಬೆಲ್ಟಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನೆ ನಡೆದು ನಾಲ್ಕು ದಿನವಾಗಿದ್ದು ಇದೀಗ ಬೆಳಕಿಗೆ ಬಂದಿದೆ.
ನಾಗೇಶ್ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾನೆ. ಆದರೆ, ಅಶ್ವಿನಿಯ ಪೋಷಕರು ನಾಗೇಶನೇ ತನ್ನ ಮಗಳನ್ನು ಕೊಂದಿರುವುದಾಗಿ ಹೇಳುತ್ತಿದ್ದಾರೆ.