ಆಕೆ ಅಣ್ಣನನ್ನೇ ಪ್ರೀತಿಸಿ ಆತನ ಜೊತೆ ಓಡಿ ಹೋದಳು. ಇದನ್ನು ಕುಟುಂಬದವರು, ಊರಿನವರು, ಸಂಬಂಧಿಕರು ಎಲ್ಲರೂ ವಿರೋಧಿಸಿದರು. ಆಕೆ ಅಪ್ರಾಪ್ತೆ ಆಗಿದ್ದರಿಂದ ಆರೋಪಿ ಅಣ್ಣನ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಯಿತು.
ಕೋರ್ಟ್ ನಲ್ಲಿ ಆರೋಪಿ ಅಣ್ಣನ ಪರ ಸಾಕ್ಷಿ ಹೇಳಲು ಬಂದ ಆ ಹುಡುಗಿಗೆ ಕುಟುಂಬದವರು ಥಳಿದಿದ್ದಾರೆ.
ಈ ಘಟನೆ ನಡೆದಿರೋದು ಬಾಗಲಕೋಟೆ ಜಿಲ್ಲೆಯಲ್ಲಿ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ಯಂಕಪ್ಪ ಆರೋಪಿ. ಈತ ಪ್ರೀತಿಸುತ್ತಿದ್ದ ಹುಡುಗಿ ಸಂಬಂಧದಲ್ಲಿ ಸಹೋದರಿ ಆಗುತ್ತಾಳೆ…! ಆದರೆ , ಸಂಬಂಧವನ್ನು ಲೆಕ್ಕಿಸದೆ ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲಾರಂಭಿಸುತ್ತಾರೆ. ಇವರ ಪ್ರೀತಿಗೆ ವಿರೋಧ ವ್ಯಕ್ತವಾದಾಗ ಯಂಕಪ್ಪ ಯಾರಿಗೂ ತಿಳಿಯದಂತೆ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಅವಳು ಅಪ್ರಾಪ್ತಳಾಗಿದ್ದರಿಂದ ಯಂಕಪ್ಪನ ವಿರುದ್ಧ ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯಂಕಪ್ಪ ಬೇರೆ ಹುಡುಗಿಯೊಂದಿಗೆ ಮದ್ವೆ ಆಗಲು ಮುಂದಾಗಿದ್ದನು.ಆದ್ದರಿಂದ ನ್ಯಾಯಾಲಯದಲ್ಲಿ ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಒತ್ತಾಯಿಸಿ ಬಾಗಲಕೋಟೆ ನ್ಯಾಯಾಲಯಲಕ್ಕೆ ಆ ಅಪ್ರಾಪ್ತೆಯನ್ನು ಯಂಕಪ್ಪ ಕರೆಸಿಕೊಂಡಿದ್ದ.
ಪ್ರೇಮಿ ಅಣ್ಣನ ಪರ ಸಾಕ್ಷಿ ಹೇಳಲು ಮುಂದಾಗಿದ್ದ ಅಪ್ರಾಪ್ತೆ ಮೇಲೆ ಚಿಕ್ಕಪ್ಪ ಹಾಗೂ ಕುಟುಂಬದವರು ಹಲ್ಲೆ ಮಾಡಿದ್ದಾರೆ. ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ.