ದ್ವಾರಕೆಯ ದೋಸೆ ಮತ್ತವಳ ನೆನಪು..!

Date:

ಸಂಜೆ ಯಾಕೋ ಬೋರಾಗ್ತಿತ್ತು. ಸುತ್ತಾಡಿ ಬರಲು ಹೋದವನಿಗೆ ಅಲ್ಲೇ ಇದ್ದ ಫಾಸ್ಟ್‍ಫುಡ್ ಗಾಡಿ ಕಂಡಿತು. ಸೀದಾ ಹೋಗಿ ಮಸಾಲೆದೋಸೆ ಹೇಳಿದೆ. ರಷ್ ಇರದಿದ್ದರಿಂದ ಆರ್ಡರ್ ಬೇಗ ಬಂತು. ಅದರ ಜೊತೆಗೆ ಇದ್ದಕಿದ್ದಂತೆ ಅವಳ ನೆನಪೂ ಬಂತು. ನನಗೆ ಅದೇನು ಹೊಸದಲ್ಲ. ನಗುತ್ತಾ ದೋಸೆ ಮಧ್ಯಕ್ಕೆ ಮುರಿದೆ. ಆಲುಗಡ್ಡೆ ಪಲ್ಯವನ್ನು ನಂಚಿಕೊಂಡು ಬಾಯಿಗಿಡುತ್ತಿದ್ದಂತೆ ಜಗತ್ತೆಲ್ಲಾ ಕಪ್ಪು ಬಿಳುಪಾಗತೊಡಗಿತು. ಇದೇನಪ್ಪಾ ಅಂದುಕೊಳ್ಳುತ್ತಿರುವಾಗಲೇ ಒಂದು ಫ್ಲಾಷ್‍ಬ್ಯಾಕ್ ಶುರುವಾಯಿತು.

ತುಮಕೂರಿನ ದ್ವಾರಕಾ ಹೋಟಲಿನ ಮೂಲೆಯಲ್ಲಿದ್ದ ಗಡಿಯಾರದ ಕೆಳಗಿನ ಟೇಬಲ್ಲು. ಆ ಕಾರ್ನರ್ ಟೇಬಲ್ಲು ಖಾಲಿಯಾಗುವವರೆಗೂ ಕಾದು ಬಂದು ಕುಳಿತಿದ್ವಿ. ಹೇಳಿ ಕೇಳಿ ನಾವಿಬ್ಬರೂ ಲವರ್ಸ್. ನಮಗೆ ಎಲ್ಲಿ ಹೋದರೂ ಕಾರ್ನರ್ ಸೀಟು, ಕಾರ್ನರ್ ಟೇಬಲ್ಲ್ಲುಗಳೇ ಬೇಕು. ಅದಲ್ಲದೇ ನಾವಿದ್ದ ಟೇಬಲ್ ಮೂಲೆಯಲ್ಲಿದ್ದರಿಂದ ಹೋಟಲಿನ ವೇಟರ್‍ಗಳು ನಮ್ಮನ್ನು ಹುಡುಕಿಕೊಂಡು ಬಂದು ಆರ್ಡರ್ ತೆಗೆದುಕೊಳ್ಳಲು ಸಮಯ ಹಿಡಿಯುತ್ತಿತ್ತು. ವೇಟರ್‍ಗೆ ವೈಟಿಂಗ್ ಮಾಡೋ ನೆಪದಲ್ಲಿ ನಾವು ಚಾಟಿಂಗ್ ಮಾಡಬಹುದೆಂಬ ಲೆಕ್ಕಾಚಾರ. ಆದರೆ ಚಾಟಿಂಗ್ ಮಾಡುವ ಬದಲು ಸುಮ್ಮನೆ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತುಬಿಟ್ವಿ. ಹೀಗೆ ನನ್ನ ಮುಖ ಅವಳು ಅವಳ ಮುಖ ನಾನು ನೋಡಿಕೊಂಡು ಕುಳಿತಿದ್ದರೇ ದ್ವಾರಕಾ ಹೋಟಲ್ಲೇ ದ್ವಾರಕಾ ನಗರಿ, ಒಳಗೆ ನಾನೆ ಕೃಷ್ಣ ಅವಳೇ ರಾಧೆ.(ಕೊಳಲೊಂದು ಮಿಸ್ಸಿಂಗ್) ಹೀಗೆ ಇಮಾಜಿನೇಷನ್ನಲ್ಲಿ ಇರುವಾಗಲೇ ಕಂಸನಂತಿದ್ದ ಒಬ್ಬ ವೇಟರ್ ಬಂದು ‘ಏನ್ ಬೇಕು?’ ಅಂದ.

ಮೆನು ಅಲ್ಲೇ ಇದ್ದರೂ, ಸುಮ್ಮನೆ ಏನೇನಿದೆ ಎಂದು ಕೇಳಿದೆ. ಅವನು ರ್ಯಾಪ್ ಹೇಳುವವನಂತೆ ರಪರಪನೆ ಇಷ್ಟುದ್ದದ ಲಿಸ್ಟ್ ಹೇಳಿದ. ಹೋಟಲ್ಲಿನಲೇನೇ ಇದ್ದರೂ ನಂದು ಬೈ ಡಿಫಾಲ್ಟ್ ಮಸಾಲೆ ದೋಸೆ. ಅದನ್ನೇ ಹೇಳಿದೆ. ಅವಳು ಕೂಡ ನಾನಿಟ್ಟ ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಸತಿ ಸಾವಿತ್ರಿಯಂತೆ ಅದನ್ನೇ ಹೇಳಿದಳು. ವೇಟರ್ ಅಲ್ಲಿಂದಲೇ ಜೋರಾಗಿ ಎರಡು ಮಸಾಲೆ ದೋಸೆ ಎಂದು ಹೇಳಿ ಮುಂದಿನ ಟೇಬಲ್ಲಿಗೆ ಹೋದ.

ಅವನು ಹೋದಮೇಲೆ ನಮ್ಮ ಮಾತು, ಕಥೆ, ನಗು ನಾಚಿಕೆ ಮತ್ತೆ ಶುರುವಾಯಿತು. ನಾನೊಬ್ಬನೆ ಮಾತನಾಡುತ್ತಿದ್ದೆ. ಅವಳು ಸುಮ್ಮನೆ ನೋಡಿ ನಗುತ್ತಿದ್ದಳು. ನಾನೇನಾದರು ನಕ್ಕು ಅವಳ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದರೆ ಹಳೆ ಸಿನಿಮಾ ಹೀರೋಯಿನ್‍ಗಳ ತರಹ ನಾಚಿಕೊಂಡು ಕತ್ತು ಬಗ್ಗಿಸುತ್ತಿದ್ದಳು. ಪೋನಿನಲ್ಲಿ ಮಾತನಾಡುತ್ತಾ ಅಷ್ಟೊಂದು ಜೋರು ಮಾಡುವ ಬಜಾರಿ ಇವಳೇನಾ ಎನ್ನಿಸಿತು. ‘ಇದ್ಯಾಕೆ ಹೀಗೆ’ ಎಂದು ಕೇಳಿದರೆ, ‘ನೀನೆದುರುಗಿದ್ದರೆ ನಂಗೆ ಹಾಗೆ’ ಎಂದು ಹೇಳಿ ಮತ್ತೆ ‘ನಾಚಿಕೆ ಮೋಡ್’ ಆನ್ ಮಾಡಿಬಿಟ್ಟಳು.

ಅಷ್ಟರಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ಬಂತು. ಅವಳು ಹಾಸ್ಟಲಿನಲ್ಲಿ ಒಂದು ರೌಂಡ್ ಬಾರಿಸಿ ಬಂದಿದ್ದಳೇನೋ ಸುಮ್ಮನೆ ಪ್ಲೇಟ್ ಮುಂದೆ ಇಟ್ಟುಕೊಂಡು ಕೂತಳು. ನಾನು ದೊಡ್ಡ ಟಾರ್ಗೆಟ್ ಚೇಸ್ ಮಾಡುವ ಓಪನಿಂಗ್ ಬ್ಯಾಟ್ಸ್‍ಮನ್ ತರಹ ಬ್ಯಾಟಿಂಗ್ ಶುರು ಮಾಡಿದೆ. ಇದ್ದಕ್ಕಿದ್ದಂತೆ ಜೋರಾಗಿ ನಗತೊಡಗಿದಳು ‘ಏನಾಯ್ತೇ ಲೂಸು’ ಎಂದು ಕೇಳಿದರೆ ಮತ್ತೆ ಮತ್ತೆ ನಗತೊಡಗಿದಳು. ನನಗೇನು ಕಾಮಿಡಿ ಅಂತ ಅರ್ಥವಾಗಲಿಲ್ಲ. ‘ಲೋ ಕೋತಿ, ದೋಸೆ ತಿನ್ನೋದು ಹಾಗಲ್ಲ ಕಣೋ’ ಎಂದಳು. ನನಗೆ ಅರ್ಥವಾಗಲಿಲ್ಲ? ಮುಖವೆಲ್ಲಾ ಕ್ವಶ್ಚನ್ ಮಾರ್ಕ್ ಮಾಡಿಕೊಂಡು ಅವಳನ್ನು ನೋಡಿದೆ. ಮತ್ತೆ ನಕ್ಕಳು.

ನಕ್ಕು ಸಾಕಾಯ್ತೇನೋ ನಿಧಾನವಾಗಿ ವಿವರಿಸತೊಡಗಿದಳು. ‘ನೋಡು ಮಸಾಲೆ ದೋಸೆಯ ಒಳಗೆ ಪಲ್ಯ ಇರುತ್ತಲ್ವಾ? ಅದಕ್ಕೆ ಹೀಗೆ ಮಧ್ಯದಲ್ಲಿ ಮುರ್ಕೊಂಡು ಹೀಗೆ..’ ಎಂದು ದೋಸೆಯ ಜೊತೆಗೆ ‘ತಿನ್ನಬೇಕು’ ಎನ್ನುವ ಪದವನ್ನು ನುಂಗಿದಳು. ದೋಸೆ ಅಗಿಯುತ್ತಾ ‘ನಿನ್ನ ಹಾಗೆ ತಿಂದರೆ ಲಾಸ್ಟಲ್ಲಿ ಪಲ್ಯ ಹಾಗೆ ಉಳಿಯುತ್ತೆ ಗೂಬೆ’ ಎಂದು ಅಸ್ಪಷ್ಟವಾಗಿ ಹೇಳಿದಳು. ನನಗೆ ಆಶ್ಚರ್ಯವಾಯಿತು. ಅಲ್ಲಿಯವರೆಗೂ ನನಗದು ಗೊತ್ತಿರಲೂ ಇಲ್ಲ, ಯಾರು ಹೇಳಿಕೊಟ್ಟಿರಲೂ ಇಲ್ಲ. ಇವಳು ಸ್ಕೂಲಿನಲ್ಲಿ ಮಕ್ಕಳಿಗೆ ಹೇಳಿಕೊಟ್ಟ ಹಾಗೆ ಹೇಳುವುದನ್ನು ಕೇಳಿ ನಗು ಬಂತು. ಒಂದು ಕ್ಷಣ ಅವಳು ಹೇಳಿದ್ದು ಸರಿ ಎನ್ನಿಸಿದರೂ ಅವಳ ಮುಂದೆ ಸೋಲಬಾರದೆಂದು ‘ಹೇಗೆ ತಿಂದರೂ ಹೊಟ್ಟೆಗೆ ಹೋಗೋದು ತಾನೆ, ಸುಮ್ಮನೆ ತಿನ್ನೇ’ ಎಂದು ಹೇಳಿದೆ. ಆದರೂ ಅವಳು ಬಿಡದೆ ದೋಸೆಯನ್ನು ಮಧ್ಯಕ್ಕೆ ಮುರಿಸಿ ತಿನ್ನಿಸಿದಳು. ಜೊತೆಗೆ ತನಗೆ ಹಸಿವಿಲ್ಲವೆಂದು ಅವಳ ದೋಸೆಯನ್ನು ನನಗೆ ತಿನ್ನಿಸಿದಳು. (ಕಡೆಯಲ್ಲಿ ಬಿಲ್ ಕೊಟ್ಟಿದ್ದು ನಾನೆ ಎಂದು ಬೇರೆ ಹೇಳಬೇಕಿಲ್ವಲಾ?)

ಕಮಿಂಗ್ ಬ್ಯಾಕ್ ಟು ರಿಯಾಲಿಟಿ ಈಗ ಅವಳಿಲ್ಲ. ಆದರೆ ನಾ ತಿನ್ನುವ ಪ್ರತಿ ಮಸಾಲೆ ದೋಸೆಯ ಜೊತೆಗೂ ಅವಳ ನೆನಪಿದೆ. ಅವಳು ಹೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅಂದಿನಿಂದ ದೋಸೆಯನ್ನು ಮಧ್ಯಕ್ಕೆ ಮುರಿದು ತಿನ್ನುತ್ತೇನೆ. ಈಗ ಇದನ್ನು ಓದಿದ ಮೇಲೆ ನೀವು ಕೂಡ ದೋಸೇನಾ ಮಧ್ಯಕ್ಕೆ ಮುರಿದು ತಿಂತೀರಾ ಅಲ್ವಾ?

  • ತ್ರಿಲೋಕ್ ತ್ರಿವಿಕ್ರಮ

POPULAR  STORIES :

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...