ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಅನುಭವ ಆಗಿರುತ್ತೆ, ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..! ಮದುವೆಯಾಗಿರುತ್ತೆ ಚೆಂದದ ಜೀವನವೂ ಇರುತ್ತೆ. ಗ್ಯಾಪಲ್ಲಿ ಒಂದು ಹುಡುಗಿಯ ಮುಖ ರಪ್ ಅಂತ ಪಾಸಾಗುತ್ತೆ..! ಅಲ್ಲಿ ಕಾಮವಿಲ್ಲ, ಪ್ರೇಮವೂ ಇಲ್ಲ, ಆದ್ರೆ ಅವಳು ಗೆಳತಿಯೂ ಅಲ್ಲ..! ಹಂಗಂದ್ರೆ ಹೆಂಗೆ ಅಂತ ಕೇಳಂಗಿಲ್ಲ, ಅದು ನಮಗೂ ಗೊತ್ತಿಲ್ಲ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅವತ್ತು ಕಿರಣ್ ಅವನ ಫ್ರೆಂಡ್ ಮೀಟ್ ಮಾಡೋಕೆ ಅಂತ ಹೋಗಿದ್ದ, ಆದ್ರೆ ಅವನ ಫ್ರೆಂಡ್ ಜೊತೆಯಲ್ಲಿ ಅವನ ಆಫೀಸಿನ ಐದಾರು ಜನ ಇದ್ದಾರೆ. ಸರಿ ಸರಿ ತಪ್ಪೇನು,ಆವನೂ ಅವರಲ್ಲಿ ಕೆಲವರನ್ನು ಈ ಹಿಂದೆ ನೋಡಿರೋದ್ರಿಂದ ಅಡ್ಜಸ್ಟ್ ಆಗೋಕೆ ಜಾಸ್ತಿ ಹೊತ್ತು ಬೇಕಾಗಲಿಲ್ಲ..! ಅವನಿಗೆ ಆ ಐದಾರು ಜನರಲ್ಲಿ ತಲೆ ಕೆರ್ಕೊಂಡು ನೆನಪಿಸಿಕೊಂಡ್ರು ಆ `ಸ್ನಿಗ್ಧ ಸುಂದರಿ’ ಬಿಟ್ಟು ಬೇರೆ ಯಾರೂ ನೆನಪಾಗಲೇ ಇಲ್ಲ..! ಆದ್ರೂ ಪರ್ವಾಗಿಲ್ಲ, ಈಗ ಜೊತೆಗಿರೋರು ನನ್ನ ಗೆಳೆಯನ ಫ್ರೆಂಡ್ಸ್ ಅಂದಮೇಲೆ ಅವರು ಕಿರಣ್ ಗೂ ಫ್ರೆಂಡ್ಸೇ..! ಆ ಸ್ನಿಗ್ಧ ಸುಂದರಿಯ ಪಕ್ಕದಲ್ಲಿ ಒಬ್ಬಳು `ಕೃಷ್ಣ ಸುಂದರಿ’..! ಅವಳು ಅದ್ಭುತ ಚೆಲುವೆ ಏನಲ್ಲ, ಆದ್ರೆ ಅವಳ ಚೆಲುವು ಚೆಲುವಿಗಿಂತ ಚೆಲುವಾಗಿದೆ..! ಅದೇ ರಪ್ ಅಂತ ಪಾಸಾಗುತ್ತೆ ಅಂತಾರಲ್ಲ ಹಾಗೆ..! ಕಿರಣ್ ಗೆ ಅವಳಲ್ಲೇನೋ ವಿಶೇಷತೆ ಇದೆ ಅನ್ನಿಸ್ತು..! ಹಾಗೇ ಕದ್ದು ಕದ್ದು ನೋಡೋ ಕಳ್ಳ ಯಾರು ಅನ್ನೋ ಹಾಗೆ ಅವಳನ್ನೇ ಕದ್ದು ಕದ್ದು ನೋಡೋಕೆ ಶುರು ಮಾಡ್ದ..! ಕಿರಣ್ ಗೆ ಮಾಡೋಕೆ ನೂರು ಕೆಲಸ ಇದೆ, ಆದ್ರೆ ಅಲ್ಲಿಂದ ಎದ್ದು ಹೋಗೋ ಮನಸ್ಸೇ ಇಲ್ಲ..! ದಿನಾ ಇಂತಹ ನೂರು ಹುಡುಗೀರನ್ನ ನೋಡ್ತೀನಿ, ನಾನ್ಯಾಕೆ ಇವಳನ್ನ ಹೀಗೆ ನೋಡ್ತಿದ್ದೀನಿ ಅಂತ ಕಿರಣ್ ಗೆ ಅನಿಸಿದ್ರೂ ಸಹ, ಆ ನೂರು ಹುಡುಗೀರಲ್ಲಿ ಇಲ್ಲದ ವಿಶೇಷತೆ ಇವಳಲ್ಲಿದೆ ಅಂತ ಅನಿಸಿ ಅವನಿಗವನೇ ಸಮಾಧಾನ ಮಾಡ್ಕೊಂಡ..! ಅವತ್ತು ಭಾನುವಾರವಾಗಿದ್ದರಿಂದ ಗೆಳೆಯನ ಜೊತೆ, ಅವನ ತಂಡದ ಜೊತೆ ಕಿರಣ್ ನಗರ ಪರ್ಯಟನೆ ಶುರು ಆಯ್ತು..! ಮತ್ತೆ ಹೋಗಿ ಇನ್ನೊಂದು ಹೋಟೆಲಿನಲ್ಲಿ ಕೂತಾಗ ಆ ಕೃಷ್ಣ ಸುಂದರಿ ಕಣ್ಣೆದುರಲ್ಲೇ ಇದ್ದಾಳೆ..! `ನಿನ್ನ ನೋಡಲೆಂತೋ, ಮಾತನಾಡಲೆಂತೋ, ಹೇಳಲೊಂಥರಾ ಥರಾ.. ಕೇಳಲೊಂಥರಾ ಥರಾ..!’ ಅವಳನ್ನ ಮತ್ತೆ ಮತ್ತೆ ನೋಡಬೇಕು ಅನಿಸ್ತಿತ್ತು ಅವನಿಗೆ. ಆದ್ರೆ ಅವಳು ತಪ್ಪು ತಿಳ್ಕಂಡ್ರೆ ಅನ್ನೋ ಭಯ..! ಆದ್ರೂ ಆ ಮುಖವನ್ನು ಅವನ ಬ್ರೇನಿನ ಸ್ಕ್ಯಾನರ್ ನಲ್ಲಿ ಸ್ಕ್ಯಾನ್ ಮಾಡ್ಕೋತಾ ಇದ್ದ..! ಹೀಗೇ ಒಂದೆರೆಡು ಗಂಟೆ ಕಳೀತು, ಅವಳ ಮುಖ ಮೊದಲಿಗಿಂತ ಸುಂದರವಾಗಿ ಕಾಣೋಕೆ ಶುರುವಾಯ್ತು..! ಕೆಲವರ ಮುಖ ಹಾಗಿರುತ್ತೆ, ಮೊದಲು ನೋಡಿದಾಗ ಅಷ್ಟಕ್ಕಷ್ಟೆ ಅನ್ಸುತ್ತೆ. ಆದ್ರೆ ನೋಡ್ತಾ ನೋಡ್ತಾ ಇವಳಂತ ಚೆಲುವೆ ಇಲ್ಲ ಅನ್ಸುತ್ತೆ..! ಹಾಗೇ ಕಿರಣ್ ಗೂ ಅವಳನ್ನು ನೋಡಿದ್ರೆ ಹಾಗೇ ಅನ್ನಿಸ್ತಿತ್ತು. ಅವಳ ಲೂಸ್ ಹೇರ್, ತೀಡಿದ ಹುಬ್ಬಿನ ನಡುವೆ ದೃಷ್ಟಿಗೇನೋ ಅನ್ನೋ ತರ ಇರೋ ಸಣ್ಣ ಗ್ಯಾಪ್, ಮಾತುಮಾತಿಗೂ ಮುಗ್ಧಾತಿಮುಗ್ಧವೆನಿಸೋ ನಗು, ಎದುರಿಗಿರೋ ಕೆಟ್ಟ ಕಣ್ಣುಗಳನ್ನು ನುಂಗಿನೀರು ಕುಡಿಸಿಬಿಡೋ ಆ ಮೋಹಕ ಕಣ್ಣುಗಳು… ಅವಳೊಂಥರಾ ಕಂಪ್ಲೀಟ್ ಪ್ಯಾಕೇಜ್..! ಆದ್ರೂ ಅವಳ ಪಕ್ಕದಲ್ಲಿ ಕೂತಿರೋ ಸ್ನಿಗ್ಧ ಸುಂದರಿಗಿಂತ ಇವಳೇನು ಚೆಲುವೆಯಲ್ಲ..! ಆದ್ರೆ ಅವಳದು ಚೆಂದದ ಚೆಲುವಾದ್ರೆ, ಇವಳದು ಕಾಡುವ ಚೆಲುವು..ಇವಳ್ಯಾರೋ ರಪ್ ಅಂತ ಪಾಸಾಗೋ ಹುಡುಗಿಯೇನೋ ಅನ್ಕೊಂಡ್ರೆ ಈ ಕೇಸ್ ಹಾಗಿಲ್ಲ, ಮತ್ತೆಮತ್ತೆ ಕಾಡ್ತಾಳೆ..! ಮತ್ತೆ ಅವಕಾಶ ಸಿಕ್ಕಿದ್ರೆ ನೋಡಬೇಕು ಅಂತ ಅನಿಸ್ತಾಳೆ..! ಅವನಿಗೆ ಅವಳ ಮೇಲೆ ಪ್ರೇಮಗೀಮ ಇಲ್ಲ, ಬೇರೆ ಯಾವ ಕೆಟ್ಟ ಉದ್ದೇಶವೂ ಇಲ್ಲ. ಆದ್ರೆ ಅವಳೊಂದು ಚೆಂದದಾ ಉಯ್ಯಾಲೆ ಅಂತ ಅನ್ನಿಸ್ತಿದ್ದಾಳೆ..! ಅವನು ಕಂಡ ಸುಂದರಿಯರ ಸಾಲಲ್ಲಿ ಟಾಪ್ ಲೀಸ್ಟಲ್ಲಿ ಇದ್ದಾಳೆ..! ಅವಳು ಟಾಟಾ ಮಾಡಿ ಹೋದ ಹತ್ತೇ ನಿಮಿಷಕ್ಕೆ ಅವಳ ಫೇಸ್ ಬುಕ್ ಪೇಜ್ ಪ್ರೊಫೈಲ್ ಹುಡುಕಿ ಅವಳಿಗೇ ಹೇಳಿಬಿಟ್ಟ, `ನೀವು ತುಂಬಾ ಮುದ್ದಾಗಿದೀರಿ, ಕಣ್ರೀ..! ಆ ಕಡೆಯಿಂದ ಉತ್ತರ ಬಂತು, ಅಯ್ಯೋ ನಿಜಾನ, ನಂಗೇನೋ ಹಂಗನ್ಸಲ್ಲಪ್ಪ, ನನ್ನ ಪಕ್ಕ ಇದ್ರಲ್ಲ, ಅವರಾದ್ರೆ ಸೂಪರ್ ಫಿಗರ್..!’ . ಮನಸಲ್ಲೇ ಅಂದುಕೊಂಡ, ಕಾಡಿದ ಹುಡುಗಿಗೇನು ಗೊತ್ತು, ಕಾಡುವ ಮನಸ್ಸಿನ ಭಾವ..! ಅವಳಿನ್ನೂ ಮಗು ಮನಸ್ಸಿನವಳು, ಅವಳಿಗೆ `ಯಶಸ್ಸು’ ಸಿಗಬೇಕು, ಖುಷಿಯಾಗಿ ಇರಬೇಕು ಅಂತ ಹಾರೈಸೋದಷ್ಟೆ ಸದ್ಯದ ಕೆಲಸ..! ಕಿರಣ್ ಗೆ ಮದ್ವೆ ಆಗದೇ ಇದ್ದಿದ್ರೆ ಅವಳಿಗೆ ಮೊದಲ ಭೇಟಿಯಲ್ಲೇ ಮಂಡಿಯೂರಿ `ಮದ್ವೆ ಆಗ್ತಿಯಾ’ ಅಂತ ಕೇಳಿಬಿಡ್ತಿದ್ನೇನೋ..! ಆದ್ರೆ ಈಗದು ಆಗದ ಮಾತು..!! ಸದ್ಯಕ್ಕೆ ಅವಳಲ್ಲಿ, ಇವನಿಲ್ಲಿ..! ಮುಂದೆಂದೂ ಸಿಗಬೇಡ, ಮತ್ತೆ ನನ್ನ ಕಾಡಬೇಡ ಅನ್ನೋದಷ್ಟೇ ಕಿರಣ್ ಮನದ ಮಾತು..!
ಇಂತಹ ಸಾಕಷ್ಟು ಅನುಭವಗಳು ಸಾಕಷ್ಟು ಜನರ ಜೀವನದಲ್ಲಿ ನಡೆದಿರುತ್ತೆ..! ಆ ಕಾಡುವ ಹುಡುಗಿಯರು ಜೀವನದ ಪುಟಗಳಲ್ಲಿ ಒಂದು ಚೆಂದದ ಪುಟ ಅಷ್ಟೆ..! ಆ ಚೆಂದದ ಪುಟವನ್ನು ಹರಿಯೋಕೆ ಮನಸ್ಸು ಬರಲ್ಲ, ಇಟ್ಕೊಂಡ್ರೆ ನೆನಪು ಮಾಸಲ್ಲ..! ಪುಟ ಹಾಗೇ ಇರಲಿ, ಆದ್ರೆ ಮತ್ತೆಮತ್ತೆ ನೆನಪಾಗದಿರಲಿ…
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!