No menu items!
13.9 C
Munich
Wednesday, April 29, 2026

ಸ್ಪೆಲ್ ಬಿ ಸೀಸನ್ 8 ಸ್ಪರ್ಧೆಯಲ್ಲಿ ಗೆದ್ರು ನಮ್ಮ ಬೆಂಗಳೂರ ವಿದ್ಯಾರ್ಥಿನಿಯರು..!

Must read

ದೇಶದ ಅತಿದೊಡ್ಡ ಸ್ಪೆಲಿಂಗ್ ಸ್ಪರ್ಧೆ `ಕ್ಲಾಸ್‍ಮೇಟ್ ಸ್ಪೆಲ್‍ಬಿ’ 8ನೇ ಸೀಸನ್ ನಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಮೊದಲೆರಡು ಸ್ಥಾನವನ್ನು ಪಡೆದಿದ್ದಾರೆ. ಬೆಂಗಳೂರಿನ ಕುಮಾರನ್ಸ್ ಚಿಲ್ಡ್ರನ್ ಹೋಂ ಸಿಬಿಎಸ್‍ಇ ನ ವಿದ್ಯಾರ್ಥಿನಿ ಅನನ್ಯ ಜಿ ಉಪಧ್ಯಾಯ ರಾಷ್ಟ್ರದ ಅತಿದೊಡ್ಡ ಸ್ಪೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂತೆಯೇ ಪಿಎಸ್‍ಬಿಬಿ ಲರ್ನಿಂಗ್ ಲೀಡರ್‍ಶಿಪ್ ಅಕಾಡಮಿಯ ಸಂಯುಕ್ತ ಶ್ರೀವತ್ಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ…! ಬೆಂಗಳೂರಿನ ಈ ಇಬ್ಬರು ವಿದ್ಯಾರ್ಥಿನಿಯರು ಗೆಲುವಿನ ನಗೆಬೀರುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ..!
ಸ್ಪೆಲ್‍ಬಿಯ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರ ಹೊಮ್ಮಿರುವ ಅನನ್ಯ 2.5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕಾದ ವಾಷಿಂಗ್ಟನ್ ಡಿ.ಸಿಯಲ್ಲಿ ನಡೆಯುವ ಪ್ರತಿಷ್ಠಿತ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲಿಂಗ ಬೀ ಸ್ಪರ್ಧೆ ವೀಕ್ಷಿಸಲು ಅಪ್ಪ ಅಥವಾ ಅಮ್ಮನೊಂದಿಗೆ ಹೋಗುವ ಅವಕಾಶವನ್ನು ಪಡೆದಿದ್ದಾರೆ..! ಸ್ಪರ್ಧೆಯಲ್ಲಿ ಅಂತಿಮ ನಾಲ್ಕು ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ತಲಾ 50 ಸಾವಿರ ರೂಗಳನ್ನು ಹಾಗೂ ಕ್ಲಾಸ್‍ಮೇಟ್ ವಿಶೇಷವಾಗಿ ವಿನ್ಯಾಸಗೊಳಿಸಿ ಪ್ರಾಯೋಜಿಸಿರುವ ಬಹುಮಾನವನ್ನು ಪಡೆಯುತ್ತಾರೆ.
ದೇಶದ ಪ್ರಮುಖ ನೋಟ್‍ಬುಕ್ ಬ್ರಾಂಡ್‍ಗಳಲ್ಲಿ ಒಂದಾದ ಐಟಿಸಿ ಹಾಗೂ ರೇಡಿಯೋ ಮಿರ್ಚಿ ನಡೆಸುತ್ತಾ ಬಂದಿರುವ ಈ ಸ್ಪರ್ಧೆ ದೇಶದಾದ್ಯಂತ 30 ನಗರಗಳಲ್ಲಿ ನಡೆದಿತ್ತು.. ! 800 ಶಾಲೆಗಳಿಂದ 3ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ರ್ಪಸಿದ್ದರು..! ಈ ಸ್ಪರ್ಧಾಳುಗಳಲ್ಲಿ 16 ವಿದ್ಯಾರ್ಥಿಗಳು ಮಾತ್ರ ಫೈನಲ್ ಪ್ರವೇಶಿಸಿದ್ದರು..! ಅಂತಿಮವಾಗಿ ನಮ್ಮ ಬೆಂಗಳೂರ ಹುಡುಗಿಯರು ವಿಜೇತರಾಗಿದ್ದಾರೆ…! ಇವರಿಗೆ ಶುಭವಾಗಲಿ. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಿದ ಈ ಹುಡುಗಿಯರಿಗೆ ಇವರಿಗೆ ನಿಮ್ಮ ಕಡೆಯಿಂದಲೂ ಅಭಿನಂದನೆ ಹೇಳಿ..!

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಬಿಟ್ಟು ಹೋದ ಹುಡುಗಿಗೆ…!

ಮಗನ ಹೆಣ ಮನೆಯಲ್ಲಿಟ್ಟು ಮತ್ತೊಬ್ಬರ ಮಗನ ಪ್ರಾಣ ಉಳಿಸಿದ್ರು..!

ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article