ಇದು ಹುಚ್ಚು ಪ್ರೀತಿಯ ದುರಂತ ಅಂತ್ಯದ ಕಥೆ…! ದೆಹಲಿ ಮೂಲದ ಯುವತಿ ಬೆಂಗಳೂರಿನಲ್ಲಿ ಪ್ರಿಯಕರನಿಂದಲೇ ಕೊಲೆಯಾದ ರಿಯಲ್ ಸ್ಟೋರಿ.
ಅವಳು ದೆಹಲಿ ಮೂಲದ ವಿಜಯ ಲಕ್ಷ್ಮಿ. ನೋಡೋಕೆ ರೂಪಸಿ. ಅವಳ ಅಂದಕ್ಕೆ ಮನಸೋಲದೇ ಇರೋರೇ ಇಲ್ಲ..! ಅಷ್ಟೊಂದು ಚಂದವಾಗಿದ್ದ ಆಕೆಗೆ ಇಂಥಾ ಸಾವು ಬರಬಾರದಿತ್ತು ಕಣ್ರೀ…! ಪ್ರೀತಿಸಿದ ಗೆಳಯನೇ ಇವಳ ಪಾಲಿಗೆ ಯಮನಾದ..!
ಅವನು ಹರೀಶ್ ಕುಮಾರ್ ನವದೆಹಲಿಯಲ್ಲಿ ಜಿಮ್ ಟ್ರೇನರ್ ಆಗಿದ್ದ. ಈತನನ್ನೇ ವಿಜಯಲಕ್ಷ್ಮೀ ಪ್ರೀತಿಸಿದ್ದು…!
ದೆಹಲಿಯಲ್ಲಿ 5 ತಿಂಗಳ ಹಿಂದೆ ಹರೀಶ್ ಕುಮಾರ್ ಮತ್ತು ವಿಜಯ ಲಕ್ಷ್ಮೀ ನಡುವೆ ಪ್ರೇಮಾಂಕುರವಾಗಿತ್ತು.
ಭವಿಷ್ಯದ ಕನಸು ಕಟ್ಟಿಕೊಂಡು ಅವಳು ಬೆಂಗಳೂರಿಗೆ ಬಂದಿದ್ದಳು. ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಲೈಫ್ ನಲ್ಲಿ ಸೆಟಲ್ ಆದ್ಮೇಲೆ ಮದುವೆ ಆಗೋಣ, ಅಲ್ಲಿಯವರೆಗೂ ಜೊತೆಯಾಗಿರಣ ಅಂತ ಪ್ರಿಯಕರ ಹರೀಶ್ ಕುಮಾರ್ ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಳು.
ಬೆಂಗಳೂರಿನ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿ ಹಳ್ಳಿಯ ಕೈ ತೋಟದ ಮನೆಯಲ್ಲಿ ಅವರಿಬ್ಬರು ಲಿವಿಂಗ್ ಟುಗೆದರ್ ಇದ್ದರು. ಇದ್ದಕ್ಕಿದ್ದಂತೆ ಇಬ್ಬರ ನಡುವಿನ ಸಂಬಂಧ ಹಳಸಿತ್ತು.
ವಿಜಯಲಕ್ಷ್ಮಿ ಹರೀಶ್ ಕುಮಾರ್ ನನ್ನು ಅವೈಡ್ ಮಾಡಿದ್ದಳು. ಇದರಿಂದ ಹರೀಶ್ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿದ್ದ ಅನಿಸುತ್ತೆ. ಆಗಸ್ಟ್ 16 ರಂದು ಇಬ್ಬರ ನಡುವೆ ಜಗಳ ಆಗಿದೆ. ಆಗ ಹರೀಶ್ ವಿಜಯಲಕ್ಷ್ಮಿಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಬಳಿಕ ದೆಹಲಿಗೆ ಪರಾರಿಯಾಗಿದ್ದಾನೆ.
ವೈಟ್ ಫೀಲ್ಡ್ ಪಿಎಸ್ ಐ ಸೋಮಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಪ್ರೇಮ್ ಕಹಾನಿಯೊಂದು ಕೊಲೆಯೊಂದಿಗೆ ಅಂತ್ಯವಾದ ಭಯಾನಕ ಸ್ಟೋರಿ ಬಯಲಾಗಿದೆ. ಪ್ರಕರಣವನ್ನು ಶೀಘ್ರದಲ್ಲೇ ಭೇಧಿಸಿದ ಸೋಮಶೇಖರ್ ತಂಡದ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.