ಲವ್ ಯು 2 ಫಸ್ಟ್ ಹಾಫ್ ನೋಡಿ ಟಿಕೆಟ್ + ಸ್ನ್ಯಾಕ್ಸ್ ದರ ವಾಪಸ್ಸು ಪಡೀರಿ…! ಮತ್ತು ಮುಂದಿನ ಚಿತ್ರದಲ್ಲಿ ನಟನೆ ಅಥವಾ ಕೆಲಸ ಮಾಡುವ ಅವಕಾಶ…
ಪವನ್ ಕುಮಾರ್ ಮತ್ತು ರಘುಭಟ್ ನಾಯಕ ನಟರಾಗಿ, ಕೀರ್ತಿ ಲಕ್ಷ್ಮಿ ನಾಯಕಿಯಾಗಿ ಅಭಿನಯಿಸಿರೋ , ಜಸ್ಟ್ ಬಿಕೆ (ಬಿ.ಕೆ ಮಹೇಶ್) ನಿರ್ದೇಶನದ ಲವ್ ಯು 2 ಸಿನಿಮಾ ಮುಂದಿನ ಶುಕ್ರವಾರ, ಅಂದ್ರೆ ಜುಲೈ ,13 ರಂದು ರಿಲೀಸ್ ಆಗ್ತಿದೆ.
ಈಗಾಗಲೇ ಈ ಚಿತ್ರದ ಹಾಡುಗಳು ಸದ್ದು ಮಾಡ್ತಿವೆ. ನಾಯಕ ಪವನ್ ಕುಮಾರ್ ಅವರೇ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಲವ್ ಯು 2 ಎಂಬುದು ಸಿನಿಮಾ ಹೆಸರಾದರೂ ಇದು ಲವ್ ಸ್ಟೋರಿ ಅಲ್ವಂತೆ. ಹಾಗಂತ ಚಿತ್ರದ ಟ್ಯಾಗ್ ಲೈನ್ ನಲ್ಲೇ ಇದೆ. ಚಿತ್ರ ವಿಭಿನ್ನ ಕಥಾ ಹಂದರ ಹೊಂದಿದ್ದು , ಖಂಡಿತಾ ಚಿತ್ರರಸಿಕರ ಮನಗೆಲ್ಲುತ್ತೆ ಅನ್ನೋದು ಚಿತ್ರತಂಡದ ಭರವಸೆ.
ಚಿತ್ರತಂಡ ವೀಕ್ಷಕರಿಗೊಂದೊಳ್ಳೆ ಆಫರ್ ನೀಡಿದೆ.
ಚಿತ್ರದ ಫಸ್ಟ್ ಹಾಫ್ ನ ಬಳಿಕ ಮುಂದೇನಾಗುತ್ತದೆ ಎಂದು ಊಹಿಸಿ ತನ್ನ ಸಿನಿಮಾ ಪೇಜ್ ಗೆ ಪೋಸ್ಟ್ ಮಾಡೋ ಅವಕಾಶ ನೀಡಿದೆ. ಈ ಊಹೆ ಬಹುತೇಕ 90ರಷ್ಟು ಸರಿಯಾಗಿದ್ದರೆ ಟಿಕೆಟ್ ದರ ಹಾಗೂ ಅಲ್ಲಿ ತೆಗೆದುಕೊಂಡ ಸ್ನ್ಯಾಕ್ಸ್ ದರ ವಾಪಸ್ಸು ನೀಡಲಾಗುತ್ತದೆ…! ಟಿಕೆಟ್ ಮತ್ತು ಸ್ನ್ಯಾಕ್ಸ್ ಬಿಲ್ ಜೋಪಾನವಾಗಿಟ್ಟುಕೊಂಡು ತೋರಿಸಬೇಕು.
ಅಷ್ಟೇ ಅಲ್ಲದೆ ಮುಂದಿನ ಚಿತ್ರದಲ್ಲಿ ನಟನೆ ಅಥವಾ ತಾಂತ್ರಿಕ ವಿಭಾಗದಲ್ಲಿ ತಂಡದೊಂದಿಗೆ ಕೆಲಸ ಮಾಡೋ ಅವಕಾಶವೂ ನಿಮ್ಮದಾಗಲಿದೆ.
ಹೀಗೆ ಚಿತ್ರದ ಸೆಕೆಂಡ್ ಹಾಫ್ ಏನೆಂದು ಹೇಳುವವರು ಚಿತ್ರತಂಡದ ಯಾರ ಒಡನಾಡಿಯೂ ಆಗಿರಬಾರದು. ಅವರ ಜೊತೆ ನಿರಂತರ ಸಂಪರ್ಕದಲ್ಲಿರುವವರಾಗಿರಬಾರದು. ಇದು ಫಸ್ಟ್ ಶೋಗೆ ಮಾತ್ರ ಅನ್ವಯ. ಇಂಟರ್ವಲ್ ನ ಬಿಡುವಿನ 15 ನಿಮಿಷದ ಅವಧಿಯೊಳಗೆ ಸೆಕೆಂಡ್ ಆಫ್ ನಲ್ಲಿ ಏನಿದೆ ಅಂತ ಹೇಳಬೇಕು. ಆ ಬಳಿಕ ತಿಳಿಸಿದರೆ , ಅದು ಪರಿಗಣನೆಗೆ ಬರುವುದಿಲ್ಲ.
ಸಿನಿಮಾ ನೋಡಿ ಯಾರು ಸೆಕೆಂಡ್ ಹಾಫ್ ಸರಿಯಾಗಿ ಹೇಳಿ ಟಿಕೆಟ್ ದರ. ವಾಪಸ್ಸು ಪಡೆಯುತ್ತೀರ ನೋಡೋಣ…ನೀವು ಅದರಲ್ಲಿ ಒಬ್ಬರಾಗೋ ಅವಕಾಶವಿದೆ.
ಕ್ಲಿಕ್ ಮಾಡಿ , ಸೆಕೆಂಡ್ ಆಫ್ ಏನೆಂದು ಬರೀರಿ…
https://www.facebook.com/Love-U2-602200433281926/