ರಘುಭಟ್, ಪವನ್ ಕುಮಾರ್, ಕೀರ್ತಿ ಲಕ್ಷ್ಮೀ ಅಭಿನಯದ ಲವ್ ಯು 2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.ನಾಯಕರಾದ ರಘುಭಟ್ ಹಾಗೂ ಪವನ್ ಕುಮಾರ್ ಇಬ್ಬರಿಗೂ ಒಬ್ಬರೇ ನಾಯಕಿ. ಆದ್ರೆ, ಈಕೆ ಕೊನೆಯಲ್ಲಿ ಯಾರನ್ನು ಒಪ್ಪಿಕೊಳ್ಳುತ್ತಾರೆ ಅನ್ನೋದಕ್ಕೆ ನಾವು ಸಿನಿಮಾ ನೋಡಲೇಬೇಕು.
ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಜಸ್ಟ್ ಬಿ.ಕೆ (ಮಹೇಶ್) ನಿರ್ದೇಶನದ ಚೊಚ್ಚಲ ಚಿತ್ರವಿದು. ಇದಕ್ಕೆ ಬಂಡವಾಳ ಹಾಕಿರೋರು ಸಹ ಚಿತ್ರರಂಗಕ್ಕೆ ಹೊಸಮುಖ. ಪವನ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿರುವುದರ ಜೊತೆಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕರ್ವ, ನನ್ನ ನಿನ್ನ ಪ್ರೇಮಕಥೆ, ತಾರೆ, ದಾದ ಈಸ್ ಬ್ಯಾಕ್ ಸೇರಿದಂತೆ ಕೆಲವೊಂದಿಷ್ಟು ಚಿತ್ರದಲ್ಲಿ ನಟಿಸಿರುವ ರಘುಭಟ್ ಈ ಚಿತ್ರದ ಮತ್ತೊಬ್ಬ ನಾಯಕ ನಟರು. ಕೀರ್ತಿ ಲಕ್ಷ್ಮಿ ನಾಯಕಿ. ಇದು ಪ್ರೇಮಕಥೆಯಲ್ಲ ಎಂದು ಹೇಳುತ್ತಿರುವ ಚಿತ್ರತಂಡ ಒಂದೊಳ್ಳೆ ಸಂದೇಶವನ್ನು ನೀಡಲಿದೆಯಂತೆ. ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ ಕುತೂಹಲ ಹೆಚ್ಚಿಸಿದೆ.
ಇಲ್ಲಿದೆ ಲವ್ ಯು 2 ಟ್ರೇಲರ್