ಲವ್ ರಿಸೆಟ್ ಮಾಡಲು ಬರ್ತಿದೆ ಹೊಸ ತಂಡ

Date:

‘ಲವ್ ರಿಸೆಟ್’ ಹೊಸ ಕಿರು ಚಿತ್ರ . ಡಿಫರೆಂಟ್ ಹೆಸರನ್ನ ಹೊಂದಿರುವ ಈ ಚಿತ್ರ ಅಷ್ಟೇ ಸ್ಪೇಷಲ್ಲಾಗಿ ಮೂಡಿ ಬರುತ್ತಿದೆ . ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವುಳ್ಳ ಶ್ರೀ ಗಣೇಶ್ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಕಿರುಚಿತ್ರದಲ್ಲಿ ಸಿನಿಮಾದಂತೆಯೇ ಬ್ಯೂಟಿಫುಲ್ ಲೊಕೇಶನ್ ನಲ್ಲಿ ಸೆರೆ ಹಿಡಿದ ಹಾಡನ್ನ ಶೂಟ್ ಮಾಡಲಾಗಿದೆ . ಇಂದು ಶ್ರೀ ಗಣೇಶ್ ಹಾಗೂ ಅವರ ತಂಡ ‘ಲವ್ ರಿಸೆಟ್’ ಹಾಡಿನ್ನ ಪ್ರೇಕ್ಷಕರಿಗೆ ಅರ್ಪಿಸಿದೆ .

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಪವನ್ ಹಾಗೂ ಸಂಜನಾ ಬುರ್ಲಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ . ಲವ್ ಸಬ್ಜೆಕ್ಟ್ ಒಳಗೊಂಡ ಕಿರುಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ‘ಅನುರಾಗದ ನೆನಪೀಗ ಕೊನೆಯಾಗಲಿ’ ಎಂಬ ಸುಂದರವಾದ ಹಾಡು ಈ ಚಿತ್ರದಲ್ಲಿದೆ . ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ಈ ಹಾಡುಗಳಿಗೆ ದನಿಯಾಗಿದ್ದಾರೆ . ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಶ್ ಸಂಗೀತ ನಿರ್ದೇಶನವಿದೆ. ಅಂದ್ಹಾಗೆ ನಾಳೆ ಎ2 ಮ್ಯೂಸಿಕ್ ನಲ್ಲಿ ಈ ಸಾಂಗ್ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ಶ್ರೀಗಣೇಶ್ ಮಾತನಾಡಿ ನಾವಿದನ್ನು ಕಿರುಚಿತ್ರ ಅಂತ ಮಾಡಿಲ್ಲ. ಒಂದು ಸಿನಿಮಾ ರೀತಿ ಮಾಡಿದ್ದೀವಿ. ಕ್ವಾಲಿಟಿ ಕೂಡ ಸಿನಿಮಾ ರೀತಿಯೇ ಮೂಡಿಬಂದಿದೆ. ಕಲಾವಿದರು, ತಂತ್ರಜ್ಞರು ಪ್ರತಿಯೊಬ್ಬರು ಅನುಭವವುಳ್ಳವರೇ ಇಲ್ಲಿ ಕೆಲಸ ಮಾಡಿದ್ದಾರೆ. ಕಿರುಚಿತ್ರ ಎಂದು ಬಂದಾಗ ಹಾಡು ಅಥವಾ ಟೀಸರ್ ಬಿಡುಗಡೆ ಮಾಡಿ ಪ್ರಮೋಷನ್ ಮಾಡೋದು ಬಹಳ ಕಡಿಮೆ. ಅಂತಹದ್ದೊಂದು ಪ್ರಯತ್ನವನ್ನು ನಾವು ಮಾಡಿದ್ದೇವೆ. ಸದ್ಯ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಇದೇ ತಿಂಗಳ ಕೊನೆಯಲ್ಲಿ ‘ಲವ್ ರಿಸೆಟ್’ ಕಿರುಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ .

ನಿರ್ದೇಶಕರು ಕಿರುಚಿತ್ರದ ಬಗ್ಗೆ ಹೇಳಿದಾಗ ಹಾಗೂ ಸಿನಿಮಾದಲ್ಲಿರುವಂತೆ ಹಾಡು ಕೂಡ ಇದೆ ಎಂದಾಗ ಸಖತ್ ಇಂಟ್ರಸ್ಟಿಂಗ್ ಎನಿಸಿತು. ಜೊತೆಗೆ ಶ್ರೀ ಗಣೇಶ್ ಅವರ ಕೆಲಸದ ಬಗ್ಗೆ ಮುಂಚೆಯೇ ತಿಳಿದಿತ್ತು. ಆದ್ರಿಂದ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಕಲಾವಿದರು, ತಂತ್ರಜ್ಞರಿಗೂ ಲವ್ ಸ್ಟೋರಿ ಅಂತ ಇರುತ್ತೆ. ಪ್ರೀತಿ ಹಾಗೂ ಕೆರಿಯರ್ ಅಂತ ಬಂದಾಗ ಅದನ್ನು ಹೇಗೆ ಮ್ಯಾನೇಜ್ ಮಾಡ್ತಾರೆ ಅನ್ನೋದ್ರ ಸುತ್ತ ಹೆಣೆಯಲಾದ ಕಥೆ ಕಿರುಚಿತ್ರದಲ್ಲಿದೆ ಎಂದು ನಾಯಕ ಪವನ್ ಹೇಳಿದ್ರು.

ಈ ಕಿರುಚಿತ್ರವನ್ನು ಸಂತೋಷ್ ನಿರ್ಮಿಸಿದ್ದು, ಮ್ಯಾಜಿಕ್ ಫ್ರೇಮ್ ಕ್ರಿಯೇಷನ್ಸ್ ಸಹ ನಿರ್ಮಾಣವಿದೆ. ಪ್ರಜ್ವಲ್ ಭಾರಧ್ವಜ್ ಛಾಯಾಗ್ರಹಣ, ಜೋಯಲ್ ಹಾಗೂ ಅಭಿಲಾಶ್ ಸಂಗೀತ ನಿರ್ದೇಶನ, ಅಸ್ಲಾಮ್ ಮತ್ತು ಕೃಷ್ಣ ಸುಜ್ಞಾನ್ ಸಂಕಲನ, ರಂಜಿತ್ ಶಂಕರೆ ಗೌಡ ಸಹ ನಿರ್ದೇಶನ ಈ ಕಿರುಚಿತ್ರಕ್ಕಿದೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...