ಗುಲಾಬಿ ಹಿಡಿದು ಪ್ರಪೋಸ್ ಮಾಡೋದು ಮಾಮಾಲು. ಅಂಡರ್ ವಾಟರ್, ಹಾಟ್ ಏರ್ ಬಲೂನ್ ನಲ್ಲಿ, ಪರ್ವತದ ತುತ್ತ ತುದಿಯಲ್ಲಿ ನಿಂತು ಪ್ರಪೋಸ್ ಮಾಡಿದವರನ್ನೂ ನೀವು ನೋಡಿದ್ದೀರಿ.
ಆದರೆ ವರುಣ್ ಭಾನೋಟ್ ಎಂಬ ಯುವಕ ತುಂಬಾ ಡಿಫ್ರೆಂಟ್ ಆಗಿ ಪ್ರಪೋಸ್ ಮಾಡಿದ್ದಾನೆ. ಈತ ನಾಲ್ಕು ವರ್ಷದಿಂದ ಅನಿಶಾ ಸೇತ್ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆಗಸ್ಟ್ 3ರಂದು ಆಕೆಯ ಹುಟ್ಟುಹಬ್ಬದ ದಿನ ವಿಭಿನ್ನವಾಗಿ ಪ್ರಪೋಸ್ ಮಾಡಿದ್ದಾನೆ.
ಹುಟ್ಟುಹಬ್ಬ ಆಚರಣೆಗೆ ಹೊರಗೆ ಹೋಗ್ತಿದ್ದೀವಿ. ಸ್ಪಾಗೆ ಹೋಗ್ತಾ ಇದ್ದೀವಿ. ಅವರಿಂದ ಹೆಲಿಕ್ಯಾಪ್ಟರ್ ರೈಡ್ ಗೆ ಕೂಪನ್ ಸಿಕ್ಕಿದೆ ಎಂದು ಹೇಳಿದ್ದ. ಆದರೆ, ಅವಳಿಗೆ ಬೇರೆಯದೇ ಸರ್ಪೈಸ್ ಕಾದಿತ್ತು…!
ಅನಿಶಾಗೆ ಸೈನ್ಸ್ ಫಿಕ್ಷನ್ ಹಾಗೂ ಸ್ಪೇಸ್ ಸಂಬಂಧಿಸಿದ ವಿಷಯಗಳು ಅಂದ್ರೆ ಇಷ್ಟ. ಅವಳು ತಾನು ಚೆಶೈರ್ ನ ಹಳ್ಳಿ ವಾತಾವರಣದಲ್ಲಿ ಹಾರಾಡ್ತೀನಿ ಅಂದುಕೊಂಡಿದ್ದಳು. ಆದರೆ, 200ಅಡಿ ಮೇಲೇರಿದ ಬಳಿಕ ಜೋಳಾದ ಹೊಲದಲ್ಲಿ ಅವಳಿಗೆ ಅಚ್ಚರಿಯೊಂದು ಎದುರಾಗಿತ್ತು.
ಜೋಳಾದ ಸಾಲಿನಲ್ಲಿ ‘ಅನಿಶಾ ಮ್ಯಾರಿ ಮಿ’ ಅನ್ನೋ ಮೆಸೇಜ್ ಡಿಸೈನ್ ಮಾಡಿಸಿದ್ದ. ವಿಲ್ ಯು ಮ್ಯಾರಿ ಮಿ ಎನ್ನೋ ಬದಲು ಅನಿಶಾ ಮ್ಯಾರಿ ಮೀ ಅನ್ನೋದು ಡಿಫರೆಂಟ್ ಆಗಿತ್ತು. ನಂತರ ಉಂಗುರು ಹಾಕಿ ಪ್ರೀತಿ ನಿವೇಧಿಸಿಕೊಂಡಿದ್ದಾನೆ. ಆಕೆ ಒಪ್ಪಿಕೊಂಡಿದ್ದಾಳೆ.