ಅವಳನ್ನು ಅವಳೇ ಯಾರ ರೂಪಕ್ಕೆ ಬೇಕಾದರೂ ಬದಲಾಯಿಸಬಲ್ಲಳು…ನಿಮಗಿದು ಗೊತ್ತೇ???

Date:

ಬಣ್ಣ ಬದ್ಲಾಯ್ಸೋ ಊಸರವಳ್ಳಿ (ಗೋಸುಂಬೆ) ಬಗ್ಗೆ ಗೊತ್ತು,ಸಿನಿಮಾ ಹಾಗೂ ನಾಟಕಗಳಲ್ಲಿ ವಿವಿಧ ಮೇಕಪ್ ಗಳಿಂದ ರೂಪ ಬದ್ಲಾಯ್ಸೋ ತಾರೆಯರ ಬಗ್ಗೆ ಗೊತ್ತು ಬೇರೆ ಬೇರೆ ಆಧುನಿಕ ತಂತ್ರಜ್ನಾನದಿಂದ ಸುಂದರವಲ್ಲದ ಮನುಷ್ಯರನ್ನು ಸುಂದರವನ್ನಾಗಿ ಮಾಡೋ ವಿಧಾನದ ಬಗ್ಗೆನೂ ಗೊತ್ತು ಆದ್ರೆ ತನ್ನನ್ನು ತಾನೆ ರೂಪಾಂತರ ಮಾಡೊ ಮನುಷ್ಯರ ಬಗ್ಗೆ ಗೊತ್ತೆ??ಕೇಳಿದ್ದೀರಾ??ಬಹುಶಃ ಇರಲಾರದು!ಇಲ್ಲೊಬ್ಬ ಮಹಿಳೆ ಈ ತರನಾದ ಕೆಲ್ಸ ಮಾಡೋದ್ರಲ್ಲಿ ಎತ್ತಿದ ಕೈ…ಆಕೆ ಯಾರು ಅಂತ ನೋಡೋಣ್ವೆ???

ಲೂಸಿಯಾ ಪಿಟ್ಟಾಲಿಸ್  48 ವರ್ಷ ವಯಸ್ಸಿನ ಒಬ್ಬ ಇಟೆಲಿಯನ್ ಮೇಕಪ್ ಕಲಾವಿದೆ; ವೇಷ ಬದಲಾಯಿಸುವುದರಲ್ಲಿ ತುಂಬಾ ಪ್ರವೀಣೆಈಕೆ.ಮೇಕಪ್ ನ ಒಂದೆರಡು ಎಳೆಗಳಿಂದ ಮುಖದ ವಿನ್ಯಾಸವನ್ನು ಬದಲಾಯಿಸುತ್ತಾ ಈಕೆ ತನಗೆ ತಾನೆ ಹೊಸ ರೂಪು ಕೊಡುವುದರಲ್ಲಿ ನಿಸ್ಸೀಮಳು.ಅವಳನ್ನು ಅವಳೇ ಯಾರ ರೂಪಕ್ಕೆ ಬೇಕಾದರೂ ಬದಲಾಯಿಸಬಲ್ಲಳು.ಯಾವುದೇ ರೂಪದಲ್ಲಾದರೂ ಸರಿ ಆ ವ್ಯಕ್ತಿಯೇ ನಮ್ಮ ಕಣ್ಣ ಮುಂದೆ ಬಂದು ನಿಂತಂತಹ ಅನುಭವ ಕೊಡಬಲ್ಲಾಕೆ ಈಕೆ! ಎಲಿಜಬೆತ್ ರಾಣಿ,ರೋಕಿ,ಜಾಕ್ ಸ್ಪೇರೋ ಹೀಗೆ ಇನ್ನೂ ಅನೇಕ ಹೆಸರುಗಳನ್ನು ನೀವು ಹೇಳುತ್ತಾ ಹೋಗಬಹುದು,ಅವಳು ಬದಲಾಗುತ್ತಾ ಹೋಗುತ್ತಾಳೆ.ಅವಳ ಈ ಕಲೆಯ ಬಗ್ಗೆ ವಿವರಿಸುವುದು ತುಂಬಾ ಕಷ್ಟ.

ಇದನ್ನು ಅವಳದ್ದೇ ಆದ ಮಾತಲ್ಲಿ ಕೇಳಿ ನೋಡಿ..ಅದೇ ಚಂದ.

ನಾನೊಬ್ಬ ಚಿತ್ರ ಹಾಗೂ ಮೇಕಪ್ ಕಲಾವಿದೆ ಮತ್ತೂ ಸಿನಿಮಾ ಹಾಗೂ ಸಂಗೀತ ಪ್ರಿಯೆ.ನನ್ನ ಈ ಅಭಿರುಚಿಯಿಂದ ನಾನು ಕಲಾತ್ಮಕವಾದ ಈ ಸಾಧನೆಯನ್ನು ಮಾಡುವಲ್ಲಿ ಸಫಲಳಾದೆ.ನಾನು ನಿಜವಾಗಲೂ ಈ ತರನಾದ ಪಾತ್ರಮಾಡುವುದು ಕೆಲವೊಮ್ಮೆ ತಮಾಷೆ ಅನ್ನಿಸುತ್ತದ್ದೆ.ಕೇವಲ ಮೇಕಪ್ ಅಲ್ಲದೆ ಕೃತಕವಾಗಿ  ಯಾವುದೆ ಅಂಗಗಳನ್ನು ಬದಲಾಯಿಸ್ಸುತ್ತಿಲ್ಲ. ನನಗೆ ಬೇಕಾಗಿರುವುದು ಇಷ್ಟೆ..ಕೆಲವೊಂದು ಬಗೆಯ ವಿಗ್ ಗಳು ಹಾಗೂ ಮೇಕಪ್ ಸಾಮಗ್ರಿಗಳು.ಇವುಗಳನ್ನು ನಾನು ಮಾರ್ಕೆಟ್ ನಿಂದ ಕೊಂಡು ತಂದು ನಾನು ಮಾಡಬೇಕಾದ ಪಾತ್ರಗಳ ಬಗೆಗಿನ ಹಲವು ಭಾವ ಚಿತ್ರಗಳು,ಸಿನಿಮಾಗಳು ಹಾಗೂ ವೀಡಿಯೋಗಳನ್ನು ನೋಡುತ್ತಾ ಅವರುಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿಕೊಳ್ಳುತ್ತೇನೆ.ಕೆಲವೊಂದು ಹಾಡು ಗಳನ್ನು ಕೇಳುತ್ತಾ ನಾನು ಭಾವುಕಳಾಗುತ್ತಾ ಆ ಪಾತ್ರಗಳಲ್ಲಿ ತಲ್ಲೀನಳಾಗೋ ಪ್ರಯತ್ನ ಪಡುತ್ತೇನೆ.ಆಮೇಲೆ ಕೊನೇಯದಾಗಿ ನನನ್ನು ನಾನು ಗಂಟೆಗಟ್ಟಲೆ ಕನ್ನಡಿಯಲ್ಲಿ ನೋಡುತ್ತಾ ಕಾಲ ಕಳೆಯುತ್ತೇನೆ.

ಈಕೆಯ ಕೆಲವೊಂದು ಮಾಸ್ಟರ್ ಪೀಸ್ ಹಾಗೂ ವೀಡಿಯೋ ಇಲ್ಲಿದೆ ನೋಡಿ.

  • ಸ್ವರ್ಣಲತ ಭಟ್

POPULAR  STORIES :

ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?

ಆಟೋ ಚಾಲಕರ ಸಾರಥ್ಯದಲ್ಲಿ …..Shankar Nag

ರೈಲು ನಿಲ್ದಾಣದಲ್ಲಿ ಪುಕ್ಕಟೆ ವೈ-ಫೈನಲ್ಲಿ ಭಾರತೀಯರು ಏನ್ ಹುಡುಕುತ್ತಾರೆ? ಗೂಗಲ್ ಬಯಲು ಮಾಡಿದ ರಹಸ್ಯ!

ಪ್ರೀತಿಸಿದ ಹುಡುಗನ ಎದೆಗೊರಗಿ ಪ್ರಾಣ ಬಿಡುವ ಮೊದಲು..!? ಅವಳು ಯಾರು? ಯಾಕಾಗಿ ಅವನನ್ನು ದೂರವಿಟ್ಟಳು..!?

ಅರೆರೆ!ಇದೇನಿದು! ವಾಟ್ಸ್ ಆ್ಯಪ್‍ಗೆ ಇತಿಶ್ರೀ ಹಾಡೋ ಕಾಲ ಬಂತೇ????

ಶುರುವಾಯ್ತು ಮತ್ತೆ ಕನ್ನಡಿಗರ ಪರ್ವ..! ಭಾರತ ಕ್ರಿಕೆಟ್‍ನಲ್ಲಿ ಮತ್ತೆ ಹಳೆ ಹುಲಿಗಳು ಘರ್ಜಿಸುತ್ತಿವೆ..!

ಭಾರತೀಯ ಕ್ರಿಕೆಟ್ ದಿಗ್ಗಜರ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೇಲ್ಸ್..!

ಮನೆ ಖರೀದಿಗೆ ಲೋನ್ ಬೇಕೇ????ಎಚ್ಚರ!!!!

ಅಪಘಾತ ಆಗಿದ್ದು 2009ರಲ್ಲಿ, 50,18,979 ರೂಪಾಯಿ ಸಿಕ್ಕಿದ್ದು 2016ರಲ್ಲಿ!

 

 

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...