ಬಸ್ಸಿನ ಸೀಟು ಸುಡುತ್ತದೆ..! ಎಣ್ಣೆ ಏಟು ಕೊಟ್ಟ `ಟೈಟ್' ಸರ್ಕಾರ..!!

Date:

 

ವೀಕೆಂಡ್ ನಲ್ಲಿ, ಹಬ್ಬ ಹರಿದಿನಕ್ಕೆ ಊರಿಗೆ ಹೋಗುವವರಿಗೆ ಲಕ್ಸುರಿ ಬಸ್ಸಿನಲ್ಲಿ ಆರಾಮಾಗಿ ಹೋಗುವ ಇರಾದೆಯಿರುತ್ತದೆ. ಎಸಿ ಬಸ್ಸಿನಲ್ಲಿ, ಸೂಪರ್ ಸೀಟಿನಲ್ಲಿ, ಕಾಲು ಚಾಚಿಕೊಂಡು ಮಲಗಿ ಊರು ತಲುಪುತ್ತಿದ್ದವರಿಗೆ ಸರ್ಕಾರ ಭರ್ಜರಿ ಹೊರೆಯನ್ನು ಹೊರಿಸಿದೆ. ಲಕ್ಸೂರಿ ಖಾಸಗಿ ವಾಹನಗಳ ಮೇಲೆ ತೆರಿಗೆ ಏರಿಸಿರುವ ಸರ್ಕಾರದ ಕ್ರಮದಿಂದ ಇನ್ನು ಮುಂದೆ ಪ್ರತಿ ಸೀಟಿಗೆ 600ರಿಂದ 900 ರೂಪಾಯಿ ಹೆಚ್ಚು ಮೊತ್ತವನ್ನು ತೆರಬೇಕಾಗಿದೆ. ಒಪ್ಪಂದದ ಮೇರೆಗಿನ ವಾಹನಗಳಿಗೆ ಪ್ರತಿ ಸೀಟ್ಗೆ 1000 ರೂಪಾಯಿಯಿಂದ 1500 ರೂಪಾಯಿ ಹೆಚ್ಚಳವಾಗಲಿದೆ. ಲಕ್ಸೂರಿ ಬಸ್ಸಿನ ಸೀಟಿನಲ್ಲಿ ಕೂರುವ, ಮಲಗುವ ಮುನ್ನ ಯೋಚಿಸಬೇಕಾದ ಪರಿಸ್ಥಿತಿ ಬಂದಿದೆ. ಸೀಟು ಸಿಕ್ಕಾಪಟ್ಟೆ ಸುಡೋದಂತು ಸುಳ್ಳಲ್ಲ.

ಇದರ ಜೊತೆಗೆ ಸರ್ಕಾರ ಮದ್ಯ ಪ್ರಿಯರಿಗೆ ಎಣ್ಣೆ ಏಟನ್ನು ಕೊಟ್ಟಿದೆ. ಮದ್ಯ ಮಾರಾಟ ಶುಲ್ಕದಲ್ಲಿ ಶೇಕಡಾ 25ರಷ್ಟು ಹೆಚ್ಚಿಸಿದೆ. ಬಿಯರ್ ಮೇಲಿನ ಅಬಕಾರಿ ಸುಂಕ 5 ರೂಪಾಯಿಯಿಂದ 10 ರೂಪಾಯಿಗೆ ಏರಿಸಿದೆ. ಹಾಗೆಯೇ ರಫ್ತು ಸ್ಪಿರಿಟ್ ಮೇಲೆ 2 ರೂಪಾಯಿ, ಆಮದಾಗುವ ಸ್ಪಿರಿಟ್ ಮೇಲೆ 1 ರೂಪಾಯಿ ಹೆಚ್ಚಿಸಿದೆ. ಮದ್ಯದ ಮೇಲಿನ ಅಬಕಾರಿ ಶುಲ್ಕವನ್ನು 45ರಿಂದ 50 ರೂಪಾಯಿಗೆ ಹೆಚ್ಚಿಸಿದೆ. ಒಟ್ಟಿನಲ್ಲಿ ಟೈಟ್ ಆಗುವವರಿಗೆ, ಲಕ್ಸೂರಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಸಿದ್ದು ಸರ್ಕಾರ ಸರಿಯಾದ ಗುದ್ದನ್ನೇ ಕೊಟ್ಟಿದೆ.

ಪೆಟ್ರೋಲ್, ಡಿಸೇಲ್ ಮೇಲೂ ಕಣ್ಣಿಟ್ಟ ಸರ್ಕಾರ..! ಬೆಲೆ ಏರಿಕೆಯ ಬಿಸಿ..!?

POPULAR  STORIES :

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...