ಆರ್. ಅಶ್ವಿನ್ನನ್ನು ಮೀರಿಸುತ್ತಿದ್ದಾನೆ ಎಂ. ಅಶ್ವಿನ್..! ಸೀನಿಯರ್ ಅಶ್ವಿನ್ನನ್ನು ದೂರವಿಟ್ರಾ ಕೂಲ್ ಕ್ಯಾಪ್ಟನ್..?

Date:

ಟೀಮ್ ಇಂಡಿಯಾದ ಬೆಸ್ಟ್ ಸ್ಪಿನ್ನರ್ ಆಗಿರುವ ರವಿಚಂದ್ರನ್ ಅಶ್ವಿನ್ ಗೆ ಇದೀಗ ಸಂಕಷ್ಟ ಶುರುವಾಗಿದೆ. ಐಪಿಎಲ್ ನಿಂದಲೇ ಬೆಳಕಿಗೆ ಬಂದಿರುವ ಆರ್.ಅಶ್ವಿನ್ ಇದೀಗ ಇದೇ ಐಪಿಎಲ್ನಿಂದಲೇ ಮರೆಯಾಗೋ ಸಾಧ್ಯತೆ ಇದೆ. ಇದಕ್ಕೂ ಕಾರಣ ಅಶ್ವಿನ್ ಅನ್ನೋ ನಾಮದೇಯ. ಏನಿದು ಅಶ್ವಿನ್ ಹೆಸರಿಗೂ, ಅಶ್ವಿನ್ ಕ್ರಿಕೆಟ್ ನಿಂದ ದೂರವಾಗೋದಕ್ಕೂ ಕಾರಣ ಅಂತಿರಾ ..? ಹಾಗಾದ್ರೆ ಈ ಸ್ಟೋರಿ ನೋಡಿ.

ಟೀಮ್ ಇಂಡಿಯಾಕ್ಕೆ ಸಂಕಷ್ಟಲ್ಲಿದ್ದಾಗ, ಸಿಕ್ಕ ಬಲು ಅಪರೂಪದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ತಮಿಳುನಾಡಿನವರಾದ ಆರ್.ಅಶ್ವಿನ್ ಇದೇ ಐಪಿಎಲ್ ನಲ್ಲಿ ತಮ್ಮ ಕರಾರುವಕ್ಕಾದ ಸ್ಪಿನ್ ಮೋಡಿಯಿಂದ ಗಮನ ಸೆಳೆದು ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ರು. ಅವರು ತಂಡಕ್ಕೆ ಸೇರ್ಪಡೆಯಾಗಲು ಪ್ರಮುಖ ಕಾರಣ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ. ಇದೇ ಮಹಿ, ಆರಂಭದ ಐಪಿಎಲ್ ಟೂರ್ನಿಗಳಲ್ಲಿ ಅಶ್ವಿನ್ ಬೌಲಿಂಗ್ ನೋಡಿ, ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿಸಿ ಸಕ್ಸಸ್ ಕೂಡ ಆಗಿದ್ರು. ಅದೇ ರೀತಿ ಟೀಮ್ ಇಂಡಿಯಾಕ್ಕೂ ಕರೆ ತಂದ್ರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಆರ್. ಅಶ್ವಿನ್ ಟೀಮ್ ಇಂಡಿಯಾದಲ್ಲಿ ಸಕ್ಸಸ್ ಫುಲ್ ಸ್ಪಿನ್ ಬೌಲರ್ ಆಗುವುದರ ಜೊತೆಯಲ್ಲಿ ತಂಡದ ಟ್ರಂಫ್ ಕಾರ್ಡ್ ಕೂಡ ಆಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಉತ್ತಮ ಸ್ಪಿನ್ ಬೌಲಿಂಗ್ ನಡೆಸಿ ತಂಡದ ಖಾಯಂ ಸ್ಪಿನ್ನರ್ ಆಗಿದ್ದ, ಆರ್. ಅಶ್ವಿನ್ ಇದೀಗ ತನ್ನ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ. ಸತತ ವೈಫಲ್ಯವೇ ಇದಕ್ಕೆ ಕಾರಣ. ಮೊನ್ನೆ ಮುಕ್ತಾಯವಾದ ಟಿ20 ವಿಶ್ವಕಪ್ ನಲ್ಲಿ ಕಳಪೆ ಬೌಲಿಂಗ್ ನಡೆಸಿ, ಟೀಕೆಗೆ ಗುರಿಯಾಗಿದ್ದ ಅಶ್ವಿನ್, ಇದೀಗ ಐಪಿಎಲ್ನಲ್ಲೂ ತನ್ನ ಕಳಪೆ ಬೌಲಿಂಗ್ ಮುಂದುವರೆಸಿರುವುದು ಅವರ ಕ್ರಿಕೆಟ್ ಕೆರಿಯರ್ ಮೇಲೆ ಪೆಟ್ಟು ಬೀಳುವ ಸೂಚನೆ ನೀಡಿದೆ..

ಈ ಐಪಿಎಲ್ ನಲ್ಲಿ ಕಮಾಲ್ ಮಾಡುತ್ತಿರುವ ಮುರುಗನ್ ಅಶ್ವಿನ್, ಆರ್. ಅಶ್ವಿನ್ ಗೆ ಸೆಡ್ಡು ಹೊಡೆಯುತ್ತಿದ್ದಾರೆ. ಈ ಅಶ್ವಿನ್ ಕೂಡ ತಮಿಳುನಾಡಿನವರೇ ಅನ್ನೋದು ಮತ್ತೊಂದು ವಿಶೇಷ. ಆರ್.ಅಶ್ವಿನ್ ಅದ್ಯಾಕೋ ಮಂಕಾಗಿದ್ದು, ಧೋನಿ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗ್ತಿದ್ದಾರೆ. ಇದೀಗ ಆರ್.ಅಶ್ವಿನ್ ಬದಲು ಎಂ. ಅಶ್ವಿನ್ ಗೆ ಗಾಳ ಹಾಕಿರುವ ಮಹಿ, ಮತ್ತೊಬ್ಬ ಬೌಲರ್ ಅನ್ನು ತಂಡಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ಪುಣೆ ಟೀಮ್ ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಮುರುಗನ್ ಅಶ್ವಿನ್ ಮ್ಯಾಜಿಕ್ ಮಾಡ್ತಾ ಇದ್ದಾರೆ. 3 ಪಂದ್ಯಗಳಿಂದ 6 ವಿಕೆಟ್ ಪಡೆದಿರುವ ಅಶ್ವಿನ್, ಎದುರಾಳಿಗಳ ರನ್ ವೇಗಕ್ಕೂ ಕಡಿವಾಣ ಹಾಕುತ್ತಿದ್ದಾರೆ. 4.5 ಕೋಟಿಗೆ ಬಿಕರಿಯಾಗಿದ್ದ ಎಂ. ಅಶ್ವಿನ್, ಧೋನಿ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ಕಡೆ ಎಂ.ಅಶ್ವಿನ್ ಐಪಿಎಲ್ ನಲ್ಲಿ ಸದ್ದು ಮಾಡುತ್ತಿದ್ರೆ, ಆರ್. ಅಶ್ವಿನ್ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಒಬ್ಬ ಅಶ್ವಿನ್ ಕ್ಲಿಕ್ ಆದ್ರೆ, ಮತ್ತೊಬ್ಬ ಅಶ್ವಿನ್ ಪ್ಲಾಪ್ ಆಗ್ತಿದ್ದಾರೆ. ಆದ್ರೂ ಇಬ್ಬರಿಗೂ ಧೋನಿ ಉತ್ತಮ ಸಾಥ್ ನೀಡ್ತಾ ಇದ್ದು, ಐಪಿಎಲ್ ಮುಗಿದ ಮೇಲೆ, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆರ್. ಅಶ್ವಿನ್ ವರ್ಸಸ್ ಎಂ..ಅಶ್ವಿನ್ ನಡುವೆ ಸ್ಪಧರ್ೆ ನಡೆಯುವುದಂತು ಖಂಡಿತ..

  •  ಅಂಬರೀಶ್, ಜೊನ್ನಹಳ್ಳಿ

POPULAR  STORIES :

ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,

ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!

ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?

ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!

ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?

ಅವಳ `ಆತ್ಮ’ ಅತೃಪ್ತಿಯಿಂದ ನರಳುತ್ತಿದೆ..! ಭಾರತ ಚಿತ್ರರಂಗ ಕಂಡ ಅಪ್ಪಟ `ಸೌಂದರ್ಯ’

ಮೂರರ ಪೋರನ ಸಿಟ್ಟಿಗೆ ಪೊಲೀಸರೇ ಕಂಗಾಲು..! ಅಬ್ಬಾ..!! ಮಕ್ಕಳು ಹೀಗೂ ಇರ್ತಾರಾ..!?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...