ಮೈತ್ರಿ ಸರ್ಕಾರದ ಸಂಪುಟ ರಚನೆ ನಂತರ ಸಚಿವ ಸ್ಥಾನದ ಆಕಾಂಕ್ಷಿಗಳು ಸ್ಥಾನ ಸಿಗದೇ ಇದ್ದುದರಿಂದ ಪಕ್ಷದ ವಿರುದ್ಧವವೇ ತಿರುಗಿ ಬಿದ್ದಿದ್ದಾರೆ.
ಪತಿ ಎಂ ಬಿ ಪಾಟೀಲ್ ಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಆಶಾ ಪಾಟೀಲ್ ನೇರವಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನೇ ಸಂಪರ್ಕಿಸಿದ್ದಾರೆ ಎಂದು ಹೇಳಲಾಗ್ತಿದೆ.
ಆರೋಗ್ಯ ಸಮಸ್ಯೆಯಿಂದ ಸೋನಿಯಾಗಾಂಧಿ ವಿಶ್ರಾಂತಿಯಲ್ಲಿದ್ದಾರೆ. ಎಂ ಬಿ ಪಾಟೀಲ್ ಅವರ ಪತ್ನಿ ಆಶಾ ಅವರ ಕರೆ ಸ್ವೀಕರಿಸಿ ಮಾತಾಡಿರುವ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಸೋನಿಯಾ ಅವರ ಸೂಚನೆ ಮೇರೆಗೆ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ನಾಯಕರು ಪಾಟೀಲರ ಮನವೊಲಿಕೆ ಪ್ರಯತ್ನ ಮಾಡ್ತಿದ್ದಾರೆ.
ಆಶಾ ಅವರು ಸೋನಿಯಾ ಅವರನ್ನು ನೇರವಾಗಿ ಸಂಪರ್ಕಿಸಿರುವುದರಿಂದ ಇದು ಹೈಕಮಾಂಡ್ ಮಟ್ಟದಲ್ಲಿ ದೊಡ್ಡಮಟ್ಟಿನ ಚರ್ಚೆಗೂ ಕಾರಣವಾಗಿದೆ.