ಮ್ಯೂಸೀಶಿಯನ್ ಕ್ರಿಕೆಟ್ ಕಪ್ 2024 ಕ್ಕೆ ಕ್ಷಣಗಣನೆ !

0
58

ಇತ್ತೀಚಿನ ದಿನಗಳಲ್ಲಿ ಈ ಕ್ರಿಕೆಟ್ ಲೀಗ್ ಗಳು ಸಾಕಷ್ಟು ನಡೆಯುತ್ತಿದ್ದು ಜನರ ಗಮನ ಸೆಳೆಯುತ್ತಿವೆ. ಈಗ ವಿಚಾರ ಏನಪ್ಪ ಅಂದ್ರೆ ಇಂಪಾದ ಸಂಗೀತದ ಮೂಲಕ ಜನ ಮಾನಸದಲ್ಲಿ ಮನೆಮಾಡಿದ ಮ್ಯೂಸಿಕ್ ಮಾಂತ್ರಿಕರು ಕ್ರೀಡಾಂಗಣದಲ್ಲಿ ಕ್ರಿಕೆಟ್ ನ ಸರಿಗಮ‌ ನುಡಿಸಲು ಸಜ್ಜಾಗಿದ್ದಾರೆ. ಮೇ 1 ಮ್ಯೂಸೀಷಿಯನ್ ಕ್ರಿಕೆಟ್ ಕಪ್ – 2024 ನಡೆಯುತ್ತಿದೆ.

ಎಸ್. ಇದು ಎರಡನೇ ವರ್ಷ ನಡೆಯುತ್ತಿರುವ ಪಂದ್ಯಾವಳಿಯಾಗಿದ್ದು, ಕನ್ನಡ ಚಲನಚಿತ್ರ ರಂಗದ ಮೊಟ್ಟ ಮೊದಲ ಸಂಗೀತ ನಿರ್ದೇಶಕರಾದ ಆರ್. ನಾಗೇಂದ್ರ ರಾವ್ ಅವರಿಗೆ ಈ ಪಂದ್ಯವನ್ನು ಸಮರ್ಪಿಸಲಾಗುತ್ತಿದೆ. ಇನ್ನೊಂದು ವಿಶೇಷವೆಂದರೆ ಡಾ.ರಾಜ್ ಕುಮಾರ್ ಹಾಗೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಹುಟ್ಟಿದ ತಿಂಗಳುಗಳ ಮಧ್ಯ ಈ ಪಂದ್ಯಾವಳಿಯನ್ನ ಏರ್ಪಡಿಸಲಾಗುತ್ತೆ.

ಈ ಪಂದ್ಯದಲ್ಲಿ ಸಂಗೀತ ಕ್ಷೇತ್ರದ ಎಲ್ಲಾ ವಿಭಾಗದ ಸಾಧಕರಿದ್ದು, 40 ಜನರು ಸೇರಿ ಒಟ್ಟು 3 ತಂಡಗಳನ್ನಾಗಿ ಮಾಡಿಕೊಂಡಿದ್ದಾರೆ. ಆಲೂರಿನ ಬಳಿ ಇರುವ ಸ್ಪಾಟ್ ಆ್ಯಂಡ್ ಕ್ರಿಕೆಟ್ ಟರೀನಾ ಅನ್ನೊ ಸ್ಥಳದಲ್ಲಿ ಈ ಪಂದ್ಯ ನಡೆಯುತ್ತಿದೆ. ಇಲ್ಲಿ 3 ಟೀಂಗಳು ಆಟವಾಡುತ್ತಿವೆ. ದಿ ಹಾಡ್ ಹಿಟ್ಟರ್ಸ್ ತಂಡವನ್ನ ಖ್ಯಾತ ಹಿನ್ನಲೆ ಗಾಯಕ ವ್ಯಾಸರಾಜ್ ಸೋಸಲೆ ಲೀಡ್ ಮಾಡ್ತಿದ್ದಾರೆ. ಹಾಗೇ ಬ್ಯೂಟಿ ಬೆಂಕೈತಿ ಮೂಲಕ ಕರ್ನಾಟಕದಲ್ಲಿ ಮಿಂಚಿನಂತೆ ತಮ್ಮ ಛಾಪು ಮೂಡಿಸಿದ ಕರಿಬಸವ ತಡಕಲ್ ಸ ರೆ ಗ ಮ ಸ್ಟ್ರೈಕರ್ ಟೀಂ ನ ಕ್ಯಾಪ್ಟನ್ ಆಗಿದ್ದಾರೆ. ಇನ್ನೂ ಕರುನಾಡ ಕಲಾಕಾರ್ ಟೀಂ ಅನ್ನೂ ಮನೋಜವಂ ಆತ್ರೇಯ ಮುನ್ನಡೆಸುತ್ತಿದ್ದಾರೆ.

ನಮ್ಮ TNIT ಜೊತೆ ಮಾತನಾಡಿದ ವ್ಯಾಸರಾಜ್ ಸೋಸಲೆ ಅವರು ಈ ಪಂದ್ಯಾವಳಿ ಆಯೋಜನೆ ಮಾಡಲು ಮುಖ್ಯ ಕಾರಣಗಳನ್ನ ತಿಳಿಸಿದರು. ” ನಾವು ಒಗ್ಗಟ್ಟಿನಿಂದ ಇರಬೇಕು. ಒಂದು ಸಾಂಗ್ ರೆಕಾರ್ಡಿಂಗ್ ಸಮಯದಲ್ಲಿ ಪರಸ್ಪರರ ಭೇಟಿ ಆಗುತ್ತೆ. ಬಿಟ್ಟರೆ ಯಾರೂ ಕೂಡ ಒಟ್ಟಿಗೆ ಸಿಗುವುದಿಲ್ಲ. ನಾವೆಲ್ಲ ಒಬ್ಬರಿಗೊಬ್ಬರು ಪರಸ್ಪರ ಅನ್ಯೋನ್ಯತೆಯಿಂದ ಇರುವ ಉದ್ದೇಶದಿಂದ ಈ ಪಂದ್ಯವನ್ನು ಆಯೋಜನೆ ಮಾಡಲಾಗಿದೆ” ಎಂದರು.

ಇತ್ತೀಚೆಗೆ ಕನ್ನಡ ಕಿರುತೆರೆ, ಹಿರಿತೆರೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ವು. ಈಗ ಸಂಗೀತ ಮಾಂತ್ರಿಕರ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವುದು ಖುಷಿಯ ವಿಚಾರ. ಇನ್ನೂ ಈ ಪಂದ್ಯಾವಳಿಯಲ್ಲಿ ಎಕ್ಸ್ ಕ್ಯೂಸ್ ಮಿ ಖ್ಯಾತಿಯ ಸುನೀಲ್, ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ , ನಟ ರಘು ಭಟ್ , ಗಾಯಕ ಸಂತೋಷ್ ವೆಂಕಿ ಸೇರಿದಂತೆ ಸಾಕಷ್ಟುಜನ ವಾದ್ಯ ವೃಂದದ ಕಲಾವಿದರು ಸಹ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.