ಚಂದ್ರಚಕೋರಿ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಶ್ರೀ ಮುರುಳಿ ಇಂದು ರೋರಿಂಗ್ ಸ್ಟಾರ್ ಆಗಿ ಘರ್ಜಿಸ್ತಿದ್ದಾರೆ.
ಮೊದಲ ಸಿನಿಮಾ ಸೂಪರ್ ಹಿಟ್ ಆದರೂ ನಂತರದ ಸಿನಿಮಾಗಳು ಹೇಳಿಕೊಳ್ಳುವಂತಹ ಸದ್ದು ಮಾಡಿರಲಿಲ್ಲ. ಉಗ್ರಂ ಮೂಲಕ ಮತ್ತೆ ಶ್ರೀಮುರುಳಿ ಅಬ್ಬರ ಜೋರಾಯಿತು. ಉಗ್ರಂ ಯಶಸ್ಸಿನ ಬಳಿಕ ರಥಾವರ, ಮಫ್ತಿ ಸಿನಿಮಾಗಳು ಕೂಡ ಗೆದ್ದವು.
ಇದರಿಂದಾಗಿ ಮುರುಳಿಗೆ ಭಾರೀ ಬೇಡಿಕೆ ಬಂದಿದೆ. ಸಾಲು ಸಾಲು ಸಿನಿಮಾಗಳು ಬರುತ್ತಿದ್ದರೂ ಮುರುಳಿ ಕಥೆ ಓಕೆ ಆದಮೇಲೆಯೇ ಸಿನಿಮಾಕ್ಕೆ ಒಪ್ಪಿಕೊಳ್ಳೋದು.
ಭರ್ಜರಿ ಚೇತನ್ ಅವರ ‘ಭರಾಟೆ’ ಯಲ್ಲಿ ಬ್ಯುಸಿ ಇರುವ ಇವರು ‘ಮದಗಜ’ ಎಂಬ ಮತ್ತೊಂದು ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅಯೋಗ್ಯ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಿರ್ದೇಶಕರಾಗಿ ಎಂಟ್ರಿಕೊಟ್ಟ ಮಹೇಶ್ ಕುಮಾರ್ ನಿರ್ದೇಶನದ ಚಿತ್ರ ಈ ‘ಮದಗಜ’.
ಈ ಸಿನಿಮಾವನ್ನು ಧ್ರುವ ಸರ್ಜಾ ಮಾಡಬೇಕಿತ್ತು. ಮೊದಲು ಧ್ರುವ ಅವರೇ ಮದಗಜ ಎಂದು ಹೇಳಲಾಗಿತ್ತು. ಅವರ ಅಭಿಮಾನಿಗಳು ಖುಷಿ ಪಟ್ಟಿದ್ದರು. ಆದರೆ, ಈಗ ಧ್ರುವ ಬದಲು ಶ್ರೀಮುರುಳಿ ಕಣದಲ್ಲಿದ್ದಾರೆ.
ಭರ್ಜರಿಯಾಗಿ ಎಂಟ್ರಿಕೊಟ್ಟು, ಅದ್ಧೂರಿಯಾಗಿ ಅಭಿಮಾನಿಗಳ ಮನದಲ್ಲಿ ಸ್ಥಾನಪಡೆದು, ಬಹದ್ಧೂರ್ ಆಗಿ ಮೆರೆದ ಆ್ಯಕ್ಷನ್ ಪ್ರಿನ್ಸ್ ಧ್ರುವ, ‘ ಪೊಗರು’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಆದ್ದರಿಂದ ಡೇಟ್ ಹೊಂದಾಣಿಕೆ ಆಗ್ತಿಲ್ಲ.ಅವರು ಆರೇಳು ತಿಂಗಳು ಟೈಮ್ ಕೇಳಿರೋದ್ರಿಂದ ಸಿನಿಮಾ ರೋರಿಂಗ್ ಸ್ಟಾರ್ ಪಾಲಾಗಿದೆ. ಈಗ ಮುರುಳಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.