ಮದುವೆ ಮನೆಯಲ್ಲಿ ನಡೆದ ಗುಂಡು ಹಾರಿಸಿ ಸಂಭ್ರಮಾಚರಣೆ ವೇಳೆ ಬಾಲಕಿಯಿಬ್ಬಳು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯಾರ್ ನಲ್ಲಿ ನಡೆದಿದೆ.
7 ವರ್ಷದ ಬಾಲಕಿ ಸೆಜಲ್ ಜಾದೌನ್ ಎಂಬಾಕೆ ಮೃತ ದುರ್ದೈವಿ. ಸಂಬಂಧಿಕರ ಮನೆಯ ಮದುವೆಗೆ ಅಪ್ಪ ಸತೇಂದ್ರ ಜೌದೌನ್ ಜೊತೆ ಸೆಜಲ್ ಜೌದೌನ ತೆರಳಿದ್ದಳು. ಅಲ್ಲಿ ಗುಂಡುಹಾರಿಸವ ಸಂಭ್ರಮ ನಡೆಯುತ್ತಿತ್ತು. ಅಪ್ಪನ ಜೊತೆ ನಿಂತಿದ್ದ ಬಾಲಕಿ ಸೆಜಲ್ ಹೊಟ್ಟೆಗೆ ಗುಂಡು ತಗುಲಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬಾಲಕಿ ಉಳಿಯಲಿಲ್ಲ. ಸೊಂಡ ಕೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.