ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತಿಗೆ ಪತ್ನಿ ಅದೆಂಥಾ ಶಿಕ್ಷೆ ಕೊಟ್ಟಿದ್ದಾಳೆ ಗೊತ್ತಾ…? ಇವ್ಳು ಕೊಟ್ಟಿರೋ ಶಿಕ್ಷೆ ಏನಂಥ ತಿಳಿದ್ರೆ ಹೆಂಡ್ತಿಯನ್ನು ನಿರ್ಲಕ್ಷಿಸಿ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿರೋ ಗಂಡಸರು ಎಚ್ಚೆತ್ತು ಕೊಳ್ತಾರೆ…!
ತಾಳಿಕಟ್ಟಿದ ಹೆಂಡ್ತಿ ನಾನಿರುವಾಗ ಬೇರೊಬ್ಬಳ ಜೊತೆ ಹೋಗ್ಬೇಡ ಅಂತ ಗಂಡನಿಗೆ ಬಡ್ಕೊಂಡಿದ್ದ ಹೆಂಡ್ತಿ ಕೊನೆಗೂ ತಾಳ್ಮೆ ಕಳೆದುಕೊಂಡು ಎಣ್ಣೆಯನ್ನು ಕಾಯಿಸಿ ಅವನ ಗುಪ್ತಾಂಗಕ್ಕೆ ಸುರಿದಿದ್ದಾಳೆ.
ಇದು ನಡೆದಿರೋದು ಮದುರೈನಲ್ಲಿ. ನೆಹರೂ ನಗರದ ಎಂ.ಪರಮೇಶ್ವರ್ ಹೆಂಡ್ತಿಯಿಂದ ಶಿಕ್ಷೆಗೆ ಗುರಿಯಾದವ. 37 ವರ್ಷದ ಈತನಿಗೆ ಶಶಿಕಲಾ ಎಂಬುವಳೊಂದಿಗೆ ಮದ್ವೆ ಆಗಿತ್ತು. ಆಟೋ ಡ್ರೈವರ್ ಆಗಿದ್ದ ಈತ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡಿರೋದು ಪತ್ನಿ ಶಶಿಕಲಾಗೆ ತಿಳಿದಿದೆ. ಆಗ ಪ್ರಶ್ನಿಸಲು ಶುರುಮಾಡಿದ್ದಾಳೆ. ಆಗ ಮನೆಗೆ ಬರುವುದನ್ನೇ ಆಸಾಮಿ ಬಿಟ್ಟಿದ್ದಾನೆ. ಶಶಿಕಲಾ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಪೊಲೀಸರು ಕರೆಸಿ ಬುದ್ಧಿ ಹೇಳಿ ಪರಮೇಶ್ವರ್ ನನ್ನು ಮನಗೆ ಕಳುಹಿಸಿದ್ದಾರೆ.
ಮನೆಗೆ ಮರಳಿದ ಪರಮೇಶ್ವರ್ ತನ್ನ ಅಕ್ರಮ ಸಂಬಂಧವನ್ನು ಮುಂದುವರೆಸಿದ್ದ. ಆ ಮಹಿಳೆ ಜೊತೆಗೆ ಇರಲು ಶುರುಮಾಡಿದ್ದ. ಇದಕ್ಕೆ ಮತ್ತೆ ಪೊಲೀಸ್ ಮೊರೆ ಹೋಗುವುದಲ್ಲ…! ನಾನೇ ತಕ್ಕ ಶಾಸ್ತಿ ಮಾಡ್ಬೇಕು ಅಂತ ಶಶಿಕಲಾ ಡಿಸೈಡ್ ಮಾಡಿದ್ಲು.
ಪರಮೇಶ್ವರ್ ಗೆ ಫೋನ್ ಮಾಡಿದ ಶಶಿಕಲಾ, ಪ್ರೀತಿಯಿಂದ ಮಾತನಾಡಿಸಿ ಉಪಾಯದಿಂದ ಮನೆಗೆ ಕರೆಸಿಕೊಂಡಿದ್ದಾಳೆ. ನನ್ನ ಜೊತೆಯೇ ಸಂಸಾರ ಮಾಡು ಅಂತ ಕೇಳಿಕೊಂಡಿದ್ದಾಳೆ.
ಮನೆಗೆ ಬಂದ ಪರಮೇಶ್ವರ್ ಊಟ ಮಾಡಿ ಮಲಗಿದ್ದಾನೆ. ಶಶಿಕಲಾ ಬಾಣಲಿಯಲ್ಲಿ ಎಣ್ಣೆ ಕಾಯಲು ಇಟ್ಟು ಅವನು ಮಲಗುವುದಕ್ಕೇ ಕಾದಿದ್ದಳು. ಅವನು ಮಲಗಿ ನಿದ್ರೆ ಬಂದ ಕೂಡಲೇ ಎಣ್ಣೆಯನ್ನು ತಂದು ಗುಪ್ತಾಂಗಕ್ಕೆ ಸುರಿದಿದ್ದಾಳೆ…! ಸುಡುತ್ತಿದ್ದಂತೆ ಎಚ್ಚರವಾಗಿ ಕಿರುಚಾಡಿದ್ದಾನೆ ಪರಮೇಶ್ವರ್. ಆಗ ಅಕ್ಕ-ಪಕ್ಕದವರು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ. ಮಧುರೈ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.