ಮ್ಯಾಗಿ ಬಂತು ಮ್ಯಾಗಿ….! ಶೀಘ್ರದಲ್ಲಿಯೇ ಮಾರುಕಟ್ಟೆಗೆ ಮರಳಿ ಬರುತಲಿದೆ ಮ್ಯಾಗಿ..!

admin
2 Min Read

ನೆಸ್ಲೇ ಮ್ಯಾಗಿ ನೂಡಲ್ಸ್ ಅಂದ್ರೆ ಬಾಯಿ ಚಪ್ಪರಿಸಿಕೊಂಡು ತಿನ್ತಾ ಇರ್ಬೇಕಾದ್ರೇನೇ… ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.. ಇದರಲ್ಲಿ ಹಾನಿಕಾರಕ ಅಂಶಗಳಿವೆ ಅಂತ ಸುದ್ದಿ ಆಗಿತ್ತು..! ಸುದ್ದಿ ಆಗ್ತಾ ಇದ್ದಂಗೆ ಮ್ಯಾಗಿ ಮಾರುಕಟ್ಟೆಯಿಂದ ಮಾಯವಾಗಿ ಬಿಟ್ಟಿತ್ತು..! ಆದ್ರೆ ಈಗ ಅದೇ ಮ್ಯಾಗಿ ಪ್ರಿಯರಿಗೆ ಸಿಹಿ ಸುದ್ದಿ ಬಂದಿದೆ..! ನೆಚ್ಚಿನ ಮ್ಯಾಗಿ ಮತ್ತೆ ಮಾರುಕಟ್ಟೆಗೆ ಬರ್ತಾ ಇದೆ. ಪರೀಕ್ಷೆಗಳನ್ನೆಲ್ಲಾ ಗೆದ್ದು ಮ್ಯಾಗಿ ರೀ ಎಂಟ್ರಿ ಕೊಡಲು ಸಜ್ಜಾಗಿದೆ..! ಮ್ಯಾಗಿ ಉತ್ಪನ್ನಗಳಲ್ಲಿ ಯಾವುದೇ ಹಾನಿಕಾರಕಗಳಿಲ್ಲ ಅದು ಸೇವನಾರ್ಹವಾಗಿದೆ ಎಂದು ರುಜುವಾತಾಗಿದೆ..! ಮಾರುಕಟ್ಟೆಗೆ ಬರಲು ಪ್ರಮಾಣಪತ್ರ ಕೂಡ ಸಿಕ್ಕಿದ್ದು ಹೊಸರೂಪದಲ್ಲಿ ಮತ್ತೆ ಬರಲಿದೆ..!
ಬಾಂಬೆ ಹೈ ಕೋರ್ಟ್ ಮ್ಯಾಗಿಯನ್ನು ಪರೀಕ್ಷೆಸುವಂತೆ ಸೂಚಿಸಿತ್ತು..! ಅದರಂತೆ ಆರು ಬಗೆಯ ಉತ್ಪನ್ನಗಳ ಒಟ್ಟು ಎಲ್ಲಾ 90 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿತ್ತು..! 200 ಮಿಲಿಯನ್ ಪ್ಯಾಕ್ ಗಳಿಗೆ ಸಂಬಂಧಿಸಿದಂತೆ ಬರೊಬ್ಬರಿ 3500 ಟೆಸ್ಟ್ ಗಳನ್ನು ವಿವಿಧ ಪ್ರಯೋಗಾಲಯಗಳಲ್ಲಿ ಮಾಡಲಾಗಿದ್ದು.. ಎಲ್ಲಾ ಪರೀಕ್ಷೆಗಳಲ್ಲಿಯೂ “ಮ್ಯಾಗಿ” ಪಾಸ್ ಆಗಿದೆ..! ಮ್ಯಾಗಿಯಲ್ಲಿ ಸೀಸದ ಪ್ರಮಾಣ ಇಲ್ಲವೇ ಇಲ್ಲ..! ಮ್ಯಾಗಿ ಹಾನಿಕಾರಕವಾಗಿಲ್ಲ, ಮ್ಯಾಗಿಯನ್ನು ಯಾವುದೇ ಭಯವಿಲ್ಲದೆ ಬಳಸ ಬಹುದೆಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣ ಪತ್ರವನ್ನೂ ನೀಡಿದೆ..! ಇದರೊಂದಿಗೆ ಕಂಪನಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ..! ಮ್ಯಾಗಿ ಪ್ರಿಯರು ಯಾವಾಗ ಮತ್ತೆ ಮ್ಯಾಗಿ ರುಚಿ ನೋಡ್ತೀವೋ ಅಂತ ಬಾಯಲ್ಲಿ ನೀರು ಸುರಿಸಿಕೊಂಡು ನಿಂತಿದ್ದಾರೆ..! ಮ್ಯಾಗಿ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರ್ತಾ ಇದೆ..! ಮ್ಯಾಗಿ ಬಂತು ಮ್ಯಾಗಿ ಕಾಯ್ತಾ ಇರಿ.. ಬಂದೇ ಬರುತ್ತೆ..! ಹೆಚ್ಚು ಕಡಿಮೆ ಕಳೆದ ವರ್ಷ ಮೇ ನಿಂದಲೂ ಮ್ಯಾಗಿ ರುಚಿಯನ್ನು ಮ್ಯಾಗಿ ಪ್ರಿಯರು ಸವಿದಿಲ್ಲ..! ಸಧ್ಯದಲ್ಲೇ ಮ್ಯಾಗಿ ಬರುತ್ತಲ್ಲಾ.. ಅದರ ಹೊಸ ರುಚಿ ಸವಿಯೋಣ..

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!

ಹಸಿದವನಿಗೆ ಮಾತ್ರ ಗೊತ್ತು ಅನ್ನದ ಬೆಲೆ..! ಈ ವೀಡಿಯೋ ನೋಡಿದ್ರೆ ನೀವು ಖಂಡಿತಾ ಅನ್ನವನ್ನು ವೇಸ್ಟ್ ಮಾಡಲ್ಲ..!

ಚಿಕ್ಕ ಹುಡುಗ ಕಾಲಿಗೆ ಬಿದ್ರೂ ಚಿಲ್ಲರೆ ಕೊಡಲ್ಲ..! ಆದ್ರೆ ಹುಡುಗಿ ತಂದ ಖಾಲಿ ಡಬ್ಬಕ್ಕೆ ನೋಟ್ ಹಾಕ್ತಾರೆ..!

ಕನ್ನಡದ ಸ್ಟಾರ್ಸ್ ಅಂದ್ರೆ ಇವರಿಗೆ ಲೆಕ್ಕಕ್ಕೇ ಇಲ್ವಾ..? ಕರ್ನಾಟಕದಲ್ಲಿ ಬಿಸ್ನೆಸ್, ಕನ್ನಡದ ಸ್ಟಾರ್ಸ್ ಅಂದ್ರೆ ಕೇರ್ ಲೆಸ್..!

ಕರ್ನಾಟಕದ ಮೊಟ್ಟಮೊದಲ ಮಹಿಳಾ ಬಸ್ ಡ್ರೈವರ್ “ಪ್ರೇಮ”…! ಅಷ್ಟಕ್ಕೂ ಇವರು ಬಸ್ ಡ್ರೈವರ್ ಆಗಿದ್ದು ಯಾಕೆ ಗೊತ್ತಾ..?

ಈ ಕನ್ನಡದ ಹಾಡು ನಿಮ್ಮ ಮೈಜುಮ್ಮೆನಿಸುತ್ತೆ..! ಅನುಮಾನವೇ ಇಲ್ಲ..!

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ನಾ..? ನೀವು ಜೈಲಿಗೆ ಹೋದ್ರೂ ಹೋಗ್ಬೋದು..!

Share This Article
Leave a Comment