ಅಚ್ಚರಿಯಾದ್ರೂ ಇದು ಸತ್ಯ….! 21ವರ್ಷದ ವಿದ್ಯಾರ್ಥಿನಿಯೊಬ್ಬಳು ಹುಲಿಯೊಂದಿಗೆ ಹೋರಾಡಿ ಗೆದ್ದು ಬಂದಿದ್ದಾಳೆ….!
ಮಹಾರಾಷ್ಟ್ರದ ಭದ್ರ ಜಿಲ್ಲೆಯ ಉಸ್ಗಾನ್ ಗ್ರಾಮದ ರೂಪಾಲಿ ಮೆಶ್ರಾಮ್ ಹುಲಿಯೊಂದಿಗೆ ಹೋರಾಟ ನಡೆಸಿ ಬದುಕಿ ಬಂದಾಕೆ. ಮಾರ್ಚ್ 24ರಂದೇ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ರಾತ್ರಿ ಉಸ್ಗಾನ್ ಗ್ರಾಮದಲ್ಲಿ ರೂಪಾಲಿ ತನ್ನ ಕುಟುಂಬಸ್ಥರೊಂದಿಗೆ ಮಲಗಿದ್ದಳು. ಆಗ ಮೇಕೆಗಳು ವಿಚಿತ್ರವಾಗಿ ಕಿರುಚಿದ ಶಬ್ಧ ಕೇಳಿ ರೂಪಾಲಿ ಕೊಟ್ಟಿಗೆಯನ್ನು ನೋಡಿದ್ದಾರೆ. ಅಲ್ಲಿ ಹುಲಿಯೊಂದು ಮೇಕೆಗಳನ್ನು ಕೊಲ್ಲುತ್ತಿತ್ತು.
ಅದನ್ನು ಕಂಡು ಅಟ್ಟದ ಮೇಲಿಂದ ದೊಣ್ಣೆ ತೆಗೆದು ದೇವರನ್ನು ನೆನೆದು ಹುಲಿಯನ್ನು ಓಡಿಸಲು ಮುಂದಾಗಿದ್ದಾರೆ. ಹುಲಿ ಈಕೆ ಮೇಲೆ ಎಗರಿದೆ.
ಆಗ ಸಹಾಯಕ್ಕಾಗಿ ಅಮ್ಮನನ್ನು ಕರೆದಿದ್ದಾಳೆ. ಅವರು ಬಂದಾಗ ಅವರ ಮೇಲೆ ಹುಲಿ ದಾಳಿ ನಡೆಸಿದೆ. ತಾಯಿ ಮಗಳು ಇಬ್ಬರೂ ಸೇರಿ ಹುಲಿಗೆ ಬಾರಿಸಿ ಮೆನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳಿ, ಸಾರ್ವಜನಿಕರು ಸೇರಿದಾಗ ಹುಲಿ ಕಾಲ್ಕಿತ್ತಿದೆ.
ತಾಯಿ ಹಾಗೂ ಮಗಳನ್ನು ನಾಗಪ್ಪ ಸರ್ಕಾರಿ ಆಸ್ಪಗೆ ಸೇರಿಸಲಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾರೆ.
Posted by Rupali Meshram on Sunday, March 25, 2018