ವಯಸ್ಸು 81, ಫೇಲಾಗಿದ್ದು 46 ಸಲ..!

admin
By admin
2 Min Read

“ಪರೀಕ್ಷೆ ಪಾಸಾಗ್ಲೇಬೇಕು, ಈ ವರ್ಷ ಅಲ್ದಿದ್ರೂ ಮುಂದಿನ ವರ್ಷ ಪರೀಕ್ಷೆ ಪಾಸಾಗಿ ತೋರಿಸಬೇಕು”.
ಪರೀಕ್ಷೆಯಲ್ಲಿ ಪಾಸಾದ ಹುಡುಗರ ಬಾಯಲ್ಲಿ ಬರುವ ಕಾಮನ್ ಡೈಲಾಗ್ ಇದು. ಕೆಲ ಹುಡುಗರು ಪರೀಕ್ಷೆಯಲ್ಲಿ ಡುಮ್ಕಿ ಹೊಡೆದು, ಹೊಡೆದು ಕೊನೆಗೆ ನನ್ನಿಂದಾಗದು ಎಂದು ಪರೀಕ್ಷೆ ಬರೆಯುವುದನ್ನೇ ಬಿಟ್ಟಿದ್ದಾರೆ. ಆದರೆ, ಇಲ್ಲೊಬ್ಬ ಅಜ್ಜ ಇದ್ದಾನೆ. ಈತ ಸಾವೇ ಬಂದರೂ ಸರಿ, ಪರೀಕ್ಷೆ ಎದುರಿಸುವುದನ್ನು ಬಿಡುವುದಿಲ್ಲ. ನ್ಯಾಯವಾಗಿ ಪರೀಕ್ಷೆ ಬರೆದು ಪಾಸಾಗ್ತೀನಿ ಅಂತ ಹೇಳುತ್ತಿದ್ದಾನೆ. ಇಷ್ಟಕ್ಕೂ ಈತ ಬರೋಬ್ಬರಿ 46 ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದು ದಾಖಲೆ ಬರೆದಿದ್ದಾನೆ.
ಯೆಸ್.. ಶಿವ ಚರಣ್ ಯಾದವ್ ಎಂಬ ಈ ವ್ಯಕ್ತಿ ಇಡೀ ಜಗತ್ತೇ ಅಚ್ಚರಿಗೊಳ್ಳುವಂತಹ ಸುದ್ದಿಗೆ ಕಾರಣವಾಗಿದ್ದಾನೆ. ಬರೋಬ್ಬರಿ 46 ಬಾರಿ ಫೇಲಾದರೂ ಕೂಡಾ ಇಂದಿಗೂ ಪರೀಕ್ಷೆ ಬರೆಯುತ್ತಲೇ ಇದ್ದಾನೆ. ಇಷ್ಟಕ್ಕೂ ಕಳೆದ ಬಾರಿ ಪರೀಕ್ಷೆ ಬರೆದಾಗ ಈತನಿಗೆ ಬಂದ ಅಂಕಗಳು ಹೀಗಿವೆ..
`ಹಿಂದಿ-3
ಇಂಗ್ಲಿಷ್-0
ಗಣಿತ-9
ಸಂಸ್ಕೃತ-7
ಸಮಾಜ ವಿಜ್ಞಾನ – 34

ಇಷ್ಟೆಲ್ಲಾ ಆದರೂ ಕೂಡಾ 81 ವರ್ಷದ ಈ ವೃದ್ದ 10 ನೇ ತರಗತಿಯನ್ನು ಪಾಸು ಮಾಡಲೇಬೇಕೆಂಬ ಛಲ ಹೊಂದಿದ್ದಾನೆ. ಈಗಾಗಲೇ 46 ಬಾರಿ ಫೇಲಾಗಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಪಾಸಾಗಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಪಾಸಾದ ಮೇಲೆಯೇ ತಾನು ವಿವಾಹವಾಗುವುದು ಎಂಬ ಶಪಥವನ್ನೂ ಇವರು ಮಾಡಿದ್ದಾರೆ.
ರಾಜಸ್ತಾನದ ಬೋರಾ ಬಳಿಯ ಕೋರಿ ಗ್ರಾಮದ ಶಿವ ಚರಣ್ ಯಾದವ್ ಗೆ ಈಗಾಗಲೇ ಸರಿಯಾಗಿ ಕಣ್ಣೂ ಕಾಣಿಸುತ್ತಿಲ್ಲ, ಕಿವಿಯೂ ಕೇಳಿಸುತ್ತಿಲ್ಲ. ಆದರೆ 10ನೇ ತರಗತಿ ಪಾಸಾಗಬೇಕೆಂಬ ಉತ್ಸಾಹ ಮಾತ್ರ ಬತ್ತಿಲ್ಲ. ಈ ವೃದ್ದನಿಗೆ ತನ್ನವರೆಂಬವರು ಯಾರೂ ಇಲ್ಲ. ಗ್ರಾಮದ ಹನುಮಾನ್ ಗುಡಿಯಲ್ಲಿ ಮಲಗಿ ಅಲ್ಲಿಯೇ 10 ನೇ ತರಗತಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಾರೆ. ಪ್ರತಿ ವರ್ಷವೂ ಅದಕ್ಕಾಗಿ ತಯಾರಿ ಮಾಡಿಕೊಳ್ಳುವ ಶಿವ ಚರಣ್ ಯಾದವ್ ಫಲಿತಾಂಶದಲ್ಲಿ ಮುಗ್ಗರಿಸುತ್ತಲೇ ಇದ್ದರೂ ಕೂಡಾ ಪರೀಕ್ಷೆ ಬರೆಯುತ್ತಲೇ ಇದ್ದಾರೆ.
ತಾನು 10 ನೇ ತರಗತಿ ಪಾಸಾದರೆ ಮಾತ್ರ ವಿವಾಹವಾಗುವುದಾಗಿ ಹಲವಾರು ವರ್ಷಗಳ ಹಿಂದೆ ಶಪಥ ಮಾಡಿದ್ದ ಶಿವ ಚರಣ್ ಯಾದವ್, ತಮ್ಮ ಪ್ರತಿಜ್ಞೆಯನ್ನು ಈಡೇರಿಸಿಕೊಳ್ಳುವ ಭರವಸೆಯಲ್ಲಿದ್ದಾರೆ. ಪಾಸಾದರೂ ಅಂಕಗಳು ಕಮ್ಮಿ ಬಂದವೆಂಬ ಕಾರಣಕ್ಕಾಗಿ ಆತ್ಮಹತ್ಯೆಗೆ ಮುಂದಾಗುವ ಇಂದಿನ ಯುವ ಜನಾಂಗ ಈ 81 ವರ್ಷದ ವೃದ್ದನ ಜೀವನೋತ್ಸಾಹ ನೋಡಿ ಪಾಠ ಕಲಿಯಬೇಕಾದ ಅಗತ್ಯವಿದೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

Share This Article