No menu items!
13.9 C
Munich
Wednesday, April 29, 2026

ಈತ ಕಿಲ್ಲರ್ ಡಾಕ್ಟರ್ ಎಂದೇ ಫೇಮಸ್..! 36 ಜನರಿಗೆ ಸಾವಿನ ದಾರಿ ತೋರಿಸಿದ ಭೂಪ..!

Must read

ವೈದ್ಯರು ರೋಗಿಗಳ ಪಾಲಿನ ದೇವರು, ಸಾವಿನ ಅಂಚಿನಲ್ಲಿದ್ದವರಿಗೆ, ಕಾಯಿಲೆ ಬಿದ್ದವರಿಗೆ ಮರುಜನ್ಮ ನೀಡುವುದರಿಂದ ಅವರನ್ನು `ವೈದ್ಯೋ ನಾರಾಯಣೋ ಹರಿ’ ಎಂದೂ ಕರೆಯುತ್ತಾರೆ. ಅದೇ ರೀತಿ ವೈದ್ಯರು ಅದೆಷ್ಟೋ ಜನರಿಗೆ ಜೀವ ಭಾಗ್ಯ ನೀಡಿದ್ದಾರೆ. ಆದರೆ, ಇಲ್ಲೊಬ್ಬ ವೈದ್ಯ ರೋಗಿಗಳ ಪಾಲಿಗೆ ಕಂಟಕವಾಗಿದ್ದಾನೆ. ಸುಮಾರು 36 ಜನರನ್ನು ಬಲಿ ಪಡೆದು ಕಿಲ್ಲರ್ ಡಾಕ್ಟರ್ ಎಂಬ ಕುಖ್ಯಾತಿ ಪಡೆದಿದ್ದಾನೆ.
ಅಮೆರಿಕದ ಜಾರ್ಜಿಯಾ ಕ್ಲೈಟನ್ ಕೌಂಟಿಯಲ್ಲಿರುವ ಭಾರತ ಮೂಲದ ವೈದ್ಯ, ಸೈಕಿಯಾಟ್ರಿಸ್ಟ್ ಡಾ. ನರೇಂದ್ರ ನಾಗಿರೆಡ್ಡಿ ಬರೋಬ್ಬರಿ 36 ಮಂದಿ ರೋಗಿಗಳ ಸಾವಿಗೆ ಕಾರಣನಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳ ಪಾಲಿನ ಯಮನಾಗಿರುವ ಈ ವೈದ್ಯನಿಂದಾಗಿ ಬರೋಬ್ಬರಿ 36 ಮಂದಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾವಿನ ದಾರಿ ತೋರಿಸುತ್ತಿದ್ದ ನರೇಂದ್ರ ನಾಗಿರೆಡ್ಡಿಗೆ `ಡಾಕ್ಟರ್ ಡೆತ್’ ಎಂದೇ ಕರೆಯಲಾಗುತ್ತಿದೆ.
ಈತ ಅತಿಹೆಚ್ಚು ಪ್ರಮಾಣದಲ್ಲಿ ಔಷಧ ಬಳಕೆಗೆ ಶಿಫಾರಸ್ಸು ಮಾಡುತ್ತಿದ್ದ, ಅಲ್ಲದೇ, ನಿರ್ಬಂಧಿಸಿರುವ ಔಷಧಗಳನ್ನು ರೋಗಿಗಳಿಗೆ ನೀಡುತ್ತಿದ್ದ. ಮಾತ್ರವಲ್ಲ, ತಮ್ಮ ವೃತ್ತಿಗೆ ಸಂಬಂಧಿಸಿಲ್ಲದ ಔಷಧಗಳನ್ನು ಕಾನೂನುಬಾಹಿರವಾಗಿ ರೋಗಿಗಳಿಗೆ ನೀಡಿದ್ದು, ಅದರಿಂದ ಆರೋಗ್ಯ ಏರುಪೇರಾಗಿ ರೋಗಿಗಳು ಮೃತಪಟ್ಟಿದ್ದಾರೆ. ಇದು ಸಾಬೀತಾದ ಹಿನ್ನೆಲೆಯಲ್ಲಿ ನರೇಂದ್ರ ನಾಗಿರೆಡ್ಡಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

  • ರಾಜಶೇಖರ ಜೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article