ಆತನ ಹೆಸರು ವಿಜಯ್ ಹಿಂಗೋರನಿ ಅಂತ. ಮೂಲತಃ ಮುಂಬೈನವರು. ಆತ ಕೆಲವೇ ದಿನಗಳ ಅಂತರದಲ್ಲಿ ಬೆಂಗಳೂರಿನ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರುವವನಿದ್ದ. ಅಲ್ಲದೇ ಆತನಿಗೆ ತಿಂಗಳಿಗೆ 2.5 ಲಕ್ಷ ಸಂಬಳವೂ ಬರುವುದರಲ್ಲಿತ್ತು. ಆದರೆ ಅದೊಂದು ದಿನ ಕೆಲಸ ಸಿಕ್ಕ ಸಂಭ್ರಮದಲ್ಲಿ ಬೆಂಗಳೂರಿಗೆ ತೆರಳುವಾಗ ಒಂದು ಅನಾಹುತ ಸಂಭವಿಸಿತ್ತು. ಒಂದು ಮ್ಯಾನ್ ಹೋಲ್ ನಿಂದ ಆತ ಕಟ್ಟಿದ್ದ ಕನಸಿನ ಗೋಪುರವೇ ಕುಸಿದುಹೋಗಿತ್ತು.
ಯೆಸ್.. ವಿಜಯ್ ಗೆ ಬೆಂಗಳೂರಿನ ಕಂಪನಿಯೊಂದರಲ್ಲಿ ಬಿಸಿನೆಸ್ ಅನಲಿಸ್ಟ್ ಆಗಿ ಕೆಲಸ ಸಿಕ್ಕಿತ್ತು. ಎರಡೂವರೆ ಲಕ್ಷ ಸಂಬಳ ಬೇರೆ ಸಿಗುತ್ತಿತ್ತು. ಇದೇ ಸಂಭ್ರಮದಲ್ಲಿ ಬೆಂಗಳೂರಿಗೆ ಬರಲೆಂದು ಮನೆಯನ್ನು ಬಿಟ್ಟಿದ್ದರವರು. ಆದರೆ ಮುಂಬೈನ ಕಾರ್ಟ್ ರಸ್ತೆಯಲ್ಲಿ ಆಗಮಿಸುತ್ತಿದ್ದಾಗ ತೆರದಿದ್ದ ಮ್ಯಾನ್ ಹೋಲ್ ಗೆ ಬಿದ್ದರು. ಅದರ ಪರಿಣಾಮವಾಗಿ ವಿಜಯ್ ಕಾಲು ಮುರಿಯಿತು. ಹೀಗಾಗಿ ಅವರಿಗೆ ನಿಗದಿತ ಅವಧಿಯಲ್ಲಿ ಕೆಲಸಕ್ಕೆ ಸೇರಲು ಆಗಲಿಲ್ಲ. ಇದರಿಂದ ಅವರಿಗೆ ತಿಂಗಳಿಗೆ ರು. 2.5 ಲಕ್ಷ ವೇತನದ ಉದ್ಯೋಗ ತಪ್ಪಿ ಹೋಯಿತು.
ಬಿಎಂಸಿಯು ಭಾರತದಲ್ಲೇ ಅತಿ ಶ್ರೀಮಂತ ಮುನ್ಸಿಪಲ್ ಕಾರ್ಪೋರೇಷನ್ ಎಂಬ ಖ್ಯಾತಿಯನ್ನು ಪಡೆದಿದೆ. ಅದರ ಬಜೆಟ್ ಕೆಲ ರಾಜ್ಯಗಲ ಬಜೆಟ್ ಗೆ ಸಮನಾಗಿರುತ್ತದೆ..! ಆದರೂ ಕೂಡಾ ಅಲ್ಲಿನ ಮ್ಯಾನ್ ಹೋಲ್ ಗಳನ್ನು ದುರಸ್ತಿ ಮಾಡುವ ಕಾರ್ಯವನ್ನು ಮುಂಬೈ ಕಾರ್ಪೋರೆಷನ್ ಮಾಡುತ್ತಿಲ್ಲ. 2011ರ ಅಂಕಿ ಅಂಶದ ಪ್ರಕಾರ ಮ್ಯಾನ್ ಹೋಲ್ ನಲ್ಲಿ ಬಿದ್ದು ಸಾವನ್ನಪ್ಪಿದವರ ಸಂಖ್ಯೆ ಬರೋಬ್ಬರಿ 1,847..! ಅದರಲ್ಲಿ ಮಹಾರಾಷ್ಟ್ರದಲ್ಲೇ 451 ಜನ ಸಾವನ್ನಪ್ಪಿದ್ದಾರೆ. ಇದು ದೇಶದಲ್ಲಿ ಅತಿ ಹೆಚ್ಚು..!
ಈಗ ವಿಜಯ್ ರವರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಲೆಕ್ಕ ಹಾಕಿದರೆ ನನಗಾದ ನಷ್ಟವನ್ನೆಲ್ಲ ಪಾಲಿಕೆ ತುಂಬಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದಕ್ಕಾಗಿ 1.5 ಕೋಟಿ ರೂ ಪರಿಹಾರ ಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಕೆಲವೇ ದಿನಗಳ ಅಂತರದಲ್ಲಿ ಪ್ರಕರಣ ಇತ್ಯರ್ಥವಾಗಲಿದೆ. ವಿಜಯ್ ಗೆ ಆದ ನಷ್ಟವನ್ನು ಮುಂಬೈ ಕಾರ್ಪೋರೇಷನ್ ತುಂಬಿಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮ್ಯಾನ್ ಹೋಲ್ ನಿಂದ ಅವರಿಗಾದ ಗಾಯ ಇಡೀ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ನ ಮರ್ಯಾದೆಯನ್ನೇ ತೆಗೆದುಹಾಕಿದೆ. ಏನೇ ಆಗಲಿ ತೀವ್ರವಾಗಿ ಗಾಯಗೊಂಡಿರುವ ವಿಜಯ್ ಹಿಂಗೋರನಿಯವರು ಶೀಘ್ರವೇ ಗುಣಮುಖರಾಗಲಿ ಎಂಬುದೇ ನಮ್ಮ ಆಶಯ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?
ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!
6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!
ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!