ಸಾಲ ವಾಪಾಸ್ ಕೊಟ್ಟಿಲ್ಲ ಅಂತ ಸಾಲ ಕೊಟ್ಟ ವ್ಯಕ್ತಿ ಮಾಡಿದ್ದು ಏನು ಗೊತ್ತಾ..?

Date:

ಸಾಲ ಪಡೆಯುವಾಗ ಇಲಿ… ಸಾಲ ವಾಪಾಸ್ ಕೇಳೋದೆ ಬಂದಾಗ ಹುಲಿ ಎಂಬ ಗಾದೆ ಮಾತು ಎಲ್ರಿಗೂ ಗೊತ್ತೇ ಇದೆ. ಅದೇ ರೀತಿ ಇಲ್ಲೊಂದು ಸ್ಟೋರಿ ಆಗೋಗಿದೆ. ಸ್ವಂತವಾಗಿ ಬ್ಯುಸಿನೆಸ್ ಮಾಡೋಣ ಅದ್ರಲ್ಲಿ ನಿನ್ನನ್ನು ಪಾಟ್ನರ್ ಆಗಿ ಮಾಡ್ಕೊಳ್ತೀನಿ ಅಂತ ಹಣ ಇಸ್ಕೊಂಡು ಮೋಸ ಮಾಡಿದ್ದಾನೆ ಇಲ್ಲೋರ್ವ ಕದೀಮ..! ತನಗೆ ಮೋಸ ಮಾಡಿದ ಸುದ್ದಿ ತಿಳಿದ ಕೂಡ್ಲೆ ಅವರ ಮನೆಯ ಮುಂದೆ ಕೊಟ್ಟ ಹಣ ವಾಪಾಸ್ ಕೊಡು ಎಂದು ಕೇಳಿದಾಗ ಹಣ ಕೊಡೋಕೆ ನಿರಾಕರಿಸಿದಾಗ ಮನನೊಂದ ವ್ಯಕ್ತಿಯೋರ್ವ ಸಾಲಗಾರನ ಮನೆಯ ಮುಂದೆಯೇ ಆತ್ಮಹತ್ಯೆಗೆ ಪ್ರಯತ್ನ ಮಾಡಿದ ಘಟನೆ ನಡೆದಿದೆ ನೋಡಿ..! ಬೆಂಗಳೂರಿನ ಮಾಗಡಿ ರಸ್ತೆಯ ಮಧು (30) ಆತ್ಮಹತ್ಯೆ ಪ್ರಯತ್ನ ಮಾಡಿದ ವ್ಯಕ್ತಿ. ಪ್ರೇರಣಾ ಮೋಟಾರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಈತ ಕಳೆದ ಮೂರು ವರ್ಷಗಳ ಹಿಂದೆ ಗಂಗಾಧರ್ ಎಂಬುವವನಿಗೆ 40 ಲಕ್ಷ ರೂ. ಸಾಲ ನೀಡಿದ್ದನಂತೆ. ಹೊಸ ಟೆಲಿಕಾಂ ಕಂಪನಿಗೆ ತನ್ನನ್ನು ಪಾಟ್ನರ್ ಆಗಿ ಮಾಡ್ಕೊಳ್ತಿನಿ ಅದಕ್ಕೆ ನೀನು ಸ್ವಲ್ಪ ಬಂಡವಾಳ ಹಾಕು ಎಂದು ಗಂಗಾಧರ್ 40 ಲಕ್ಷ ಪಡೆದಿದ್ದಾನೆ. ಆದ್ರೆ ಹೊಸ ಕಂಪನಿ ಆರಂಭ ಮಾತ್ರ ಮಧುಗೆ ಕನಸಾಗಿ ಉಳೀತು. ಇದಕ್ಕೆ ಸಂಬಂಧಿಸಿದಂತೆ ಮಧು ತಾನು ಕೊಟ್ಟ ಹಣವನ್ನು ವಾಪಾಸ್ ಕೊಡು ಎಂದು ಕೇಳಿದ್ದಾನೆ. ಆದ್ರೆ ಗಂಗಾಧರ್ ಮಾತ್ರ ಹಣ ವಾಪಾಸ್ ಮಾಡಿಲ್ಲ. ಸುಮಾರು ಮೂರು ವರ್ಷಗಳ ಕಾಲ ಹಣ ನೀಡೋಕೆ ಆಟವಾಡಿಸ್ತಾ ಇದ್ದ ಗಂಗಾಧರ್‍ಗೆ ನೇರವಾಗಿ ಭೇಟಿ ಮಾಡೋಣ ಅಂತ ಮಧು ಅವರ ಮನೆಗೆ ತೆರಳಿದ್ದಾನೆ. ಗಂಗಾಧರ್ ಮನೆಯ ಬಾಗಿಲ ಮುಂದೆ ನಿಂತು ತನ್ನ ಹಣ ವಾಪಾಸ್ ಮಾಡುವಂತೆ ಕೇಳಿಕೊಂಡಾಗ ಸಾಲ ಪಡೆದಿದ್ದ ಗಂಗಾಧರ್ ಮಾತ್ರ ಆತನ ಮಾತಿಗೆ ಕ್ಯಾರೆ ಅನ್ನಲಿಲ್ಲ. ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದು ಮನ ನೊಂದ ಮಧು ಸ್ಥಳದಲ್ಲೆ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ. ವಿಷಯ ತಿಳಿದ ಹೊಯ್ಸಳ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಧು ಅವರನ್ನು ಆಸ್ಪತ್ರೆಗೆ ಸಾಗಿಸುವುದಾಗಿ ಹೇಳಿ ಆತನನ್ನು ದಾರಿಯ ಮಧ್ಯದಲ್ಲಿ ಮಲಗಿಸಿ ಹೋಗಿದ್ದಾರೆ..! ನಂತರ ಸ್ವತಃ ಮಧು ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಸದ್ಯಕ್ಕೆ ಮಧು ಸುಂಕದಕಟ್ಟೆ ಬಳಿಯ ಸವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...