No menu items!
5.2 C
Munich
Friday, April 24, 2026

ಬಾಳೆಹಣ್ಣಿನಲ್ಲಿ ಹಣ ಸಾಗಿಸಲು ಪ್ಲಾನ್ ಮಾಡಿದ್ದ ಖದೀಮರು ಅಂಧರ್

Must read

ಅಕ್ರಮ ಹಣಾನ ಬಚ್ಚಿಡೋಕೆ ಅಥವಾ ಬೇರೆ ಕಡೆ ಸಾಗಿಸೋಕೆ ಎನೆಲ್ಲಾ ಪ್ಲಾನ್ ಮಾಡ್ತಾರೆ ಅಂದ್ರೆ ಇವ್ರ ಪ್ಲಾನ್‍ಗಳಿಗೆ ಅವಾರ್ಡ್‍ಗಳು ಕೊಡ್ಬೇಕು ನೋಡಿ..! ತಮ್ಮಲ್ಲಿರೋ ಅಕ್ರಮ ಹಣವನ್ನು ಬಚ್ಚಿಡೋಕೆ ಮನೆಯ ಟೈಲ್ಸ್ ಅಡಿ, ದೇವರ ವಿಗ್ರಹದೊಳಗೆ ಅಷ್ಟೆ ಏಕೆ ಬಾತ್‍ರೂಂನಲ್ಲೂ ಸೀಕ್ರೆಟ್ ಲಾಕರ್‍ಗಳನ್ನ ಮಾಡ್ಕೊಂಡಿರ್ತಾರೆ. ಆದ್ರೆ ಇಲ್ಲಿಬ್ರು ಖದೀಮರು ಅದಕ್ಕಿಂತ ಸೇಫ್ಟಿ ಜಾಗದ ಪ್ಲಾನ್ ಮಾಡಿ ಹಣ ಸಾಗ್ಸೋಕೆ ಮುಂದಾಗಿದ್ರು. ತಾವು ಹಣ ಈ ರೀತಿ ಹಣ ಸಾಗಿಸಿದ್ರೆ ಯಾರಿಗೂ ಡೌಟ್ ಬರಲ್ಲ ಅಂತ ನಿರ್ಧರಿಸಿದ್ದ ಈ ಇಬ್ಬರು ಕದೀಮರು ಅದಕ್ಕೆ ಬಳಕೆ ಮಾಡ್ಕೊಂಡಿದ್ದ ಸಾಧನ ಬಾಳೆಹಣ್ಣು..! ಹೌದು.. ಡಜನ್‍ಗಟ್ಲೆ ಬಾಳೆ ಹಣ್ಣನ್ನು ಬಳಕೆ ಮಾಡ್ಕೊಂಡು ಸುಮಾರು 45.69 ಲಕ್ಷ ರೂ. ಮೌಲ್ಯದ ಸೌದಿ ರಿಯಲ್ ನ್ನು ಸಾಗಣಿಕೆ ಮಾಡ್ತಾ ಇದ್ದ ಕೇರಳದ ಕೋಯಿಕ್ಕೋಡ್‍ನ ಇಬ್ಬರು ಪ್ರಯಾಣಿಕರು ಈಗ ಪೊಲೀಸರ ಅಥಿತಿಯಾಗಿದ್ದಾರೆ. ಬಾಳೆಹಣ್ಣಿನ ಸಂದಿ ಮೂಲೆಗಳಲ್ಲಿ ಸುಮಾರು 45 ಲಕ್ಷ ಹಣವನ್ನ ಅಡಗಿಸಿಟ್ಟು ಕೋಯಿಕ್ಕೋಡ್ ವಿಮಾನ ನಿಲ್ದಾಣದಿಂದ ಇಂಡಿಗೋ 6ಇ-88 ವಿಮಾನದಿಂದ ದುಬೈಗೆ ಹಾರಲು ಪ್ಲಾನ್ ಮಾಡಿದ್ರು. ಆದ್ರೆ ಲಗೇಜ್ ಚೆಕಿಂಗ್ ವೇಳೆ ಇವರಿಬ್ಬರು ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದದ್ದನ್ನು ಕಂಡ ಅಲ್ಲಿನ ಭದ್ರತಾ ಸಿಬ್ಬಂಧಿಗಳು ಅವರ ಬ್ಯಾಗ್‍ಗಳನ್ನು ಚೆಕ್ ಮಾಡಿದ್ದಾರೆ. ಆಗ ಬಾಳೆಹಣ್ಣಿನ ಅಡಿಯಲ್ಲಿದ್ದ ಸೌದಿ ರಿಯಲ್ಸ್ ನ ಕಂಡು ಶಾಕ್ ಆಗಿದ್ದಾರೆ. ಸದ್ಯ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

2019ರ ವರ್ಲ್ಡ್ ಕಪ್‍ನಲ್ಲಿ ಪಾಕ್ ಆಡೋದು ಬಹುತೇಕ ಡೌಟ್..! ಯಾಕೆ ಗೊತ್ತಾ..?

ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದ ಸ್ವಾತಂತ್ರ್ಯ ಹೋರಾಟಗಾರ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article