ಮಂಡ್ಯದ ಸಾಮಾನ್ಯ ರೈತನ ಮಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶ, ರಾಜ್ಯ ಹಾಗೂ ತನ್ನೂರಿನ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾಳೆ.
ಈಕೆಯ ಹೆಸರು ಹಂಸವೇಣಿ. ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಪ್ರತಿಭಾನ್ವಿತ ಆಟಗಾರ್ತಿ.
ಈಕೆ ಟೆನ್ನಿಕೋಯಿಟ್ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜು.31ರಿಂದ ಆಗಸ್ಟ್ 6ರವರೆಗೆ ರಷ್ಯಾದ ಬೆಲಾರಸ್ ನಲ್ಲಿ ನಡೆಯಲಿರುವ 4ನೇ ವಿಶ್ವ ಟೆನ್ನಿಕೋಯಿಟ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ನಾಡಿನ ಕೀರ್ತಿ ಎತ್ತಿ ಹಿಡಿಯಲಿದ್ದಾರೆ.