ಮದುವೆ ದಿನ ,.ಮದುವೆ ಅಲಂಕಾರದಲ್ಲೇ ವಧು ಪರೀಕ್ಷೆ ಬರೆದ ವಿಶೇಷ ಘಟನೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ನಡೆದಿದೆ.
ಪಟ್ಟಣದ ಕಲ್ಪತರು ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿನಿ ಕಾವ್ಯಾ ಅವರ ಮದುವೆ ಲೋಹಿತ್ ಎಂಬ ಯುವಕನೊಂದಿಗೆ ನಿಶ್ಚಯವಾಗಿತ್ತು. ಬೆಳಗ್ಗೆ 11ಗಂಟೆಯಿಂದ 11.45ರ ಅವಧಿಯಲ್ಲಿ ಮುಹೂರ್ತ ನಿಗಧಿಯಾಗಿತ್ತು. ಆದರೆ, ಇಂದೇ ಬಿಕಾಂ ಎರಡನೇ ವರ್ಷದ ಬ್ಯುಸ್ ನೆಸ್ ಟ್ಯಾಕ್ಸ್ ಪರೀಕ್ಷೆ ಕೂಡ ಇತ್ತು.
ಮದುವೆ ಕಾರಣದಿಂದ ವಧು ಕಾವ್ಯಾ ಪರೀಕ್ಷೆ ಬರೆಯದೇ ಇರಕೂಡದೆಂದು ಎರಡು ಮನೆಯವರು ಒಪ್ಪಿ, ಕಾವ್ಯಾಗೆ ಪ್ರೋತ್ಸಾಹ ನೀಡಿ ಪರೀಕ್ಷೆಗೆ ಕಳುಹಿಸಿಕೊಟ್ಟರು. ಮದುಮಗಳ ಅಲಂಕಾರದಲ್ಲೇ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯದಲ್ಲಿ ಹಾಜರಾಗಿ ಕಾವ್ಯ ಪರೀಕ್ಷೆ ಬರೆದಿದ್ದಾರೆ.

ಮೂಹರ್ತದ ವೇಳೆಗೆ ಪರೀಕ್ಷಾ ಕೇಂದ್ರದಿಂದ ಕಾವ್ಯಾ ಹೊರಬಂದಿದ್ದು, ಅವರನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಹೋಗಿ ಸಂಪ್ರದಾಯದ ಪ್ರಕಾರವೇ ಮದುವೆ ನೆರವೇರಿಸಲಾಯಿತು.






