ಎರಡು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಮಂಡ್ಯದ ಪಾಂಡಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆದಿದೆ.
ಪ್ರೀತಿ (20 ) ಮೃತೆ. ಈಕೆ ಎಂಟು ತಿಂಗಳ ಹಿಂದಷ್ಟೇ ಮೇಲುಕೋಟೆಯ ಆಟೋಚಾಲಕ ಮಂಜುನಾಥ್ ಜೊತೆ ಪ್ರೇಮ ವಿವಾಹವಾಗಿದ್ದಳು.
ಎರಡು ತಿಂಗಳ ಗರ್ಭಿಣಿಯಾಗಿದ್ದ ಈಕೆಯ ಶವ ಗುರುವಾರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಎಂದು ಪರಿಗಣಿಸಲಾಗಿದ್ದರೂ ಇದೊಂದು ಕೊಲೆ ಎಂದು ಮೃತೆಯ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.