ಮಂಡ್ಯದಲ್ಲಿ ಯುವಕನೊಬ್ಬ ಕಿಡ್ನಿ ದೊರೆಯುತ್ತದೆ ಎಂದು ಬೋರ್ಡ್ ಹಾಕಿಕೊಂಡಿದ್ದಾನೆ .
ಮಂಡ್ಯ ನಗರದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿರುವ 26ವರ್ಷದ ವಿನೋದ್ ಕುಮಾರ್ ಎಂಬ ಯುವಕ ತನ್ನ ಅಂಗಡಿಯ ಮುಂದೆ ಹೀಗೆ ಬೋರ್ಡ್ ನೇತುಹಾಕಿದ್ದಾನೆ.
ಮಂಡ್ಯದ ತಗ್ಗಹಳ್ಳಿ ಗ್ರಾಮದ ಈತ ಮನೆ ಕಟ್ಟಿಸಲು ಸೇರಿದಂತೆ ಅನೇಕ ಕಾರಣಗಳಿಗೆ ಸಾಲ ಮಾಡಿದ್ದಾನೆ. ತಾನು ಮಾಡಿಕೊಂಡಿರೋ ಸಾಲ ತೀರಿಸಲಾಗದೆ ಕಿಡ್ನಿ ಮಾರಾಟಕ್ಕಿಟ್ಟಿದ್ದಾನೆ.
ಬಡ್ಡಿ ಕಟ್ಟುವುದಕ್ಕಿಂತ ಜಮೀನು ಅಡವಿಟ್ಟು ಸಾಲ ತೀರಿಸಲು ಮುಂದಾಗಿದ್ದಾನೆ.ನಾಡಕಚೇರಿಯಲ್ಲಿ ಜಮೀನಿನ ಸ್ಕೆಚ್ ಕೊಡಲು ಲಂಚ ಕೇಳ್ತಿದ್ದಾರೆ. ಲಂಚ ಕೊಡೋಕೆ ನನ್ನ ಬಳಿ ಹಣವಿಲ್ಲ ಅಂತ ಕಿಡ್ನಿ ಮಾರಾಟಕ್ಕಿದೆ ಎಂದು ಬೋರ್ಡ್ ಹಾಕಿದ್ದಾನೆ. ಸ್ಥಳಿಯರ ಬುದ್ಧಿಮಾತನ್ನು ಸಹ ಈತ ಕೇಳ್ತಿಲ್ಲ. ಕಿಡ್ನಿ ಮಾರಿ ಸಾಲ ತೀರಿಸಲು ಮುಂದಾಗಿದ್ದಾನೆ.