ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಅಬ್ಬರಿಸುತ್ತಿರೋ ಓಖೀ ಚಂಡಮಾರುತದ ಪರಿಣಾಮ ತಮಿಳುನಾಡು, ಕೇರಳ ತತ್ತರಿಸಿದೆ. ರಾಜ್ಯಕ್ಕೂ ಚಂಡಮಾರುತದ ಪೆಟ್ಟುಬಿದ್ದಿದೆ. ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕಾಫಿ, ಭತ್ತ ಮತ್ತಿತರ ಬೆಳೆಗಳಿಗೆ ತೊಂದರೆಯಾಗಿದೆ. ಈ ನಡುವೆ ಮಂಗಳೂರಿಗೆ ವಿಪತ್ತು ಎದುರಾಗಲಿದೆ ಎಂಬ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಕರಾವಳಿ ಪ್ರದೇಶಗಳಲ್ಲಿ 2 ದಿನ ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮಳೆ ಹೆಚ್ಚದಲ್ಲಿ ಆಪತ್ತು ಎದುರಾಗಲಿದೆ.
ಈಗಲ್ಲದಿದ್ದರೂ ಮುಂದೆ ಎದುರಾಗಲಿದೆಯೇ ತೊಂದರೆ…?
ಓಖೀ ಚಂಡಮಾರುತದಿಂದ ವಾತಾವರಣದಲ್ಲಿ ಏರುಪೇರಾಗಿದೆ. ಮಳೆ ಹೆಚ್ಚಾದಲ್ಲಿ ಕರಾವಳಿ ಭಾಗ ಸಂಕಷ್ಟವನ್ನು ಎದುರಿಸಲಿದೆ. ಈಗ ಎದುರಾಗಿರೋ ಪ್ರಕೃತಿ ವಿಕೋಪಕ್ಕೆ ಮಂಗಳೂರು ತುತ್ತಾಗದೇ ಇದ್ದರೂ ಒಂದಲ್ಲ ಒಂದು ದಿನ ಮಂಗಳೂರು ದೊಡ್ಡ ಆಪತ್ತನ್ನು ಎದುರಿಸಲೇ ಬೇಕಾಗಿದ್ದು, ನಮ್ಮ ಮಂಗಳೂರು ಅಪಾಯದ ಅಂಚಿನಲ್ಲಿದೆ. ಇದನ್ನು ಈ ಹಿಂದೆ ನಾಸವೇ ಹೇಳಿದೆ- ಈ ಸುದ್ದಿಯನ್ನು ನೀವು ನವೆಂಬರ್ 17ರಂದು ದಿ ನ್ಯೂ ಇಂಡಿಯನ್ ಟೈಮ್ಸ್ ನಲ್ಲಿ ಓದಿದ್ದೀರಿ.
ನಾಸಾ ಹೇಳಿದ್ದೇನು..? :
ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಇಂತಹದ್ದೊಂದು ಶಾಕಿಂಗ್ ನ್ಯೂಸ್ ನೀಡಿದೆ..! ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮ ಗ್ರೀನ್ ಲ್ಯಾಂಡ್ ಹಾಗೂ ಅಂಟಾರ್ಟಿಕದಲ್ಲಿ ಹಿಮಗಡ್ಡೆಗಳು ಕರಗುವ ಅಪಾಯವಿದೆಯಂತೆ..! ಹೀಗೆ ಹಿಮಗಡ್ಡೆಗಳು ಕರಗಿ ಸಮುದ್ರದ ಮಟ್ಟದಲ್ಲಿ ಏರಿಕೆಯಾದರೆ ಮೊದಲು ಮುಳುಗುವುದು ನಮ್ಮ ಕರ್ನಾಟಕದ ಮಂಗಳೂರು ಎಂದು ಹೇಳಿದೆ.
ಕ್ಯಾಲಿಫೋರ್ನಿಯಾದಲ್ಲಿರೋ ನಾಸಾ ಕೇಂದ್ರದ ಜೆಟ್ ಪ್ರೊಪಲ್‍ಷನ್ ಲ್ಯಾಬೊರೇಟರಿಯಲ್ಲಿ ವಿಶ್ವದ 293 ಬಂದರು ನಗರಗಳ ಅಧ್ಯಯನ ನಡೆಸಿರೋ ಸಂಶೋಧಕರು ತಮ್ಮ ವರದಿಯಲ್ಲಿ ಈ ಆಘಾತಕಾರಿ ವಿಷಯವನ್ನು ಹೇಳಿದ್ದಾರೆ.
ಇವರ ಸಂಶೋಧನಾ ವರದಿ ಪ್ರಕಾರ ಮಂಗಳೂರು ಮೊದಲ ಸ್ಥಾನದಲ್ಲಿದ್ದರೆ ನಂಗತರದ ಸ್ಥಾನದಲ್ಲಿ ಮುಂಬೈ, ನ್ಯೂಯಾರ್ಕ್ ಮಹಾನಗರಗಳು ಇವೆಯಂತೆ..!