ಮಾವಿನ ಎಲೆಗಳು ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎಂದು ನಿಮಗೆ ಗೊತ್ತೆ..?
ಮಾವಿನ ಹಣ್ಣು ತಿನ್ನುವುದು ಯಾರಿಗೆ ತಾನೇ ಇಷ್ಟ ಆಗುವುದಿಲ್ಲ? ನೀವೇ ಹೇಳಿ. ವಿಟಮಿನ್ ‘ ಸಿ ‘ ಅಂಶದಿಂದ ತುಂಬಿ ತುಳುಕುವ ಮಾವು ತನ್ನ ಕಾಯಿಯ ಸಮಯದಲ್ಲಿ ಹುಳಿ ಮತ್ತು ಮಾಗಿದ ಸಂಧರ್ಭದಲ್ಲಿ ಸಿಹಿಯ ಮಾಧುರ್ಯವು ನಿಮ್ಮ ಹೊಟ್ಟೆಯನ್ನು ತಣಿಸುತ್ತದೆ ಮತ್ತು ಇನ್ನೂ ಸ್ವಲ್ಪ ತಿನ್ನಬೇಕೆಂಬ ಬಯಕೆ ಉಂಟಾಗುತ್ತದೆ.
ಅದರಂತೆ ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಮನೆಯ ಮುಂದೆ ತೋರಣ ಕಟ್ಟಲು ಭಾರತೀಯರು ಮಾವಿನ ಎಲೆಗಳನ್ನು ಬಳಸುವುದನ್ನು ನೋಡಿರುತ್ತೇವೆ. ಆದರೆ ಆಯುರ್ವೆದದಲ್ಲಿಯೂ ಮಾವಿನ ಎಲೆಗಳನ್ನು ಔಷಧೀಯ ಎಲೆಗಳಾಗಿ ಬಳಸುತ್ತಾರೆ ಎನ್ನುವುದು ನಿಮಗೆ ತಿಳಿದಿರಲಿ. ಅರೇ ಹಾಗಾದರೆ ಯಾವೆಲ್ಲಾ ಕಾರಣಕ್ಕೆ ಮಾವಿನ ಎಲೆಗಳನ್ನು ಬಳಸುತ್ತಾರೆ. ಆರೋಗ್ಯ ಸುಧಾರಿಸಲು ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಕ್ಯಾನ್ಸರ್ ಮತ್ತು ಗಡ್ಡೆಗಳು ಬೆಳೆಯದಂತೆ ತಡೆಯುತ್ತದೆ ಮಾವಿನ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುತ್ತದೆ. ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುವ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದು ಕ್ಯಾನ್ಸರ್, ಗಡ್ಡೆಗಳಂತಹ ಮಾರಣಾಂತಿಕ ಖಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವುದರ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ.
ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ ಮಾವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ದೇಹದಲ್ಲಿನ ಸೋಂಕು ನಿವಾರಣೆಗೆ ಸಹಾಯಕವಾಗಿದೆ. ಇದು ವಯಸ್ಸಿನನಿಂದ ಉಂಟಾಗುವ ಚರ್ಮದ ಮಡಿಕೆಯನ್ನು ನಿವಾರಿಸಲು ಸಹಾಯಕವಾಗಿದೆ. ಮಾವಿನ ಎಲೆಗಳು ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾಗಿದೆ ಹಾಗೂ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮಾವಿನ ಎಲೆಗಳ ಪೇಸ್ಟ್ ತಯಾರಿಸುವ ಮೂಲಕ ನಿಮ್ಮ ತಲೆ ಕೂದಲು ಬೆಳವಣಿಗೆಗೆ ಬಳಕೆ ಮಾಡಬಹುದು. ಇದರಿಂದ ಕೂದಲು ದಪ್ಪ ಮತ್ತು ಕಪ್ಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಾಯಕ ಮಾವಿನ ಎಲೆಗಳು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಿವಾರಣೆಗೆ ಸಹಾಯಕವಾಗಿದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ನಿಮ್ಮ ಆಹಾರದಲ್ಲಿ ಮಾವಿನ ಎಲೆಗಳನ್ನು ಬಳಸಿ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಮಾವಿನ ಎಲೆಗಳ ಬಳಕೆ ಉತ್ತಮ. ಜತೆಗೆ ಮಾವಿನ ಎಲೆಗಳನ್ನು ಬಳಸುವುದರ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಮಧುಮೇಹ ನಿಯಂತ್ರಣಕ್ಕೂ ಸಹ ಮಾವಿನ ಎಲೆಗಳು ಸಹಾಯ ಮಾಡುತ್ತವೆ. ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾವಿನ ಎಲೆಗಳನ್ನು ಬಳಸುತ್ತಾರೆ.