ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಹುದೊಡ್ಡ ಕನಸಿನ ಚಿತ್ರ ಮಂಜಿನ ಹನಿ. 5ವರ್ಷದ ಹಿಂದೆಯೇ ಸೆಟ್ಟೇರಿ, ಕಾರಣಾಂತರಗಳಿಂದ ಸ್ಥಗಿತಗೊಂಡಿದೆ. ಇದರೊಂದಿಗೆ ಕನಸುಗಾರನ ಮಂಜಿನ ಹನಿ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ.
ಚಿತ್ರದ ಬಗ್ಗೆ ಇಷ್ಟು ದಿನ ಸುದ್ದಿ ಇರಲಿಲ್ಲ. ಆದರೆ, ಅದೇ ಚಿತ್ರತಂಡದಿಂದ ಬೆಚ್ಚಿ ಬೀಳಿಸುವ ಪ್ರಕರಣವೊಂದು ಹೊರಬಿದ್ದಿದೆ. ಚಿತ್ರದ ಸಹ ನಿರ್ಮಾಪಕ ನಾಗೇಶ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ರವಿಚಂದ್ರನ್ ಅಭಿನಯದ ಈ ಚಿತ್ರ 2013ರಲ್ಲೊ ಸೆಟ್ಟೇರಿತ್ತು. ಆಗ ಸಂದೇಶ್ ನಾಗರಾಜ್ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದರು. ನಂತರ ಅವರು ಹೊರಬಂದರು. ಆರ್ಥಿಕ ಸಮಸ್ಯೆಯ ಕಾರಣದಿಂದ ಚಿತ್ರೀಕರಣ ಅರ್ಧಕ್ಕೆ ನಿಂತಿತು.
ಬಳಿಕ ರವಿಚಂದ್ರನ್ ಅವರೇ ಸ್ವತಃ ನಿರ್ಮಾಣದ ಹೊಣೆ ಸಹ ಹೊತ್ತರು. 2015ರಲ್ಲಿ ಚಿತ್ರೀಕರಣ ಮತ್ತೆ ಆರಂಭವಾಯಿತು. ಆಗ ಹೊಸಕೋಟೆ ಮೂಲದ ನಾಗೇಶ್ ಎಂಬುವವರು ಸಹ ನಿರ್ಮಾಪಕಾರದರು.
ನಾಯಕನ ತಂಗಿಯ ಪಾತ್ರವನ್ನು ಚೇತನಾ ಎಂಬ ನಟಿಗೆ ನೀಡಲಾಗಿತ್ತು. ಇದ್ದಕ್ಕಿದ್ದಂತೆ ಮತ್ತೆ ಚಿತ್ರೀಕರಣ ನಿಂತಿತು.
ಈ ವೇಳೆ ನಾಗೇಶ್ ಮನು ಎಂಬ ಹೊಸ ಎಲ್ಲ ನಟಿ ಚೇತನಾ ಗೆ ಮೆಸೇಜ್ ಮಾಡಲು ಶುರು ಮಾಡಿರುವುದಾಗಿ ಸ್ವತಃ ಚೇತನಾ ಅವರೇ ಆರೋಪಿಸಿದ್ದಾರೆ. ನೀನು ಸಿನಿಮಾರಂಗದಲ್ಲಿ ದೊಡ್ಡಮಟ್ಟಿಗೆ ಬೆಳೆಯಬೇಕು,ಒಳ್ಳೆಯ ಹೆಸರು ಮಾಡಬೇಕು ಎಂದಾದರೆ ಗೌರಿ ಎಂಬಾಕೆಯನ್ನು ಸಂಪರ್ಕಿಸುವಂತೆ ನಾಗೇಶ್ ಚೇತನಾಗೆ ಹೇಳಿದ್ದಾರಂತೆ. ಅವರ ಮಾತಿನಂತೆ ಚೇತನಾ ಗೌರಿ ಎಂಬಾಕೆಯನ್ನು ಸಂಪರ್ಕಿಸಿದಾಗ ಆಕೆ, ನಿನಗೆ ದೋಷವಿದೆ, ನಿನ್ನ ಹೆಸರಲ್ಲಿ ಪೂಜೆಮಾಡಿಸಿ ,ಮಗು ಬಲಿ ಕೊಡಬೇಕು ಎಂದು ಹೇಳಿದ್ದಾಳೆ. ಇದನ್ನೆಲ್ಲಾ ನಂಬಿದ ಚೇತನಾಳಿಂದ ಮೂರು ವರ್ಷದಲ್ಲಿ ನಾಗೇಶ್ ಮತ್ತು ಗೌರಿ ಸುಮಾರು 8ಲಕ್ಷ ರೂ ವಂಚಿಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 1 ರಂದು ಸಹ ನಾಗೇಶ್ ಚೇತನಾರಿಂದ ವೀಣಾ ಎಂಬ ಖಾತೆಗೆ 50,000 ರೂ ಕಳಿಸಿಕೊಂಡು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚೇತನಾ ನಾಗೇಶ್ ಮತ್ತು ಗೌರಿ ವಿರುದ್ಧ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.