ಕನ್ನಡದ ಹೆಸರಾಂತ ನಿರೂಪಕಿಯರಲ್ಲಿ ಮಂಜುಳ ಮೂರ್ತಿ ಒಬ್ಬರು. ಕನ್ನಡ ದೃಶ್ಯಮಾಧ್ಯಮ ಲೋಕ ಕಂಡಿರುವ ಅನುಭವಿ ನಿರೂಪಕಿಯರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಇವರಿಗೆ ಚಿಕ್ಕಂದಿನಿಂದಲೂ ಭಾಷೆಯ ಮೇಲೆ ಅತೀವ ಪ್ರೀತಿ.ಇದರಿಂದಾಗಿ ಭಾಷೆಯ ಮೇಲೆ ಒಳ್ಳೆಯ ಹಿಡಿತವನ್ನು ಸಾಧಿಸಲು ಸಾಧ್ಯವಾಯ್ತು. ಮುಂದೆ ಇದೇ ಮಾಧ್ಯಮ ಕ್ಷೇತ್ರದತ್ತ ಮನಸ್ಸು ವಾಲುವಂತೆ ಮಾಡಿತು.
ಕೃಷ್ಣಕುಮಾರ್ ಮತ್ತು ಲಕ್ಷ್ಮಿ ದಂಪತಿಯ ಪುತ್ರಿ ಮಂಜುಳ ಮೂರ್ತಿ. ಇವರು ಹುಟ್ಟಿದ್ದು ತಾಯಿಯ ತವರು ಮಾಗಡಿಯಲ್ಲಿ. ಬೆಳೆದಿದ್ದು ರಾಜಧಾನಿ ಬೆಂಗಳೂರಲ್ಲಿ. ಪತಿ ಅಥ್ಲಿಟ್ ನರಸಿಂಹ ಮೂರ್ತಿ, ಮಗ ಸಿದ್ಧಾರ್ಥ್, ಮಗಳು ಮಿಥಿಲ.
ಬೆಂಗಳೂರಿನ ನಿವೇದಿತಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎನ್‍ಎಸ್‍ವಿಕೆಯಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಹಾಗೂ ಜೆಎಸ್‍ಎಸ್‍ನಲ್ಲಿ ಪದವಿ (ಬಿಕಾಂ) ಶಿಕ್ಷಣ ಪಡೆದಿದ್ದಾರೆ.
ಶಾಲಾ ದಿನಗಳಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಮಂಜುಳ ಅವರು ದೂರದರ್ಶನದ ವಾರ್ತೆಗಳು, ಕಾರ್ಯಕ್ರಮಗಳನ್ನು ನೋಡ್ತಿದ್ರು. ಪ್ರಕಟಣೆಗಳನ್ನು ಕೇಳಿಸಿಕೊಂಡು, ತಾನೂ ಅದನ್ನು ಅನುಕರಣೆ ಮಾಡ್ತಿದ್ರು.
ಪದವಿ ಮುಗಿಯುತ್ತಿದ್ದಂತೆ ಉದಯ ಚಾನಲ್ ಅರ್ಜಿ ಹಾಕಿದ್ರು. ಆದ್ರೆ, ಕೆಲಸ ಚೆನ್ನೈಲಿ ಅಂತ ಅಲ್ಲಿಗೆ ಹೋಗಲಿಲ್ಲ. ಮದುವೆ ನಂತರ ಡಾ. ಶಾಮಲ ಅವರ ಪರಿಚಯವಾಯ್ತು. ಇವರು ಡಾಕ್ಟರ್ಸ್ ಲೈನ್ ಕಾರ್ಯಕ್ರಮ ನಡೆಸಿಕೊಡ್ತಿದ್ರು. ಅವರ ಸಲಹೆಯಂತೆ ಮತ್ತೆ ಉದಯಕ್ಕೆ ಅಪ್ಲೇ ಮಾಡಿದ್ರು. ಅದೇ ಸಮಯದಲ್ಲಿ ‘ಚಂದನ’ದ ವೀಣಾ ಶಶಿಧರ್ ಅವರ ಪರಿಚಯವಾಗುತ್ತೆ. ಅವರು ಡಿಡಿಗೆ ಅರ್ಜಿ ಹಾಕಲು ಹೇಳ್ತಾರೆ.
ಉದಯ ಮತ್ತು ಡಿಡಿಗೆ ಒಂದೇ ದಿನ ಅರ್ಜಿ ಹಾಕ್ತಾರೆ. ಅರ್ಜಿ ಹಾಕಿದ ದಿನವೇ ಉದಯದಲ್ಲಿ ಇಂಟರ್ ವ್ಯೂ. ಶೈಲಜಾ ಸಂತೋಷ್ ಅವರು ಆ್ಯಂಕರಿಂಗ್ ಟೆಸ್ಟ್ ನೀಡಿದ್ರು. ಅದೇ ದಿನ ಮಂಜುಳ ಅವರ ಆಯ್ಕೆಯೂ ಆಯ್ತು…! 2000ನೇ ಇಸವಿಯಲ್ಲಿ ಉದಯ ಟಿವಿ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಮಂಜುಳ ಮೂರ್ತಿ ಪಾದರ್ಪಣೆ ಮಾಡಿದ್ರು.
ಉದಯ ಟಿವಿಯಲ್ಲಿ ಆರಂಭದಲ್ಲಿ ಹೊಸಬರಿಗೆ ನ್ಯೂಸ್ ಆ್ಯಂಕರಿಂಗ್ ಕೊಡ್ತಿರ್ಲಿಲ್ಲ. ಉದಯ ನ್ಯೂಸ್ ಆಗಿನ್ನೂ ಸ್ಟಾಟ್ ಆಗಿರ್ಲಿಲ್ಲ. ದಿನಾ ಸುಮ್ನೆ ಹೋಗಿ ಬರೋದಾಗುತ್ತೆ ಅಂತ ಮಂಜುಳಾ ಕೆಲಸಕ್ಕೆ ಹೋಗದನ್ನು ನಿಲ್ಲಿಸಿದ್ರು.
ನಂತರ ಕೆಲವೇ ದಿನಗಳಲ್ಲಿ ಉದಯ ನ್ಯೂಸ್ ಶುರುವಾಯ್ತು. ಆಫೀಸಿಂದ ಕರೆಬಂತು. ಕೆಲಸಕ್ಕೆ ಜಾಯಿನ್ ಆದ್ರು. ಉದಯಕ್ಕೆ ಜಾಯಿನ್ ಆದ 6 ತಿಂಗಲ್ಲಿ ಡಿಡಿಯಿಂದಲೂ ಆಫರ್ ಬಂತು. ಆದ್ರೆ, ಇಲ್ಲಿ ಫುಲ್ ಟೈಮ್ ಎಂಪ್ಲಾಯ್ ಆಗಿದ್ದರಿಂದ ದೂರದರ್ಶನಕ್ಕೆ ಹೋಗಲಿಲ್ಲ.
ವಲ್ರ್ಡ್ ಟ್ರೇಡ್ ಸೆಂಟರ್ ಮೇಲೆ ಭಯೋತ್ಪದನಾ ದಾಳಿಯಾದಾಗ ಬೆಳಗ್ಗೆ 7 ಗಂಟೆಗೆ ವಾರ್ತಾ ವಾಚನಕ್ಕೆ ಹೋಗಬೇಕಿತ್ತು. ಹಿಂದಿನ ದಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಂಜುಳಾ ಅವರು ನಿದ್ರೆ ಇಲ್ಲದೇ ಬೆಳಗ್ಗೆ ನ್ಯೂಸ್ ಓದಲು ಹೋಗಿದ್ದರು. ಆದ್ರೆ, ನ್ಯೂಸ್ ಚೆನ್ನಾಗಿ ಮೂಡಿಬಂದಿತ್ತು.
ಈ ಘಟನೆಯಲ್ಲದೆ, ವರನಟ ಡಾ.ರಾಜ್ ಕುಮಾರ್ ವಿಧಿವಶರಾದ ಸುದ್ದಿ ವಾಚಿಸಿದ್ದು, ಗುಜರಾತ್ ಭೂಕಂಪದ ಸುದ್ದಿ ವಾಚನ ಮರೆಯಲಾಗಲ್ಲ ಎನ್ನುತ್ತಾರೆ ಮಂಜುಳ.
ಕಾಲೇಜು ದಿನಗಳಲ್ಲಿ ಮಂಜುಳ ಅವರು ಉದಯ ಟಿವಿಯ ಜನಪ್ರಿಯ ಕಾರ್ಯಕ್ರಮ ‘ಪ್ರಪಂಚ ಪರ್ಯಟನೆ’ಯನ್ನು ತಪ್ಪದೇ ನೋಡ್ತಿದ್ರು. ಮುಂದೆ ತಾನು ಈ ಕಾರ್ಯಕ್ರಮ ನಡೆಸಿಕೊಡ್ತೀನಿ ಅಂತ ಕನಸು ಮನಸ್ಸಿನಲ್ಲೂ ಎಣಿಸಿರ್ಲಿಲ್ಲ. ಆದರೆ, ಉದಯದಲ್ಲಿ ಪ್ರಪಂಚ ಪರ್ಯಟನೆಯನ್ನು ನಡೆಸಿಕೊಡುವ ಅವಕಾಶ ಸಿಕ್ಕಾಗ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಖುಷಿ ಖುಷಿಯಿಂದ ಹೇಳಿಕೊಳ್ತಾರೆ.
‘ಕ್ರೀಡಾಲೋಕ’, ‘ಕಲಾಸೌರಭ’, ಸೇರಿದಂತೆ ಹತ್ತಾರು ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹಿರಿಮೆ ಮಂಜುಳ ಅವರದ್ದು.
ಒಮ್ಮೆ ಸುಚೀಂದ್ರ ಪ್ರಸಾದ್ ಅವರು ದಿಢೀರನೆ ಗೈರಾದಾಗ, ನ್ಯೂಸ್ ಓದುವ ಜವಬ್ದಾರಿ ಮಂಜುಳ ಅವರದ್ದಾಗಿತ್ತು. ಮುಖ್ಯಸ್ಥರಾದ ಮುಂಜಾನೆ ಸತ್ಯ ಅವರ ಎದುರು ಸುದ್ದಿ ವಾಚನ ಮಾಡೋದು ಭಯಮಿಶ್ರತ ಖುಷಿಯ ಸನ್ನಿವೇಶ ಆಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಮಂಜುಳ.
‘ವಾಣಿ, ಜಯಶ್ರೀ, ಶ್ರೀಧರ್, ಪ್ರಕಾಶ್ ಅವರ ಜೊತೆ ಕೆಲಸ ಮಾಡಿದ ಅನುಭವ ಸ್ಮರಣೀಯ. ಉದಯ ಟಿವಿ ಮಖ್ಯಸ್ಥರಾದ ಸೆಲ್ವಂ ಸರ್ ಮತ್ತು ವಿಜಯ್ ಸರ್ ಹಾಗೂ ಸುಧಾಮಣಿ, ರವೀಂದ್ರನಾಥ್ ಅವರು ಪ್ರೋತ್ಸಾಹ ನೀಡಿದ್ರು’ ಎಂದು ಹೇಳುತ್ತಾರೆ ಮಂಜುಳ.
ಉದಯ ನ್ಯೂಸ್ ಕ್ಲೋಸ್ ಆಗಿದ್ದು ಇವರಿಗೆ ಅತ್ಯಂತ ದುಃಖದ ವಿಷಯ. ಕಳೆದ 1 ತಿಂಗಳಿಂದ ದೂರದರ್ಶನ ಸೇರಿದ್ದಾರೆ. ನಾನಾ ಸುದ್ದಿವಾಹಿನಿಗಳಿಂದ ಆಫರ್ ಬಂದರೂ ಅತ್ತ ಹೋಗಿಲ್ಲ. ದೂರದರ್ಶನದಲ್ಲಿ ‘ಕೃಷಿ ದರ್ಶನ’ ನಡೆಸಿಕೊಡ್ತಿದ್ದಾರೆ.
ಉದಯದಲ್ಲಿ ಮೊದಲು ಪೂರ್ಣಪ್ರಮಾಣದ ಉದ್ಯೋಗಿಯಾಗಿದ್ದ ಇವರು ನಡುವೆ ಉದಯ ಟಿವಿ ಕಚೇರಿ ಚೆನ್ನೈಗೆ ಶಿಫ್ಟ್ ಆದಾಗ ಅಲ್ಲಿ ಕೆಲಸ ಮಾಡಲಾಗದೆ ರಾಜೀನಾಮೆ ನೀಡಿದ್ದರು. ವಾಪಸ್ಸು ಉದಯ ಬೆಂಗಳೂರಿಗೆ ಬಂದಾಗ ಉದ್ಯೋಗಿಯಾಗಿಯೇ ಸೇರುವ ಅವಕಾಶವಿದ್ದರೂ ಕುಟುಂಬಕ್ಕೆ ಸಮಯ ಮೀಸಲಿಡಬೇಕೆಂದು ಪಾರ್ಟ್‍ಟೈಮ್ ಎಂಪ್ಲಾಯ್ ಆಗಿ ಕೆಲಸ ಮುಂದುವರೆಸಿದ್ದರು.
ಕಳೆದ 5 ವರ್ಷಗಳಿಂದ ಉದಯ ಮತ್ತು ಆಕಾಶವಾಣಿ ಎರಡಲ್ಲೂ ಕೆಲಸ ನಿರ್ವಹಿಸ್ತಾ ಬಂದಿದ್ದರು. ಈಗ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಕೆಲಸ ಮಾಡ್ತಿದ್ದಾರೆ. ನಾನಾ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಪುಸ್ತಕ ಓದುವುದು, ಸಂಗೀತ ಕೇಳುವುದು ಇವರಿಗೆ ಇಷ್ಟ. ಸಮಾನ ಮನಸ್ಕರ ಜೊತೆಗೂಡಿ ‘ಮರಳಿ ಬೇರಿಗೆ’ ಎಂಬ ತಂಡವನ್ನು ಕಟ್ಟಿಕೊಂಡು ಸಸಿ ನೆಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
‘ಹೊಸಬರಿಗೆ ಕಲಿಕೆಗೆ ಹೆಚ್ಚು ಅವಕಾಶವಿದೆ. ಕಲಿತು ಬೆಳೆಯಲಿ. ಮೀಡಿಯಾಕ್ಕೆ ಬಂದ ಕೂಡಲೇ ತಾನು ಎಲ್ಲವನ್ನೂ ಕಲಿತ್ತಿದ್ದೇನೆ ಎಂಬ ಭ್ರಮೆ ಬೇಡ. ಕಲಿಯುವ ವಯಸ್ಸಲ್ಲಿ ಕಲಿಯಲಿ’ ಎನ್ನುವುದು ಮಂಜುಳ ಅವರು ಹೇಳೋ ಕಿವಿಮಾತು.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ