125 ಕಿ.ಮೀ ಆಸ್ಟ್ರೇಲಿಯಾ ಓಟಗಾರನನ್ನು ಹಿಂಬಾಲಿಸಿದ ನಾಯಿ…!

Date:

ನಾಯಿಗೆ ಇರೋ ನೀಯತ್ತು ಬೇರೆ ಯಾವ ಜೀವಿಗೂ ಇಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ ನೋಡಿ. ಉಂಡ ಮನೆಗೆ ಯಾವತ್ತಿಗೂ ಸ್ವಾಮಿ ನಿಷ್ಠೆಯಾಗಿರುವ ಜೀವಿ ಅಂದ್ರೆ ಅದು ನಾಯಿ. ಅದಕ್ಕನುಗುಣವಾಗಿ ಚೀನಾದ ಗೋಬಿ ಮರುಭೂಮಿಯಲ್ಲಿ ಒಂದು ಘಟನೆ ನಡೆದಿದೆ. ಆಸ್ಟ್ರೇಲಿಯಾದ ಓಟಗಾರನೊಬ್ಬ ನಾಯಿಗೆ ತೋರಿದ ಪ್ರೀತಿ ಅಕ್ಕರೆಯಿಂದ ಆ ನಾಯಿ ಆತನೊಂದಿಗೆ ಸುಮಾರು 125 ಕಿ.ಮೀ ಹಿಂಬಾಲಿಸಿಕೊಂಡೆ ಹೋದ ಪುಟ್ಟ ನಾಯಿ ಮರಿಯೊಂದು ತನ್ನ ಸ್ವಾಮಿ ನಿಷ್ಠೆಯನ್ನು ಮೆರೆದಿದೆ ನೋಡಿ.
ಆತನೊಂದಿಗೆ ಗೋಬಿ ಮರುಭೂಮಿಯಲ್ಲಿ ಅಷ್ಟೊಂದು ದೂರ ಪ್ರಯಾಣಿದ್ದ ನಾಯಿಯನ್ನು ಇದೀಗ ದತ್ತು ಪಡೆದು ವಿಶೇಷ ಪುರಸ್ಕಾರ ನೀಡಿದ್ದಾನೆ. ಆಸ್ಟ್ರೇಲಿಯಾದ ಶ್ರೀಮಂತ ಹಾಗೂ ಎಕ್ಸ್‍ಟ್ರೀಮ್ ರನ್ನರ್ ಡಯಾನ್ ಲಿಯೋನಾರ್ಡ್ ಹಾಗೂ ಆತನ ತಂಡ ಚೀನಾದ ಪಶ್ಚಿಮ ಭಾಗದಲ್ಲಿರುವ ಯುಐಗುರ್ ಪ್ರಾಂತ್ಯದ ದುರ್ಘಮ ಪರ್ವತಗಳು ಹಾಗೂ ಕೆಂಡದಂತಹ ಗೋಬಿ ಮರುಭೂಮಿಯಲ್ಲಿ ಕಳೆದ ತಿಂಗಳು 250 ಕಿ.ಮೀ ಓಟದ ಅಭಿಯಾನವನ್ನು ಆಯೋಜಿಸಲಾಗಿತ್ತು.
ಟಿಯಾನ್ ಶಾನ್ ರೇಂಜ್ ಪ್ರದೇಶದಲ್ಲಿ ಪುಟ್ಟ ನಾಯಿಯೊಂದಕ್ಕೆ ಈತ ಆಹಾರ ನೀಡಿ ಉಪಚಾರ ಮಾಡಿದ್ದ. ಆದರೆ ಆ ನಾಯಿ ಸುಡು ಬಿಸಿನಿನಲ್ಲೇ ಕುದಿಯುತ್ತಿರುವ ಗೋಬಿ ಮರುಭೂಮಿಯಲ್ಲಿ ಆತನ ಜೊತೆ ಸುಮಾರು 125 ಕಿ.ಮೀ ಹಿಂಬಾಲಿಸಿಕೊಂಡು ಬಂದಿತ್ತು. ಏಳು ರೇಸ್‍ಗಳು ಹಾಗೂ ಹಲವಾರು ಬಹು ಕಠಿಣ ಓಟಗಳಲ್ಲಿ ಭಾಗವಹಿಸಿದ್ದ ಲಿಯೋನಾರ್ಡ್‍ಗೆ ಇದೋಂದು ಸದ್ಭುತ ಅನುಭವವಾಗಿದೆ. ಶ್ವಾನದ ಸ್ವಾಮಿ ನಿಷ್ಠೆ ಹಾಗೂ ಕಷ್ಟ ಸಹಿಷ್ಣುತೆ ಆತನಲ್ಲಿ ಬೆರಗು ಮೂಡಿಸಿದೆ. ಗೋಬಿ ಮರು ಭೂಮಿಯಲ್ಲಿ ತನ್ನ ಜೊತೆಯಾಗಿ ಸಂಚರಿಸಿದ್ದ ಈ ನಾಯಿಗೆ ಗೋಬಿ ಎಂದು ಹೆಸರಿಟ್ಟಿದ್ದಾನೆ. ಅಲ್ಲದೇ ಗೋಬಿಯನ್ನು ದತ್ತು ತೆಗೆದು ವಿಶೇಷ ಪುರಸ್ಕಾರ ಮಾಡಿದ್ದಾನೆ. ಆತನೊಂದಿಗೆ ಓಡಿ ಬಸವಳಿದಿದ್ದ ಈ ನಾಯಿಗೆ ಚೀನಾದಲ್ಲಿ ಚಿಕಿತ್ಸೆ ನೀಡಲಾಗಿದ್ದು, ತನ್ನೊಂದಿಗೆ ಕರೆದೊಯ್ಯಲು ತೀರ್ಮಾನಿಸಿದ್ದಾನೆ. ಗೋಬಿ ಹೆರಿನಲ್ಲಿ ನಿಧಿ ಸಂಗ್ರಹಿಸಿ ಆ ಮೂಲಕ ಇಂತಹ ಶ್ವಾನಗಳಿಗೆ ನೆರವಾಗುವುದು ಲಿಯೋನಾರ್ಡ್ ಉದ್ದೇಶವಾಗಿದೆ.

POPULAR  STORIES :

ಗಾಳಿಯಲ್ಲಿ ಕುಡಿಯುವ ನೀರು ಕಂಡು ಹಿಡಿದ ಮೊದಲ ಭಾರತೀಯ ಯುವಕ…!

ಪ್ರಾಣದ ಹಂಗು ತೊರೆದು ಪಾಕ್ ಧ್ವಜ ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಧೀರ ಯೋಧ.

ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!

ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!

ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!

ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...